Site icon Vistara News

Monsoon 2022 | ರಾಜ್ಯಕ್ಕೆ ಮುಂಗಾರು ಬಂದರೂ ಹಿಡಿಯದ ಮಳೆಗಾಲ

karnataka rain

ಬೆಂಗಳೂರು : ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಆದರೆ ರಾಜ್ಯಕ್ಕೆ ಈಗಾಗಲೇ ಮುಂಗಾರು ಕಾಲಿಟ್ಟಿದ್ದರೂ ಮಳೆಗಾಲ ಮಾತ್ರ ಶುರುವಾದಂತೆ ಕಾಣುತ್ತಿಲ್ಲ.

ರಾಜ್ಯದ, ಮಲೆನಾಡು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧರಣ ಮಳೆ ಬೀಳುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು-ಬೀರೂರು ಸುತ್ತಮುತ್ತ 87 ಎಂಎಂ ಮಳೆ ಬಿದ್ದಿದ್ದು ಬಿಟ್ಟರೆ ಬೇರೆ ಎಲ್ಲಿಯೂ ಭಾರಿ ಮಳೆಯಾಗಿಲ್ಲ. ಇದೇ ಪರಿಸ್ಥಿತಿ ಇನ್ನೆರಡು ದಿನ ಮುಂದುವರಿಯುವ ಸಾಧ್ಯತೆಗಳಿವೆ.

ದೇಶದ ಬೇರೆಡೆ ಮಳೆ

ರಾಜ್ಯದಲ್ಲಿ ಇನ್ನೂ ಸರಿಯಾಗಿ ಮಳೆ ಬೀಳದೇ ಇದ್ದರೂ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಳೆ ಜೋರಾಗಿದ್ದು, ಅನಾಹುತಗಳ ಸಂಭವಿಸಿವೆ. ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಬಯಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಒಳ್ಳೆಯ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಕಳೆದ ಎರಡು ದಿನಗಳಿಂದ ರಾಜಸ್ಥಾನ, ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ರಾಜಸ್ಥಾನದ ಬರ್ಮರ್‌ ನಲ್ಲಿ ಬಿಟ್ಟುಬಿಡದೇ ಮಳೆಯಾಗುತ್ತಿರುವುದರಿಂದ ಹಲವೆಡೆ ಭೂ ಕುಸಿತ ಉಂಟಾಗಿದೆ. ಈಗಾಗಲೇ ಭೂ ಕುಸಿತದಿಂದಾಗಿ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ತಮ್ಮ ಮನೆಗಳನ್ನ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿದ್ದಾರೆ.

ಇದನ್ನು ಓದಿ| Karnataka Rain: ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಹಳದಿ ಅಲರ್ಟ್‌

Exit mobile version