Site icon Vistara News

MPS | ವಿದ್ಯುತ್‌ ಅಗತ್ಯಗಳ ಪೂರೈಕೆಯಲ್ಲಿ ಮೀನಾಕ್ಷಿ ಪವರ್‌ ಸೊಲ್ಯೂಶನ್‌ ಮುಂಚೂಣಿ

Meenakshi power solution

ಬೆಂಗಳೂರು: ಮೀನಾಕ್ಷಿ ಪವರ್ ಸೊಲ್ಯೂಷನ್ (MPS) ಬೆಂಗಳೂರು ಮೂಲದ ಸಂಸ್ಥೆಯಾಗಿದ್ದು, 2004ರಲ್ಲಿ ಸ್ಥಾಪನೆಯಾಗಿದೆ. ವೃತ್ತಿಪರವಾಗಿ ನಿರ್ವಹಿಸಲ್ಪಡುವ, ತಾಂತ್ರಿಕವಾಗಿ ಸಮರ್ಥವಾದ ಕಂಪನಿ ಎಂಬ ಖ್ಯಾತಿ ಮೀನಾಕ್ಷಿ ಪವರ್ ಸೊಲ್ಯೂಶನ್‌ ಹೊಂದಿದ್ದು, ದೇಶ-ವಿದೇಶಗಳಲ್ಲಿ ತನ್ನ ಸೇವಾ ವ್ಯಾಪ್ತಿಯನ್ನು ಹೊಂದಿದೆ.

ಆಧುನಿಕ ಯುಗದ ವಿದ್ಯುತ್‌ ಅಗತ್ಯಗಳನ್ನು ಪೂರೈಸುವ ಕಂಪನಿ ಇದಾಗಿದ್ದು, ಪವರ್ ಇಂಡಸ್ಟ್ರಿ ಲೋಕದಲ್ಲಿ ಹಲವು ವರ್ಷಗಳ ಪರಿಣತಿ ಹೊಂದಿದೆ. ಭಾರತ ಮತ್ತು ವಿದೇಶಗಳಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳಿಗೆ ವಿದ್ಯುತ್ ಉಪಕರಣಗಳು ಹಾಗೂ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಿದ್ದು, ಈ ಕ್ಷೇತ್ರದಲ್ಲಿ 19 ವರ್ಷಕ್ಕೂ ಅಧಿಕ ಅನುಭವ ಹೊಂದಿದೆ.

ಪವರ್‌ ಪ್ರಾಡಕ್ಟ್‌ ಮತ್ತು ಇಂಡಸ್ಟ್ರಿಯಲ್‌ ಬ್ಯಾಟರಿಗಳು, ಪವರ್‌ ಗುಣಮಟ್ಟ ಲೆಕ್ಕಪರಿಶೋಧಣೆ, ಬ್ಯಾಟರಿ ನಿರ್ವಹಣಾ ವ್ಯವಸ್ಥೆ, ಫ್ರೀಕ್ವೆನ್ಸಿ ಕನ್ವರ್ಟರ್‌ ಮತ್ತು ಐಸೋಲೇಷನ್‌ ಟ್ರಾನ್ಸ್‌ಫಾರ್ಮರ್‌ಗಳು, ಡೇಟಾ ಸೆಂಟರ್‌ ಮತ್ತು ಐಟಿ ಸೊಲ್ಯೂಶನ್‌, ಎಎಂಸಿ ಹಾಗೂ ಬಾಡಿಗೆ ಸೇವೆಗಳು ಮೀನಾಕ್ಷಿ ಪವರ್‌ ಸೊಲ್ಯೂಶನ್‌ ನೀಡುವ ಪ್ರಮುಖ ಸೇವೆಗಳಾಗಿವೆ.

