Site icon Vistara News

ಪೀರ್‌ಪಾಷಾ ಬಂಗ್ಲೆ ಪರಿವೀಕ್ಷಣೆಗೆ 20ಕ್ಕೂ ಹೆಚ್ಚು ಮಠಾಧೀಶರ ಮನವಿ

ಬಸವರಾಜ ಬೊಮ್ಮಾಯಿ

ಬೀದರ್‌: ವಿಶ್ವದ ಪ್ರಪ್ರಥಮ ಸಂಸತ್ತು ಎಂಬ ಖ್ಯಾತಿ ಪಡೆದ ಅನುಭವ ಮಂಟಪ ಈಗಿನ ಪೀರ್‌ಪಾಷಾ ಬಂಗ್ಲೆಯಾಗಿದ್ದು, ತಕ್ಷಣವೇ ಸಂರಕ್ಷಣೆ ಮಾಡುವುದರೊಂದಿಗೆ ಭಾರತೀಯ ಪುರಾತತ್ವ ಇಲಾಖೆಯಿಂದ ಪರಿವೀಕ್ಷಣೆ ಮಾಡಿಸಬೇಕು ಎಂದು ರಾಜ್ಯದ 20ಕ್ಕೂ ಹೆಚ್ಚು ಮಠಾಧೀಶರು ಆಗ್ರಹಿಸಿದ್ದಾರೆ. ಬೀದರ್‌ನ ತಡೋಳ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಸವಕಲ್ಯಾಣವು 12 ನೇ ಶತಮಾನದಲ್ಲಿ ಶರಣರ ನಾಡಾಗಿತ್ತು. ಅನುಭವ ಮಂಟಪದ ಮುಖಾಂತರ ವಿಶ್ವದ ಮೊದಲ ಸಂಸದೀಯ ವ್ಯವಸ್ಥೆ ಹುಟ್ಟುಹಾಕಿದ್ದು, ರಾಜ್ಯದ ಹೆಮ್ಮೆಯ ವಿಚಾರ. ಬಸವಾದಿ ಶರಣರು ಅನುಭವ ಮಂಟಪ ಮುಖಾಂತರ ವಿಶ್ವದ ಪ್ರಪ್ರಥಮ ಸಂಸದೀಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದು. ಅಂಗೈಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ. ವಿಚಾರ ಮತ್ತು ಸಂಸ್ಕೃತಿ ಎತ್ತಿ ಹಿಡಿದಿದ್ದರು. ಜಾತಿ ವ್ಯವಸ್ಥೆ ವಿರುದ್ಧ ಪ್ರಪ್ರಥಮವಾಗಿ ಹೋರಾಡಿದ ಕಾಲ ಕೂಡ ಅದಾಗಿತ್ತು.

ಇದನ್ನೂ ಓದಿ | ಅನುಭವ ಮಂಟಪ ಪೀರ್‌ಬಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ

ಹೆಚ್ಚು ನಿಖರ ವಿಷಯಗಳನ್ನು ಜಗತ್ತಿಗೆ ತಿಳಿಸಬೇಕಾದರೆ ನಿರಂತರ ಸಂಶೋಧನೆ ಅವಶ್ಯಕತೆಯಿದೆ. ಸಂಬಂಧಪಟ್ಟ ಇಲಾಖೆಗಳನ್ನು ಒಟ್ಟುಗೂಡಿಸಿ ಒಂದು ಸಂಶೋಧನಾ ಕೇಂದ್ರವನ್ನು ಬಸವಕಲ್ಯಾಣದಲ್ಲಿ ಸ್ಥಾಪಿಸಬೇಕು ಒತ್ತಾಯಿಸಿದರು.

ವಿಶ್ವದ ಪ್ರಪ್ರಥಮ ಸಂಸತ್ತಾದ ಅನುಭವ ಮಂಟಪದೊಂದಿಗೆ ಶರಣರ ಕುರುಹು ಇರುವ ಸ್ಥಳಗಳನ್ನು ಗುರುತಿಸಿ ಅನುಭವ ಮಂಟಪ ಕಾರಿಡಾರ್ ಯೋಜನೆ ಹಾಕಿಕೊಳ್ಳಬೇಕು. ವಿಶ್ವದ ಸ್ಮಾರಕ ಮಾಡಲು ₹5,000 ಕೋಟಿ ಅನುದಾನದ ನೆರವನ್ನು ಬಜೆಟ್‌ನಲ್ಲಿ ಕಾದಿರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿಯೋಗ ಮನವಿ ಮಾಡಿತು.

ಇದನ್ನೂ ಓದಿ: ಬಸವ ಜಯಂತಿ: ಭಕ್ತಿ ಭಂಡಾರಿ ಬಸವಣ್ಣನವರ ನೆನಪು, ಸಂದೇಶ

Exit mobile version