Site icon Vistara News

Karnataka Election 2023: ಬಿಜೆಪಿ ಕದ್ದಿರುವ ಹಣ ಮತ್ತೆ ಜನರಿಗೇ ವಾಪಸ್ ಕೊಡುತ್ತೇವೆ : ರಾಹುಲ್ ಗಾಂಧಿ ಭರವಸೆ

Money stolen by BJP will be returned to people Says Rahul Gandhi

ತುರವೇಕೆರೆ, ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ತುಂಬ ಕೇವಲ ಮೋದಿ, ಮೋದಿ, ಮೋದಿ ಬಿಟ್ಟರೆ ಬೇರೆ ಏನೂ ಇರಲ್ಲ. ರಾಜ್ಯದಲ್ಲಿ ಇಷ್ಟು ವರ್ಷ ಬಿಜೆಪಿ ಜನರ ಜೇಬಿನಿಂದ ದುಡ್ಡು ಕೊಳ್ಳೆ ಹೊಡೆದಿದೆ. ಮುಂದಿನ ಐದು ವರ್ಷದವರೆಗೆ ನಮಗೆ ಅಧಿಕಾರ ಕೊಡಿ. ಬಿಜೆಪಿಯವರು ಕದ್ದಿರುವ ಹಣವನ್ನು ವಾಪಸ್ ನಿಮ್ಮ ಜೇಬಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು. ತುಮಕೂರು ಜಿಲ್ಲೆಯ ತುರುವೇಕೆರೆ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಮಾತನಾಡಿದರು(Karnataka Election 2023).

ಮಹಿಳೆಯರ ಹಣವನ್ನೇ ಬಿಜೆಪಿಯವರು ಹೆಚ್ಚು ಕದ್ದಿರೋದು. ಹಾಗಾಗಿ, ಮೊದಲ ಹೆಜ್ಜೆಯಾಗಿ ನಾವು ಎಲ್ಲಾ ಮಹಿಳೆಯರಿಗೆ 2000 ರೂ. ನೀಡುತ್ತೇವೆ. ಎರಡನೆಯದು 200 ಯುನಿಟ್ ಕರೆಂಟ್ ಫ್ರೀ ಕೊಡುತ್ತೇವೆ. 10 ಕೆಜಿ ಅಕ್ಕಿ ನೀಡುತ್ತೇವೆ. ಹೆಣ್ಣುಮಕ್ಕಳಿಗೆ ಸರ್ಕಾರಿ ಬಸ್‌ನಲ್ಲಿ ಓಡಾಡಲು ಒಂದು ರೂಪಾಯಿಯನ್ನು ತೆಗೆದುಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಹಾಗಾಗಿ ನಾವು ನಿರುದ್ಯೋಗ ಯುವಕರಿಗೆ ತಿಂಗಳಿಗೆ ಯುವ ನಿಧಿಯಲ್ಲಿ ಧನ ಸಹಾಯ ಮಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಕರ್ನಾಟಕದಲ್ಲಿ ಜನರಿಗಾಗಿ ಚುನಾವಣೆ ನಡೆಯುತ್ತಿರುವುದು ಹೊರತು ನರೇಂದ್ರ ಮೋದಿ ಅವರಿಗಾಗಿ ಅಲ್ಲ. ಇದನ್ನು ಮೋದಿ ಅವರು ಮೊದಲ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯವರಿಗೆ 40 ನಂಬರ್ ತುಂಬಾ ಇಷ್ಟ. ನೀವೆಲ್ಲ ಅವರಿಗೆ 40 ಸೀಟು ಮಾತ್ರ ಕೊಡಿ, ಕಾಂಗ್ರೆಸ್ ಪಕ್ಷಕ್ಕೆ 150 ಸೀಟು ಕೊಡಿ ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿಯವರು ನಿಮ್ಮಿಂದ ಕದ್ದ ದುಡ್ಡಿನಿಂದಲೇ ಶಾಸಕರನ್ನು ಖರೀದಿ ಮಾಡುತ್ತಾರೆ. ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ 140ರಿಂದ 150 ಸೀಟುಗಳನ್ನು ಗೆಲ್ಲಿಸಿಕೊಡಬೇಕು ಎಂದು ರಾಹುಲ್ ಗಾಂಧಿ ಅವರು ಜನರಲ್ಲಿ ಮನವಿ ಮಾಡಿದರು.

