ಬೆಂ.ಗ್ರಾಮಾಂತರ: ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಹೊಸಕೋಟೆ ಬಿಜೆಪಿ ಅಭ್ಯರ್ಥಿ, ಸಚಿವ ಎಂಟಿಬಿ ನಾಗರಾಜು ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆಯಲ್ಲಿ (Karnataka Election) ಈ ಬಾರಿ ಅವರು ಬರೋಬ್ಬರಿ 1,510 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. 2019ರ ಉಪ ಚುನಾವಣೆ ವೇಳೆ ಅವರು 1,015 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದರು, ಇದೀಗ ಅವರ ಆಸ್ತಿಯಲ್ಲಿ 495 ಕೋಟಿ ರೂಪಾಯಿ ಹೆಚ್ಚಳವಾಗಿರುವುದು ಕಂಡುಬಂದಿದೆ.
ಆಸ್ತಿ ಮೌಲ್ಯದ ವಿವರ
ಸಚಿವ ಎಂಟಿಬಿ ನಾಗರಾಜು ಅವರ ಹೆಸರಲ್ಲಿ 372 ಕೋಟಿ ರೂ. ಮೌಲ್ಯದ ಚರಾಸ್ತಿ, 792 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಶಾಂತಮ್ಮ ನಾಗರಾಜ್ ಹೆಸರಲ್ಲಿ 163 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 274 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಎಂಟಿಬಿ ಹೆಸರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 71 ಕೋಟಿ ರೂ. ಸಾಲ ಇದ್ದು, ಪತ್ನಿ ಹೆಸರಲ್ಲಿ 27 ಕೋಟಿ ರೂ. ಸಾಲ ಇದೆ. ಇವರಿಬ್ಬರ ಒಟ್ಟು ಸಾಲದ ಮೌಲ್ಯ 98 ಕೋಟಿ ರೂ.ಗಳಾಗಿದೆ.
ಐಷಾರಾಮಿ ವಾಹನಗಳು
ಸಚಿವ ಎಂಟಿಬಿ ನಾಗರಾಜ್ ಹೆಸರಲ್ಲಿ ಹ್ಯುಂಡೈ ಐ10, ಲ್ಯಾಂಡ್ ರೋವರ್ ಡಿಫೆಂಡರ್, ಮಹಿಂದ್ರಾ ಬೊಲೆರೋ ವಾಹನಗಳಿದ್ದು, ಇವುಗಳ ಒಟ್ಟು ಮೌಲ್ಯ 1.72 ಕೋಟಿ ರೂ. ಆಗಿದೆ. ಪತ್ನಿ ಶಾಂತಮ್ಮ ಹೆಸರಿನಲ್ಲಿ ಪೋರ್ಶ್ ಮತ್ತು ಇನೋವಾ ಕ್ರಿಸ್ಟಾ ಕಾರು ಇದ್ದು, ಇವುಗಳ ಒಟ್ಟು ಮೌಲ್ಯ 1.33 ಕೋಟಿ ರೂಪಾಯಿ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಜತೆಗೆ ಎಂ.ಟಿ.ಬಿ ನಾಗರಾಜ್ ಬಳಿ 64 ಲಕ್ಷ ರೂ. ನಗದು. ಇದ್ದು ಪತ್ನಿ ಶಾಂತಮ್ಮ ಬಳಿ 34 ಲಕ್ಷ ರೂ ನಗದು ಹೊಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ | Election Affidavit: ಪಶು ಸಂಗೋಪನ ಸಚಿವ 6 ಕ್ರೇನ್, 3 ಜೆಸಿಬಿಗಳ ʼಪ್ರಭುʼ: ಔರಾದ್ ಕ್ಷೇತ್ರದಿಂದ ಪ್ರಭು ಚವ್ಹಾಣ್ ಅಭ್ಯರ್ಥಿ
ಆಭರಣಗಳು
ಸಚಿವರ ಬಳಿ 38 ಲಕ್ಷ ರೂ. ಮೌಲ್ಯದ 996 ಗ್ರಾಂ ಚಿನ್ನ, 98 ಲಕ್ಷ ರೂ. ಮೌಲ್ಯದ 78.28 ಸೆಂಟ್ ಡೈಮಂಡ್ , 2. 20 ಲಕ್ಷ ರೂ ಮೌಲ್ಯದ 100.71 ಗ್ರಾಂ ಪ್ಲಾಟಿನಂ , 1. 1 ಕೋಟಿ ರೂ ಮೌಲ್ಯದ 214 ಕೆ.ಜಿ. 500 ಗ್ರಾಂ ಬೆಳ್ಳಿ ಇದ್ದು, ಇವುಗಳ ಒಟ್ಟು ಮೌಲ್ಯ 2 ಕೋಟಿ 41 ಲಕ್ಷ ರೂ. ಆಗಿದೆ.
ಪತ್ನಿ ಬಳಿಯ ಆಭರಣಗಳು: 84 ಲಕ್ಷ ರೂ. ಮೌಲ್ಯದ 2 ಕೆಜಿ 879 ಗ್ರಾಂ ಚಿನ್ನ, 63.5 ಲಕ್ಷ ರೂ ಮೌಲ್ಯದ 76.01 ಸೆಂಟ್ ಡೈಮಂಡ್, 2 ಲಕ್ಷ 63 ಸಾವಿರ ರೂ. ಮೌಲ್ಯದ ಪ 74.550 ಗ್ರಾಂ ಪ್ಲಾಟಿನಂ, 13 ಲಕ್ಷ 34 ಸಾವಿರ ರೂ ಮೌಲ್ಯದ 26 ಕೆಜಿ 483 ಗ್ರಾಂ ಬೆಳ್ಳಿ. ಆಭರಣದ ಒಟ್ಟು ಮೌಲ್ಯ 1 ಕೋಟಿ 64 ಲಕ್ಷ ರೂ ಮೌಲ್ಯದ ಆಭರಣ ತಮ್ಮ ಪತ್ನಿ ಶಾಂತಮ್ಮ ಬಳಿ ಇದೆ ಎಂದು ಎಂ.ಟಿ.ಬಿ.ನಾಗರಾಜ್ ನಾಮಪತ್ರದಲ್ಲಿ ಮಾಹಿತಿ ನೀಡಿದ್ದಾರೆ.