ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ವರ್ಷದ ಪುತ್ರನೊಂದಿಗೆ ತಾಯಿ ನದಿಗೆ ಹಾರಿದ ಘಟನೆ ರಾಮದುರ್ಗ ಪಟ್ಟಣದಲ್ಲಿ ನಡೆದಿದ್ದು, ತಾಯಿ-ಮಗುವಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ರುದ್ರವ್ವ ಬಸವರಾಜ್ ಬನ್ನೂರು (30) ಶಿವಲಿಂಗಪ್ಪ ಬನ್ನೂರ (2) ನದಿಗೆ ಹಾರಿದವರು. ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ಮಗುವಿನ ಜತೆಗೆ ರುದ್ರವ್ವ ಹಾರಿದ್ದಾರೆ.
ಕೌಟುಂಬಿಕ ಕಲಹ ಕಾರಣ?
ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಗಂಡನ ಮೇಲೆ ರುದ್ರವ್ವ ಮುನಿಸು ಹೊಂದಿದ್ದರು. ಈ ಕಾರಣಕ್ಕೆ ಇಡಗುಂಡಿಯಲ್ಲಿರುವ ತವರು ಮನೆಯಲ್ಲಿ ವಾಸವಿದ್ದರು. ಆದರೆ, ಪತಿ ಬಸವರಾಜ್ ರುದ್ರವ್ವ ಅವರ ಮನವೊಲಿಸಿ ಮನೆಗೆ ಕರೆತಂದಿದ್ದರು.
ಈ ವೇಳೆ ಆಟೋದಲ್ಲಿ ಮನೆಗೆ ಬಂದಿದ್ದಾರೆ. ಆಟೋಗೆ ಚಿಲ್ಲರೆ ಕೊಡಬೇಕೆಂದು ಬಸವರಾಜ್ ಮನೆಯೊಳಗೆ ಹೋದಾಗ ಮಗುವನ್ನು ಕರೆದುಕೊಂಡ ರುದ್ರವ್ವ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಹರಿಯುತ್ತಿದ್ದ ಮಲಪ್ರಭಾ ನದಿ ಬಳಿಗೆ ಹೋಗಿದ್ದಾರೆ. ನದಿ ಪಕ್ಕ ಚಪ್ಪಲಿ ಬಿಟ್ಟು ಮಗುವಿನೊಂದಿಗೆ ನದಿಗೆ ಹಾರಿದ್ದಾರೆ.
ತಾಯಿ-ಮಗು ನದಿಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರುತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನದಿಯ ಪಕ್ಕದಲ್ಲಿರುವ ಚಪ್ಪಲಿ ನನ್ನ ಪತ್ನಿಯದ್ದು ಎಂದು ಬಸವರಾಜ್ ಗುರುತು ಹಿಡಿದಿದ್ದಾರೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ತಾಯಿ-ಮಗುವಿಗಾಗಿ ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ | Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು