Site icon Vistara News

ತಾವೇ ಕರೆಸಿಕೊಂಡ ಇನ್ಸ್‌ಪೆಕ್ಟರನ್ನು ತೆಗಳಿದ ಶಾಸಕ: ಎಂ.ಪಿ. ಕುಮಾರಸ್ವಾಮಿ ಹೇಳಿಕೆ ಕುತೂಹಲ

ಚಿಕ್ಕಮಗಳೂರು : ತಾಲ್ಲೂಕಿನ ಮಲ್ಲಂದೂರು ಪೊಲೀಸ್‌ ಠಾಣೆಯಲ್ಲಿ ಹೊಸದಾಗಿ ಇನ್ಸ್‌ಪೆಕ್ಟರ್‌ ಆಗಿ ಚಾರ್ಚ್‌ ತೆಗೆದುಕೊಂಡಿದ್ದ ರವೀಶ್‌ ಅವರನ್ನು ಶಾಸಕರು ನಿಂದಿಸಿದ್ದ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಈ ವಿಚಾರವಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿಕೊಳ್ಳುವುದರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದು ರವೀಶ್‌ ಅವರನ್ನೇ ನೇಮಿಸಿಕೊಡುವಂತೆ ಕೇಳಿದ್ದ ಕುಮಾರಸ್ವಾಮಿ ಇದೀಗ ಅದೇ ಇನ್ಸ್‌ಪೆಕ್ಟರ್‌ ವಿರುದ್ಧ ಹರಿಹಾಯುವುದಲ್ಲೆದೆ, ಜಾತಿ ವಿಚಾರವನ್ನೂ ಎಳೆದುತಂದಿದ್ದಾರೆ.

ನನ್ನ ವಿರೋಧಿಗಳು ನನ್ನನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಈ ಹಿಂದೆ ಕೂಡ ರವೀಶ್‌ ನನ್ನ ಬಳಿ ಬಂದಿದ್ದರು. ನೀವು ಮಂಡ್ಯದವರು, ಮಲ್ಲಂದೂರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ಸಂಬಾಳಿಸುವುದು ಕಷ್ಟ ಎಂದೇಳಿ ಕಳಿಸಿದ್ದೆ. ನನ್ನ ಗಮನಕ್ಕೆ ಬಾರದೆ ನನ್ನ ಕ್ಷೇತ್ರದ ಠಾಣೆಗೆ ಬಂದಿದ್ದಾರೆ. ನಮ್ಮ ಕಾರ್ಯಕರ್ತರು, ಮತದಾರರು ನನ್ನ ಮೇಲೆ ಒತ್ತಡ ಹಾಕಿದ್ದು, ನಾನೇ ಮಾತನಾಡಬೇಕು. ಠಾಣೆ ವಿಚಾರವಾಗಿ ದಿನನಿತ್ಯ ಹತ್ತಾರು ಕರೆಗಳು ಬರುತ್ತವೆ. ಎಲ್ಲವನ್ನೂ ನಾನೇ ಖುದ್ದು ನಿವಾರಣೆ ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ಒಕ್ಕಲಿಗರ ನಿರ್ದೇಶನದಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ನನ್ನ ವಿರೋಧಿಗಳು ಹೆಣೆದಿರುವ ಕುತಂತ್ರ ಎಂದು ಫೇಸ್ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವುದರ ಮೂಲಕ ಸಮಜಾಯಿಸಿ ಕೊಟ್ಟಿದ್ದಾರೆ.

ಆದರೆ, ರವೀಶ್‌ ಅವರನ್ನು ಮಲ್ಲಂದೂರು ಪೊಲೀಸ್‌ ಠಾಣೆಗೆ ರವೀಶ್‌ ಅವರನ್ನು ನೇಮಿಸಿಕೊಡುವಂತೆ ಸ್ವತಃ ಎಂ.ಪಿ ಕುಮಾರಸ್ವಾಮಿ ಅವರೇ ಪತ್ರ ಬರೆದಿದ್ದರು ಎನ್ನುವುದು ಅಚ್ಚರಿ ಮೂಡಿಸಿದೆ. ಎಪ್ರಿಲ್‌ 22ರಂದು ಕುಮಾರಸ್ವಾಮಿ ಬರೆದ ಪತ್ರ ಈಗ ಬಹಿರಂಗವಾಗಿದೆ. ಆಗ ಪತ್ರ ಬರೆದ ಶಾಸಕರು ಈಗ ಯು ಟರ್ನ್‌ ತೆಗೆದುಕೊಂಡಿದ್ದಾರೆ. PSIಗೆ ಕರೆ ಮಾಡಿ ಚಾರ್ಜ್ ತೆಗೆದುಕೊಳ್ಳಬೇಡ ಅಂದಿದ್ಯಾಕೆ? ಇದೀಗ ಏನೇನೋ ಬರೆದು ಪೊಳ್ಳು ಸಮರ್ಥನೆ ಕೊಡುತ್ತಿರೋದಾದ್ರೂ ಯಾಕೆ.? ಎಂಬ ಅನುಮಾನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ | ಪೊಲೀಸ್‌ ವರ್ಗಾವಣೆಯಲ್ಲೂ ಲಂಚ : ಬಿಜೆಪಿ ಶಾಸಕನ ಬಾಯಿಂದಲೇ ಹೊರಬಂದ ಸತ್ಯ !

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರಿನ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ʼಅಧಿಕಾರಿಗಳನ್ನ ತುಚ್ಛವಾಗಿ ಕಾಣುವುದು ಯಾರಿಗೂ ಶೋಭೆ ತರಲ್ಲ. ಪಿಎಸ್ಐ ವಿರುದ್ಧ ಅವಾಚ್ಯ ಶಬ್ದ ಬಳಕೆ ಶಾಸಕರ ಸ್ಥಾನಕ್ಕೆ ಗೌರವ ತರುವುದಿಲ್ಲ. ಇಂತಹ ಅಧಿಕಾರಿಯೇ ನಮಗೆ ಬೇಕು ಅಂತ ಹಾಕಿಸಿಕೊಳ್ಳುವುದು ತಪ್ಪು. ಈ ರೀತಿಯಾದಾಗ ದಕ್ಷತೆ ಹೊರಟು ಹೋಗುತ್ತದೆ. ಪೊಲೀಸ್ ಅಧಿಕಾರಿ ನನ್ನ ಮರ್ಜಿಯಲ್ಲಿ ಇರಬೇಕೆಂದು ಬಯಸೋದೆ ತಪ್ಪು. ಅಧಿಕಾರಿಗಳಿಗೆ ಸಂಬಳ ಕೊಡೋದು ಜನರ ತೆರಿಗೆ ಹಣದಿಂದ .ಅಧಿಕಾರಿಗಳು ಯಾರು ಕೂಡ ಒಂದು ಪಕ್ಷಕ್ಕೆ ಸೇರಿದವರಲ್ಲ. ಮತ್ತು ಶಾಸಕ ಕುಮಾರಸ್ವಾಮಿ ಕೂಡಲೇ ಅಧಿಕಾರಿಯ ಬಳಿ ಕ್ಷಮೆ ಕೇಳಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಸಾ.ರಾ.ಮಹೇಶ್‌ ವಿರುದ್ಧ ಭೂ ಅಕ್ರಮ ದಾಖಲೆ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ ಗಂಗರಾಜು



Exit mobile version