ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಮುಸ್ಲಿಂ ಯುವಕನ ಮೇಲೆಯೇ ಹಲವು ಮುಸ್ಲಿಂ ಯುವಕರು ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿ, ಹಲ್ಲೆ ಮಾಡಿದ ಪ್ರಕರಣವನ್ನು (Davanagere News) ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೇ 31ರಂದು ದಾವಣಗೆರೆ ಜಿಲ್ಲೆಯ ಹರಿಹರ ನಗರದ ಬೆಂಕಿ ನಗರದ ಮದರಸಾ ಬಳಿಯ ಖಾಲಿ ಕೊಠಡಿಯಲ್ಲಿ ಹಲ್ಲೆ ನಡೆಸಲಾಗಿತ್ತು. ಈಗ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಹರಿಹರದ ಕಾಳಿದಾಸ ನಗರದ ನಿವಾಸಿ ಮಹಮ್ಮದ್ ಅಲಿ (26) ಮೇಲೆ ಏಳು ಯುವಕರು ಹಲ್ಲೆ ನಡೆಸಿದ್ದರು. ಆಸೀಫ್, ಗೌಸ್, ತೌಫಿಕ್, ಸಯ್ಯದ್, ದಾದು, ಚೋಟು, ಫಿರೋಜ್ ಎಂಬುವರು ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿದ ಏಳು ಜನರಲ್ಲಿ ನಾಲ್ವರನ್ನು ಹರಿಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂಬುದಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾಹಿತಿ ನೀಡಿದ್ದಾರೆ.
ಖಾಲಿ ಕೊಠಡಿಯಲ್ಲಿ ಯುವಕನ ಮೇಲೆ ಆರೋಪಿಗಳು ನಿರಂತರವಾಗಿ ಚಿತ್ರಹಿಂಸೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ವಿಡಿಯೊ ವೈರಲ್ ಆಗಿತ್ತು. ಯುವಕನನ್ನು ಒಬ್ಬ ಹಿಡಿದುಕೊಂಡು, ಇನ್ನೊಬ್ಬ ಹಲ್ಲೆ ನಡೆಸಿದ್ದ. ದೊಣ್ಣೆಯಿಂದ ಯುವಕನ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಆದರೆ, ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಾರಣ ಕ್ರಮ ತೆಗೆದುಕೊಳ್ಳುವಂತೆ ಜನ ಆಗ್ರಹಿಸಿದ್ದರು.
ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಪೇದೆಗೆ ಗಂಭೀರ ಗಾಯ
ಯಾದಗಿರಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಕಾನ್‌ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ-ಯಾದಗಿರಿ ಮಾರ್ಗ ಮಧ್ಯೆ ನಡೆದಿದೆ. ಯಾದಗಿರಿ ಸಂಚಾರ ಪೊಲೀಸ್ ಠಾಣೆಯ ಪೇದೆ ಹಜರತ್ ಅಲಿ ಗಾಯಾಳು. ದೋರನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿರುವ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡಿರುವ ಪೇದೆಯನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Assault Case : ಅರೆ ಬೆತ್ತಲಾಗಿ ಯುವಕನಿಗೆ ನಡು ರಸ್ತೆಯಲ್ಲೆ ಹಿಗ್ಗಾಮುಗ್ಗಾ ಥಳಿತ; ಹಲ್ಲೆಕೋರರು ಅರೆಸ್ಟ್