Site icon Vistara News

Haliyal News: ಶಾಲೆ ಆವರಣದಲ್ಲಿ ವಿಷಕಾರಿ ಬೀಜ ತಿಂದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

children fall ill

#image_title

ಶಿರಸಿ: ಸರ್ಕಾರಿ ಶಾಲೆಯ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು 10ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗುಂಡೊಳ್ಳಿಯಲ್ಲಿ (Haliyal News) ನಡೆದಿದೆ.

ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಶೇಂಗ ಬೀಜ ಎಂದು ಭಾವಿಸಿ ವಿಷಕಾರಿ ಬೀಜಗಳನ್ನು ಮಕ್ಕಳು ತಿಂದಿದ್ದಾರೆ. ನಂತರ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಕಾಳಗಿನಕೊಪ್ಪ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

1, 2 ಮತ್ತು 3ನೇ ತರಗತಿಯ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು. ಅವರಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Mining Mafia: ಗಣಿ ಮಾಫಿಯಾ ಅಟ್ಟಹಾಸಕ್ಕೆ ರೈತ ಬಲಿ; ವಿರೋಧಿಸಿದ್ದಕ್ಕೆ ಲಾರಿ ಹತ್ತಿಸಿ ಕೊಲೆ

ಯುವತಿಯ ಮೊಬೈಲ್ ಕದ್ದು ಪರಾರಿಯಾಗಿದ್ದ ಯುವಕನ ಬಂಧನ

ಬೀದರ್: ಹಾಡಹಗಲೇ ಯುವತಿಯ ಮೊಬೈಲ್ ಕದ್ದು ಪರಾರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ಬೈಕ್‌ನಲ್ಲಿ ಬಂದ ಆರೋಪಿ ಮೊಬೈಲ್ ಕದ್ದು ಪರಾರಿಯಾಗಿದ್ದ.

ನಗರದ ಫತ್ತೆ ದರ್ವಾಜಾ ಸರ್ಕಲ್ ಬಳಿ ಯುವಕನನ್ನು ಬಂಧಿಸಲಾಗಿದೆ. ಪತ್ತೆ ದರ್ವಾಜಾ ಬಳಿಯೇ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಘಟನೆ ಸಿಸಿಟಿವಿಯಲ್ಲಿ‌ ಸೆರೆಯಾಗಿತ್ತು. ಸಿಸಿಟಿವಿ ಸಾಕ್ಷ್ಯ ಆಧರಿಸಿ ಕಳ್ಳನನ್ನು ಪೊಲೀಸರು ಬಂಧಿಸಿ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.

Exit mobile version