ಭಾಷಣವನ್ನ ಅರ್ಧಕ್ಕೆ ನಿಲ್ಲಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರು ಸಾರ್ವಜನಿಕ ಭಾಷಣ ಮಾಡುತ್ತಿದ್ದರು. ಈ ವೇಳೆ, ಭಾಷಣ ಮಾಡುತ್ತಿದ್ದ ಸ್ಥಳದಿಂದ ಹತ್ತಿರದಲ್ಲೇ ಇದ್ದ ಮಸೀದಿಯಿಂದ ಅಜಾನ್ ಕೇಳಿ ಬಂತು. ಆಗ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿದರು. ಕಾರ್ಯಕರ್ತರಿಗೂ ಮಾತನಾಡಿದಂತೆ ಸುಮ್ಮನಿರಲು ಹೇಳಿದರು. ಅಜಾನ್ ಮುಗಿದ ತಕ್ಷಣವೇ ಮತ್ತೆ ತಮ್ಮ ಭಾಷಣವನ್ನು ಪುನಃ ಆರಂಭಿಸಿದರು.

Karnataka Election 2023: ಪ್ರವಾಹ ಬಂದಾಗ ಎಲ್ಲಿದ್ದೀರಿ ಮೋದಿ?

ಈ ಹಿಂದೆ ಕರ್ನಾಟಕದಲ್ಲಿ ಪ್ರವಾಹ ಬಂದಾಗ ನೀವು ಜನರಿಗೆ ಏನು ಮಾಡಿದ್ದೀರಿ ಹೇಳಿ. 3 ವರ್ಷದಲ್ಲಿ ನಿಮ್ಮ ಸರ್ಕಾರ ಜನರಿಗೆ ಏನು ಮಾಡಿದೆ ಎಂಬುದನ್ನು ಹೇಳಬೇಕು. ಮುಂದೆ ಅಧಿಕಾರಕ್ಕೆ ಬಂದ್ರೆ ಏನು ಮಾಡುತ್ತೇವೆ ಎಂದು ಹೇಳಿ. ಇವೆಲ್ಲವನ್ನ ನಿಮ್ಮ ಭಾಷಣದಲ್ಲಿ ಹೇಳಿ ಮೋದಿಜಿ ಎಂದು ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಛೇಡಿಸಿದರು.

ಇದನ್ನೂ ಓದಿ: Karnataka Election 2023: ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಓಪನ್ ಮಾಡಲು ಬಂದಿದ್ದೇನೆ: ರಾಹುಲ್ ಗಾಂಧಿ

ನೀವೇನು ಕರ್ನಾಟಕಕ್ಕೆ ಮಾಡಿದ್ದೀರಾ ಎನ್ನುವುದನ್ನು ಹೇಳಿ. ನೀವು ಮತ್ತೆ ಕರ್ನಾಟಕ ಜನಕ್ಕೆ ಏನ್ ಕೊಟ್ಟಿದ್ದೀರಾ ಅಂತ ಜನರಿಗೆ ಮೊದ್ಲು ಹೇಳಿ. ಆದರೆ ನಾನು ಬೇಕಿದ್ದರೆ ಹೇಳುತ್ತೇನೆ. ರಾಜ್ಯಕ್ಕೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಏನೇನು ಕೊಟ್ಟಿದ್ದಾರೆ ಅಂತ ನಾನು ಹೇಳಬಲ್ಲೆ. ನಾನು ನಮ್ಮ ನಾಯಕರ ಹೆಸರು ಹೇಳಬಲ್ಲೆ. ನೀವು ನಿಮ್ಮ ನಾಯಕರ ಹೆಸರನ್ನು ಒಮ್ಮೆಯಾದರೂ ಹೇಳಿದ್ದೀರಾ? ಒಮ್ಮೆಯೂ ಬಿ ಎಸ್ ಯಡಿಯೂರಪ್ಪ ಹೆಸರು ಹೇಳಿಲ್ಲ. ಬಸವರಾಜ ಬೊಮ್ಮಾಯಿ ಹೆಸರು ಹೇಳಿಲ್ಲ ಎಂದು ಟೀಕಿಸಿದರು ರಾಹುಲ್ ಗಾಂಧಿ ಅವರು.

Exit mobile version