Site icon Vistara News

Bus Accident: ರಸ್ತೆ ಬದಿಯ ನಾಲೆಗೆ ಬಸ್ ಉರುಳಿ 10ಕ್ಕೂ ಹೆಚ್ಚು ಮಂದಿಗೆ ಗಾಯ

Bus Accident

#image_title

ಮಂಡ್ಯ: ತಾಲೂಕಿನ ಡಣಾಯಕನಪುರ ಬಳಿ ರಸ್ತೆ ಬದಿ ನಾಲೆಗೆ ಬಸ್ ಉರುಳಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ (Bus Accident) ನಡೆದಿದೆ. ಶಿವಾರ ಮಾರ್ಗದ ಗಾರ್ಮೆಂಟ್ಸ್ ನೌಕರರನ್ನು ಕರೆತರುತ್ತಿದ್ದಾಗ ಶುಕ್ರವಾರ ಅಪಘಾತ ನಡೆದಿದೆ. ಚಾಲಕ ಸೇರಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇವರಲ್ಲಿ ಹಲವರಿಗೆ ಕೈ-ಕಾಲು ಮುರಿದು, ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case: ಕ್ರೀಡಾಂಗಣದಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತಾ?; ಯುವಕರಿಬ್ಬರಿಗೆ ಚಾಕು ಇರಿದು ಪರಾರಿ

6 ತಿಂಗಳ ಚಿರತೆ ಮರಿಯ ರಕ್ಷಣೆ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಗೇರೆಹಳ್ಳಿಯಲ್ಲಿ 6 ತಿಂಗಳ ಚಿರತೆ ಮರಿಯನ್ನು ಸೆರೆ ಹಿಡಿಯಲಾಗಿದೆ. ಹುಟ್ಟು ಅಂಧತ್ವ ಹಾಗೂ ಹಿಂಗಾಲು ಮತ್ತು ಬಾಲ ಮುರಿತದಿಂದ ಬಳಲುತ್ತಿದ್ದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ವೈದ್ಯರು ರಕ್ಷಣೆ ಮಾಡಿದ್ದಾರೆ.

ಗೇರೆಹಳ್ಳಿ ಗ್ರಾಮಸ್ಥರು ಚಿರತೆ ಮರಿಯನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಡಾಕ್ಟರ್ ಉಮಾಶಂಕರ್ ನೇತೃತ್ವದ ತಂಡ ಆಗಮಿಸಿ ಅಂಧ ಚಿರತೆ ಮರಿಯನ್ನು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ. ರಕ್ಷಿಸಲ್ಪಟ್ಟ ಚಿರತೆ ಮರಿಗೆ ಬನ್ನೇರುಘಟ್ಟ ರೆಸ್ಕ್ಯೂ ಸೆಂಟರ್‌ನಲ್ಲಿ ಆರೈಕೆ ಮಾಡಲಾಗುತ್ತಿದೆ.

Exit mobile version