MPSನಲ್ಲಿರುವ ತಂಡವು ಗ್ರಾಹಕರ ಸಂತೃಪ್ತಿಗೆ ಬದ್ಧವಾಗಿದ್ದು, ದಿನದ 24 ಗಂಟೆ ಹಾಗೂ ವರ್ಷದ 365 ದಿನಗಳೂ ಸೇವೆ ಸಲ್ಲಿಸುವ ಭರವಸೆ ನೀಡುತ್ತದೆ. ತನ್ನ ಗ್ರಾಹಕರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಮೂಲಕ ಅವರ ಯಶಸ್ಸಿನ ಭಾಗವಾಗುವುದೇ ಎಂಪಿಎಸ್‌ನ ಕಾರ್ಯತತ್ಪರತೆಗೆ ಉದಾಹರಣೆ.
ಯಾವುದೆಲ್ಲ ಸೇವೆಗಳು

ವಿದ್ಯುತ್‌
(ಯುಪಿಎಸ್‌ ಹಾಗೂ ಬ್ಯಾಟರಿಗಳು, ಡೀಸೆಲ್‌ ಜನರೇಟರ್‌ಗಳು, ಡಾಟಾ ಸೆಂಟರ್‌ ಎಲೆಕ್ಟ್ರಿಕಲ್‌ ಕೇಬಲಿಂಗ್‌ ಹಾಗೂ ಲೈಟಿಂಗ್‌)

ಸೇಫ್ಟಿ ಮತ್ತು ಸೆಕ್ಯುರಿಟಿ
(ಫೈರ್‌ ಎಕ್ಸ್‌ಟಿಂಗ್ಯುಶರ್‌ಗಳು, ಮಾನಿಟರಿಂಗ್‌ ಸಿಸ್ಟಮ್‌, ಸಿಸಿಟಿವಿ ಸಿಸ್ಟಮ್‌, ಆಕ್ಸೆಸ್‌ ಕಂಟ್ರೋಲ್‌ ಸಿಸ್ಟಮ್‌, ಡಾಟಾ ಸೇಫ್‌)

ಇನ್‌ಫ್ರಾಸ್ಟ್ರಕ್ಚರ್‌
(ಎತ್ತರಿಸಿದ ಆಕ್ಸೆಸ್‌ ಫ್ಲೋರಿಂಗ್‌, ನೆಟ್ವರ್ಕ್‌ ಹಾಗೂ ಸರ್ವರ್ ಕ್ಯಾಬಿನೆಟ್‌ಗಳು, ಡಾಟಾ ಕಮ್ಯುನಿಕೇಷನ್‌ ಕೇಬಲಿಂಗ್‌, ಸ್ಟ್ರಕ್ಚರ್‌ ಕೇಬಲಿಂಗ್‌, ಫೈರ್‌ ಫ್ರೂಫ್‌ ಡೋರ್‌ಗಳು ಹಾಗೂ ಪಾರ್ಟಿಶಿಯನ್‌ಗಳು)

ಕೂಲಿಂಗ್‌
(ಕ್ಲೋಸ್‌ ಕಂಟ್ರೋಲ್‌ ಏರ್‌ ಕಂಡೀಷನರ್‌ಗಳು, ರಾಕ್‌ ಕೂಲಿಂಗ್‌, ಮಾಡ್ಯುಲರ್‌ ಕೂಲಿಂಗ್‌)

ಮಾನಿಟರಿಂಗ್‌
(ಸರ್ವರ್‌ ಎನ್ವಾಯರ್‌ಮೆಂಟ್‌, ವಾಟರ್‌ ಲೀಕ್‌ ಡಿಟೆಕ್ಷನ್‌ ಸಿಸ್ಟಮ್‌)

25 ವರ್ಷಗಳ ಅನುಭವ

ಮೀನಾಕ್ಷಿ ಪವರ್ ಸೊಲ್ಯೂಷನ್ಸ್ ಪವರ್ ಎಲೆಕ್ಟ್ರಾನಿಕ್ ಎಂಜಿನಿಯರ್‌ಗಳ ತಂಡವಾಗಿದೆ ಮತ್ತು ಭಾರತದ ಪ್ರಮುಖ ಪವರ್ ಎಲೆಕ್ಟ್ರಾನಿಕ್ಸ್ ಕಂಪನಿಯೊಂದನ್ನು ನಿರ್ಮಿಸಿರುವ 25 ವರ್ಷಗಳ ಅನುಭವ ಹೊಂದಿದೆ. ಎಂಪಿಎಸ್‌ನ ಪ್ರಧಾನ ತಂಡ, ಭಾರತ ಮತ್ತು ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾದ ದೇಶಗಳಲ್ಲಿ ಡಿಸೈನಿಂಗ್, ಎಂಜಿನಿಯರಿಂಗ್, ಉತ್ಪಾದನೆ, ಮಾರ್ಕೆಟಿಂಗ್ ಮತ್ತು ಸರ್ವಿಸಿಂಗ್ ಸ್ಟೇಟ್ ಆಫ್ ಆರ್ಟ್ ಪವರ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳೊಂದಿಗೆ ಪವರ್ ಇಂಡಸ್ಟ್ರಿಯ ಅಗತ್ಯಗಳನ್ನು ಪೂರೈಸುತ್ತಿದೆ.

