Site icon Vistara News

Illicit Relationship: ಪಾತ್ರೆ ಕೊಳ್ಳಲು ಬಂದವನ ಜತೆ ಅನೈತಿಕ ಸಂಬಂಧ: ಪ್ರಶ್ನಿಸಿದ ಮಗನನ್ನೇ ಕೊಂದ ತಾಯಿ!

Belagavi murder

#image_title

ಬೆಳಗಾವಿ: ಅಕ್ರಮ ಸಂಬಂಧಗಳಲ್ಲಿ (Illicit relationship) ಕೆಲವೊಮ್ಮೆ ಹುಟ್ಟಿಕೊಳ್ಳುವ ಹುಚ್ಚು ವ್ಯಾಮೋಹ ಅದೆಷ್ಟು ಗಾಢವಾಗಿರುತ್ತದೆ ಎಂದರೆ ಅದಕ್ಕೆ ಅಡ್ಡಿಪಡಿಸಿದ ಎಲ್ಲರನ್ನೂ ಕೊಂದಾದರೂ ಸರಿ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂಬಷ್ಟು. ಅದಲ್ಲದೆ ಹೋಗಿದ್ದರೆ ವಯಸ್ಸಿಗೆ ಬಂದ ಮಗನನ್ನು ಮನೆಯಲ್ಲಿಟ್ಟುಕೊಂಡು ತಾಯಿಯಾದವಳು ಪ್ರಿಯಕರನ (Lover) ಜತೆ ಸುತ್ತಾಡಲು ಹೋಗುವುದು ಸಾಧ್ಯವಿರಲಿಲ್ಲ. ಒಂದೊಮ್ಮೆ ಸಾಧ್ಯವಿದ್ದರೂ ಇಂಥ ಸಂಬಂಧ ಯಾಕಮ್ಮ ಎಂದು ಕೇಳಿದ 22 ವರ್ಷದ ಮಗನನ್ನೇ ಕೊಂದು (mother kills son) ತನ್ನ ಅನೈತಿಕ ಸಂಬಂಧವನ್ನು ಉಳಿಸಿಕೊಳ್ಳಲು ಮುಂದಾಗುತ್ತಿರಲಿಲ್ಲ.

ಅವಳ ಹೆಸರು ಸುಧಾ ಬೋಸಲೆ. ವಯಸ್ಸು ಸುಮಾರು 45 ಇರಬಹುದು. ಅವಳ ಮಗನ ಹೆಸರು ಹರಿಪ್ರಸಾದ್‌ ಬೋಸಲೆ. ವಯಸ್ಸು 22. ಇನ್ನೂ ಸರಿಯಾದ ಉದ್ಯೋಗವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದ.

ಅವರು ವಾಸವಾಗಿದ್ದದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ. ಮೇ 28ರಂದು ಹರಿಪ್ರಸಾದ್‌ ಬೋಸಲೆ ಮಲಗಿದಲ್ಲೇ ಮೃತಪಟ್ಟಿದ್ದ. ಬೆಳಗ್ಗೆ ಬೆಳಗ್ಗೆ ಸುಧಾ ಬೋಸಲೆ ಪೊಲೀಸ್‌ ಠಾಣೆಗೆ ಫೋನ್‌ ಮಾಡಿದ್ದರು. ಮಗ ನ ಡೆತ್‌ ಆಗಿದೆ ಅಂತ. ಹಾರ್ಟ್‌ ಅಟ್ಯಾಕ್‌ ಆಗಿದೆ ಎಂದು ಆ ಕ್ಷಣದಲ್ಲಿ ಷರಾ ಬರೆಯಲಾಗಿತ್ತು.

ಆದರೆ, ಪೊಲೀಸರಿಗೆ ಆವತ್ತೇ ಒಂದು ಸಣ್ಣ ಸಂಶಯವೊಂದು ಬಂದಿತ್ತು. ಯಾಕೆಂದರೆ ಆತನ ಕತ್ತಿನಲ್ಲಿ ಕಲೆಗಳು ಇರುವುದು ಅವರ ಕಣ್ಣಿಗೆ ಕಂಡಿತ್ತು. ರಾಯಬಾಗ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ವಿಚಾರಣೆಯ ವೇಳೆ ಹೊರಗೆ ಬಂದ ಸತ್ಯಗಳೇ ಬೇರೆ. ಆತ ಹೃದಯಾಘಾತದಿಂದ ಮೃತಪಟ್ಟಿರಲಿಲ್ಲ. ಬದಲಾಗಿ ಸುಧಾ ಬೋಸಲೆಯೇ ತನ್ನ ಮಗನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು!

ಅವನಿಗಾಗಿ ಈ ಕೊಲೆ ಮಾಡಿದ್ದಳು!

