Site icon Vistara News

ಕಂಸಾಳೆ, ವೀರಗಾಸೆ ಕಲಾವಿದರಿಗೆ ಮಾಸಾಶನ ನೀಡಿ ಎಂಬ ಒತ್ತಾಯದ ಕುರಿತು ಸಚಿವ ಸುನಿಲ್‌ ಕುಮಾರ್‌ ಪ್ರತಿಕ್ರಿಯೆ

veeragase mashasana

ಬೆಂಗಳೂರು: ಕಾಂತಾರ ಚಲನಚಿತ್ರದ ನಂತರ ನಾಡಿನಾದ್ಯಂತ ಭೂತಕೋಲದ ಕುರಿತು ಚರ್ಚೆಗಳು ನಡೆಯುತ್ತಿವೆ. ದೈವನರ್ತಕರಿಗೆ ಮಾಸಾಶನ ನೀಡುವುದಾಗಿ ಇತ್ತೀಚೆಗಷ್ಟೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಘೋಷಣೆ ಮಾಡಿದ್ದರು.

ದೈವ ನರ್ತಕರಿಗೆ ಮಾತ್ರ ಏಕೆ? ನಾಡಿನ ವಿವಿಧೆಡೆ ಕಂಸಾಳೆ, ವೀರಗಾಸೆ ಸೇರಿ ಅನೇಕ ಕಲೆಗಳನ್ನು ನಂಬಿ ಜೀವನ ಮಾಡುತ್ತಿರುವವರು ಇದ್ದಾರೆ. ಇವರಿಗೂ ಮಾಸಾಶನ ನೀಡಿ ಎಂಬ ಅಭಿಯಾನ ಆನ್‌ಲೈನ್‌ನಲ್ಲಿ ಅನೇಕರು ನಡೆಸಿದ್ದರು. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುನಿಲ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕಂಸಾಳೆ, ವೀರಗಾಸೆ ಕಲಾವಿದರಿಗೆ ಈಗಾಗಲೆ ಮಾಸಾಶನ ನೀಡುತ್ತಿದ್ದೇವೆ. ಅವರಿಗೆ ಹೊಸದಾಗಿ ಕೊಡುವ ಅವಶ್ಯಕತೆಯಿಲ್ಲ. ದೈವ ನರ್ತನ ಮಾಡುವವರು ಆ ಪಟ್ಟಿಯಲ್ಲಿ ಇರಲಿಲ್ಲ. ದೈವನರ್ತಕರನ್ನು ಪಟ್ಟಿಗೆ ಸೇರಿಸಲಾಗಿದೆ.

ಇದನ್ನೂ ಓದಿ | Head Bush | ವೀರಗಾಸೆಗೆ ಅಪಮಾನ, ಮುಂದುವರಿದ ಆಕ್ರೋಶ; ಧನಂಜಯ ಪರವೂ ಅಭಿಯಾನ

ಈಗ ಅವರಿಗೆ ಮಾಸಾಶನ ಕೊಡುವ ತೀರ್ಮಾನ ಮಾಡಿದ್ದೇವೆ. 60 ವರ್ಷ ಮೇಲ್ಪಟ್ಟ ಕಂಸಾಳೆ, ವೀರಗಾಸೆ ಕಲಾವಿದರಿಗೆ ಈಗಾಗಲೆ ಮಾಸಾಶನ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ.

ಹೆಡ್‌ಬುಶ್‌ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ಹೆಡ್ ಬುಶ್ ಸಿನಿಮಾವನ್ನು ನಾನು ನೋಡಿಲ್ಲ. ಮನರಂಜನೆಗಾಗಿ ಸಾಂಸ್ಕೃತಿಕ ಚಟುವಟಿಕೆಗೆ ಅವಮಾನ ಮಾಡುವುದು ತಪ್ಪು. ಸಿನಿಮಾ ಮಾತ್ರ ಅಲ್ಲ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಯಾವುದೇ ಅಪಮಾನ ಮಾಡುವುದು ಬೇಡ. ಚಿತ್ರ ನಿರ್ದೇಶಕರೇ ಇದನ್ನು ವಿಮರ್ಶೆ ಮಾಡಬೇಕು ಎಂದರು.

ಇದನ್ನೂ ಓದಿ | Remuneration | ವೀರಗಾಸೆಯ ಪುರವಂತರಿಗೂ ನೀಡಿ ಮಾಸಾಶನ; ಹೊಸ ಅಭಿಯಾನ ಶುರು!

Exit mobile version