ಸಂತೃಪ್ತ ಗ್ರಾಹಕರು

ಕನ್ಸಲ್ಟೆನ್ಸಿ, ಉತ್ಪಾದನೆ, ಪರೀಕ್ಷೆ ಮತ್ತು ಕಮಿಷನಿಂಗ್, ವಾರ್ಷಿಕ ನಿರ್ವಹಣೆ ಮತ್ತು ಬಾಡಿಗೆ ವ್ಯವಹಾರವನ್ನು ಮೀನಾಕ್ಷಿ ಪವರ್‌ ಸೊಲ್ಯೂಶನ್‌ ನಡೆಸುತ್ತಿದೆ. ಈ ಕಂಪನಿಯ ಸೇವೆಯನ್ನು ಪಡೆದಿರುವ 1,00,0000ಕ್ಕೂ ಅಧಿಕ ವ್ಯವಸ್ಥೆಗಳು ಭಾರತ ಮತ್ತು ವಿದೇಶಗಳಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿವೆ.

ಮೀನಾಕ್ಷಿ ಪವರ್‌ ಸೊಲ್ಯೂಶನ್ ಕಂಪನಿಯು 19+ ವರ್ಷಗಳಿಂದ ಈ ವ್ಯವಹಾರದಲ್ಲಿ ಭರಪೂರ ಯಶಸ್ಸು ಕಂಡಿದೆ. ಈ ಕಂಪನಿಯ ಗ್ರಾಹಕರ ಪಟ್ಟಿಯಲ್ಲಿ ಹಲವಾರು ಪ್ರತಿಷ್ಠಿತ ಕಂಪನಿಗಳಿವೆ. ಕಡಿಮೆ ಅವಧಿಯಲ್ಲಿ ಗ್ರಾಹಕರಿಗೆ ತ್ವರಿತ ಸೇವೆ ನೀಡಲು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆದಿದೆ. ಮಾರಾಟದ ನಂತರ ಸೇವೆಯನ್ನು ಬೆಂಬಲಿಸಲು ಕಸ್ಟಮರ್‌ ಕೇರ್‌ ವಿಭಾಗದಲ್ಲಿ ದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತದೆ. ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಮೂಲಕ ಕಡಿಮೆ ವೆಚ್ಚದ ಪರಿಹಾರವನ್ನು ಒದಗಿಸುತ್ತದೆ.

ಯಾರಿಗೆಲ್ಲ ಎಂಪಿಎಸ್‌ ಸೇವೆ ಅಗತ್ಯ?

ಐಟಿ ಕಂಪನಿಗಳು

ಬ್ಯಾಂಕಿಂಗ್‌ ಮತ್ತು ಶೈಕ್ಷಣಿಕ ಸಂಸ್ಥೆಗಳು

ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಘಟಕಗಳು

ಉತ್ಪನ್ನ ಹಾಗೂ ಪ್ರೊಸೆಸ್‌ ಯೋಜನೆಗಳು

ಏವಿಯೇಷನ್‌ ಹಾಗೂ ಯುಟಿಲಿಟಿ ಸೆಗ್ಮೆಂಟ್‌

ಡಾಟಾ ಸೆಂಟರ್‌ಗಳು

ಸರಕಾರಿ ಇಲಾಖೆಗಳು

ಡಿಫೆನ್ಸ್‌ ಇಲಾಖೆ

ವೈಶಿಷ್ಟ್ಯತೆಗಳೇನು?

ಎಂಪಿಎಸ್‌ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮತ್ತು ಅದರಂತೆ ಪರಿಹಾರವನ್ನು ಕಸ್ಟಮೈಸ್ ಮಾಡಲು ನಿರ್ದಿಷ್ಟ ಪರಿಹಾರಗಳು ಮತ್ತು ವಿಭಿನ್ನ ಶ್ರೇಣಿಯ ಸೇವೆಗಳನ್ನು ನೀಡುತ್ತದೆ. ಅವುಗಳ ಪಟ್ಟಿ ಇಂತಿದೆ.

