ಮಂಗಳೂರು: ಮಂಗಳೂರಿನಲ್ಲಿ ತಡರಾತ್ರಿ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿಗಳಿಗೆ ಬಜರಂಗ ದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಬಜರಂಗ ದಳ ಕಾರ್ಯಕರ್ತರ ನೈತಿಕ ಪೊಲೀಸ್ ಗಿರಿಯನ್ನು (Moral policing) ಪೊಲೀಸರು ಮಧ್ಯಪ್ರವೇಶಿಸಿ ತಡೆದಿದ್ದಾರೆ.
ಮಂಗಳೂರಿನ ಕೊಟ್ಟಾರ ಎಂಬಲ್ಲಿ ಈ ಘಟನೆ ನಡೆದಿದೆ. ರಾತ್ರಿ 12 ಗಂಟೆ ಸುಮಾರಿಗೆ ಇಬ್ಬರು ಮುಸ್ಲಿಂ ಯುವಕರು ಮತ್ತು ಇಬ್ಬರು ಹಿಂದೂ ಯುವತಿಯರು ಜತೆಯಾಗಿ ಸುತ್ತಾಡುತ್ತಿದ್ದರು. ಇದನ್ನು ಗಮನಿಸಿದ ಬಜರಂಗ ದಳದ ಕಾರ್ಯಕರ್ತರು ಅವರನ್ನು ತಡೆದು. ಕೆಲವರು ಅವರಿಗೆ ಹಲ್ಲೆ ನಡೆಸಲು ಮುಂದಾದರು.
ತಾವು ಹೊಟೇಲ್‌ಗೆ ಊಟಕ್ಕೆ ಬಂದಿರುವುದಾಗಿ ಜೋಡಿಗಳು ಹೇಳಿಕೊಂಡವು. ಆದರೆ, ಕಾರ್ಯಕರ್ತರು ಇದನ್ನು ಒಪ್ಪಲಿಲ್ಲ. ಈ ನಡುರಾತ್ರಿ ನಿಮಗೆ ಯಾರು ಹೋಟೆಲ್ ತೆರೆದಿಟ್ಟು ಕಾಯ್ತಾ ಇದಾರೆ ಎಂದು ಕೇಳಿ ಹಲ್ಲೆಗೆ ಮುಂದಾದರು.
ಈ ಹಂತದಲ್ಲಿ ಮಾಹಿತಿ ಪಡೆದ ಸಮೀಪದ ಉರ್ವಾ ಪೊಲೀಸರು ಧಾವಿಸಿ ಬಂದರು. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಬಳಿಕ ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿಂದ ಅವರು ವಾಸವಾಗಿದ್ದ ಮನೆಗಳಿಗೆ ಕಳುಹಿಸಲಾಯಿತು.
ಮಂಗಳೂರಿನಲ್ಲಿ ಒಂದೆರಡು ದಿನದ ಹಿಂದೆ ಕಂಕನಾಡಿಯ ಒಂದೇ ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದು, ಹಿಂದು ಯುವತಿ ಜತೆ ಆತ್ಮೀಯನಾಗಿದ್ದನೆಂಬ ಕಾರಣಕ್ಕಾಗಿ ಮುಸ್ಲಿಂ ಯವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಯುವತಿಯ ಮನೆಯವರು ಆತನಿಗೆ ಎಚ್ಚರಿಕೆ ನೀಡಲು ಜುವೆಲ್ಲರಿಗೆ ಬಂದಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಬಜರಂಗ ದಳ ಕಾರ್ಯಕರ್ತರು ಅಲ್ಲಿಗೆ ಧಾವಿಸಿ ಹಲ್ಲೆ ನಡೆಸಿದರು.
ಇದನ್ನೂ ಓದಿ | Moral policing | ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಥಳಿತ, ಸಹೋದ್ಯೋಗಿ ಯುವತಿ ಜತೆ ಆತ್ಮೀಯವಾಗಿದ್ದಕ್ಕೆ ಆಕ್ಷೇಪ