ನಿಜವೆಂದರೆ ಅವರೇನೂ ಶ್ರೀಮಂತರಲ್ಲ. ಸುಧಾ ಒಂದು ಪಾತ್ರೆ ಅಂಗಡಿ ಇಟ್ಟುಕೊಂಡು ಜೀವ ಕಟ್ಟಿಕೊಳ್ಳುತ್ತಿದ್ದಳು. ಕೆಲವು ಸಮಯದ ಹಿಂದೆ ಆಕೆಯ ಅಂಗಡಿಗೆ ಪಾತ್ರೆ ಕೊಳ್ಳಲೆಂದು ಒಬ್ಬ ಬಂದಿದ್ದ. ಅವನ ಹೆಸರು ಕುಮಾರ್‌. ಆವತ್ತು ಅವನು ಕೊಂಡುಕೊಂಡಿದ್ದ ಪಾತ್ರೆಯನ್ನಷ್ಟೇ ಅಲ್ಲ. ಸುಧಾ ಬೋಸಲೆಯ ಮನಸ್ಸನ್ನೂ ಕದ್ದಿದ್ದ. 45ರ ವಯಸ್ಸಿನಲ್ಲಿ ಸಂಗಾತಿಗೆ ಕಾತರಿಸುತ್ತಿದ್ದ ಸುಧಾ ಅವನಲ್ಲಿ ಪ್ರಿಯಕರನನ್ನು ಕಂಡಿದ್ದಳು. ಹೀಗೆ ಅವರಿಬ್ಬರ ನಡುವೆ ಆಗಾಗ ಸಂಬಂಧಗಳು ಏರ್ಪಡುತ್ತಿದ್ದವು.

ಈ ಅನೈತಿಕ ಸಂಬಂಧವನ್ನು ಮಗ ಹರಿಪ್ರಸಾದ್‌ಗೆ ಗೊತ್ತಾಗಿ ಆತ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವಿಚಾರದಲ್ಲಿ ಅವರಿಬ್ಬರ ನಡುವೆ ಕೆಲವು ಬಾರಿ ಜಗಳವೂ ಆಗಿತ್ತು. ಆಗ ಸುಧಾಗೆ ಸಿಟ್ಟು ತಲೆಗೇರಿತ್ತು. ಇದನ್ನು ನಿವಾರಿಸಿಕೊಳ್ಳಲು ಆಕೆ ನಿರ್ಧರಿಸಿದಾಗ ಕುಮಾರ್‌ ಕೂಡಾ ಸಹಾಯಕ್ಕೆ ನಿಂತಿದ್ದ. ಹಾಗೆ ಅವರೆಲ್ಲ ಸೇರಿ ಹರಿಪ್ರಸಾದ್‌ನನ್ನು ಕೊಲೆ ಮಾಡಲು ನಿರ್ಧರಿಸಿದರು. ಮತ್ತು ಪ್ಲ್ಯಾನ್‌ ಮಾಡಿ ಕೊಂದೇ ಬಿಟ್ಟರು.

ಆರೋಪಿಗಳನ್ನು ಕರೆತಂದು ಸ್ಥಳ ಮಹಜರು

ಈ ಕೊಲೆಯಲ್ಲಿ ತಾಯಿ ಮಾತ್ರವಲ್ಲ, ಪ್ರಿಯಕರ ಕುಮಾರ್‌, ಆಕೆಯ ತಮ್ಮ, ದೊಡ್ಡಮ್ಮ ಕೂಡಾ ಸೇರಿಕೊಂಡಿರುವುದು ಬೆಳಕಿಗೆ ಬಂದಿದೆ. ತಾಯಿ ಸುಧಾ ಬೋಸಲೆ, ಪ್ರಿಯಕರ ಕುಮಾರ್ ಬಬಲೇಶ್ವರ, ದೊಡ್ಡಮ್ಮ ವೈಶಾಲಿ ಮಾನೆ, ಸಹೋದರ ಗೌತಮ್ ಮಾನೆ, ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಎಂಟು ಜನ ಇದರಲ್ಲಿ ನಾನಾ ರೂಪದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ತಾಯಿ ಸುಧಾ, ದೊಡ್ಡಮ್ಮ ವೈಶಾಲಿ, ಗೌತಮ್ ಸೇರಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಕುಮಾರ್ ಬಬಲೇಶ್ವರ್, ಇತರ ಆರೋಪಿಗಳಿಗೆ ಶೋಧ ಮುಂದುವರಿದಿದೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಇಟ್ಕೊಂಡವನಿಗಾಗಿ ಕಟ್ಕೊಂಡ ಗಂಡನಿಗೆ ಚಟ್ಟ ಕಟ್ಟಿದಳು; ಪ್ರಾಣ ಸ್ನೇಹಿತರೇ ಉಸಿರು ನಿಲ್ಲಿಸಿದ್ರು!

Exit mobile version