ತಾಂತ್ರಿಕ ಪೂರ್ವ ಮಾರಾಟ ಬೆಂಬಲ.

ಯುಪಿಎಸ್ ಸೈಜಿಂಗ್‌ ಮತ್ತು ಪರಿಹಾರ

ಸ್ಥಾಪನೆಯ ಮೇಲ್ವಿಚಾರಣೆ, ಪರೀಕ್ಷೆ ಮತ್ತು ಕಾರ್ಯಾರಂಭ

ಆಪರೇಟರ್ ತರಬೇತಿ

ಸೈಟ್ ಆಡಿಟ್‌ಗಳು / ಪವರ್ ಗುಣಮಟ್ಟದ ಲೆಕ್ಕಪರಿಶೋಧನೆಗಳು

ವಾರಂಟಿ ವಿಸ್ತರಣೆಯ ಕೊಡುಗೆ

ವಾರ್ಷಿಕ ನಿರ್ವಹಣೆ ಒಪ್ಪಂದ

ಬಾಡಿಗೆಗಳು – UPS, ಬ್ಯಾಟರಿಗಳು, ಸರ್ವೋ ನಿಯಂತ್ರಣ ವೋಲ್ಟೇಜ್ ಸ್ಟೆಬಿಲೈಜರ್‌ಗಳು

ವಿನಂತಿಯ ಮೇರೆಗೆ ಡೆಮೊ ಘಟಕಗಳು ಲಭ್ಯವಿದೆ.

ಐಟಿ ಪರಿಹಾರಗಳು.

ಪ್ರಮುಖ ಗ್ರಾಹಕರು

ವಿದ್ಯುತ್‌ ಕ್ಷೇತ್ರ, ಟೆಲಿಕಾಮ್‌ ಕ್ಷೇತ್ರ, ರಿಫೈನರಿಗಳು, ಸಾಫ್ಟ್‌ವೇರ್‌ ಕಂಪನಿಗಳು, ಅಕ್ರೋಪೆಟಲಿ ಟೆಕ್ನಾಲಾಜೀಸ್‌ ಲಿಮಿಟೆಡ್‌, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್‌ ಲಿಮಿಟೆಡ್, ಮ್ಯಾಕ್ಸ್‌ ಲೈಫ್‌ಸ್ಟೈಲ್‌, ಸಿಟಿ ಮ್ಯಾಕ್ಸ್‌, ಲ್ಯಾಂಡ್‌ ಮಾರ್ಕ್‌ ಗ್ರೂಪ್‌, OTIS ಎಲಿವೇಟರ್ಸ್‌, ಮಿತ್ಸುಬಿಷಿ ಎಲಿವೇಟರ್ಸ್‌, ಮಿತ್ಸುಬಿಷಿ ಎಲೆಕ್ಟ್ರಿಕ್‌, ಕಾಂಟಿನೆಂಟಲ್‌ ಹಾಸ್ಪಿಟಲ್‌, ಕ್ವೀಸ್ ಕಾರ್ಪ್‌, ಕಿರುಸ್‌ ಸಾಫ್ಟ್‌ವೇರ್ ಲಿಮಿಟೆಡ್‌, ಡಿಎಫ್‌ಎಚ್‌ಎಲ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್, ಟಿಟಿಎಲ್‌ ಟೆಕ್ನಾಲಾಜೀಸ್‌ ಲಿಮಿಟೆಡ್‌, ಟಾಟಾ ಅಡ್ವಾನ್ಸ್‌ಡ್‌ ಮೆಟೀರಿಯಲ್ ಲಿಮಿಟೆಡ್‌, ಹ್ಯುಂಡೈ ಮೊಬಿಸ್‌, ಸಿಂಡಿಕೇಟ್‌ ಬ್ಯಾಂಕ್‌, ಡಿಆರ್‌ಡಿಒ ಮತ್ತು ಡಿಎಅರ್‌ಇ.

ಶಾಖೆಗಳು
ದೆಹಲಿ, ಕೋಲ್ಕತ್ತಾ, ಮುಂಬೈ, ಹೈದರಾಬಾದ್, ವಿಜಯವಾಡ, ಚೆನ್ನೈ, ಗಾವೋ, ಪುಣೆ ಅಹಮದಾಬಾದ್.

Exit mobile version