Site icon Vistara News

MUDA site scandal: ಮುಡಾ ನಿವೇಶನ ಹಗರಣ; ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ ಎಂದ ಡಿಕೆಶಿ!

MUDA site scandal

ರಾಮನಗರ: ಬಿಜೆಪಿ ಸರ್ಕಾರ ಅವಧಿಯಲ್ಲೇ ಸಿಎಂ ಹೆಂಡತಿಯವರ ಜಮೀನು ಸ್ವಾಧೀನ ಆಗಿದೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ. ಸಿಎಂ ಹೆಂಡತಿ ಯಾಕೆ ಅಕ್ರಮ (MUDA site scandal) ಮಾಡುತ್ತಾರೆ. ಅವರ ಆಸ್ತಿ ಇತ್ತು, ಅದು ಹೋಗಿದೆ. ಪರ್ಯಾಯ ಸೈಟ್ ಕೊಡಬೇಕು, ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮೈಸೂರು ಮುಡಾದಲ್ಲಿ ಅಕ್ರಮ ಆರೋಪಗಳ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿ, ಅವರ ಜಮೀನು ಪಡೆದ ಹಿನ್ನೆಲೆಯಲ್ಲಿ ಇನ್ಸೆಂಟೀವ್ ಸ್ಕೀಮ್ ಅಡಿ ಮುಡಾ ಸೈಟ್‌ ನೀಡಿದೆ. ಡಿನೋಟಿಫೈ ಮಾಡದೆ ಇನ್ಸೆಂಟಿವ್ ತಗೊಂಡಿರೊದ್ದಕ್ಕೆ ಖುಷಿ ಪಡಬೇಕು. ಅವರು ಅರ್ಹರಿದ್ದಾರೆ, ತೆಗೆದುಕೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ನಾಲ್ವರು ಅಧಿಕಾರಿಗಳ ಸಸ್ಪೆಂಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮುಖ್ಯಮಂತ್ರಿಗಳು ಭ್ರಷ್ಟಾಚಾರ ವಿರುದ್ಧವಾಗಿ ಕಠಿಣವಾಗಿ ಇರುತ್ತಾರೆ. ಯಾರೆ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು, ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ನನಗೂ ಆ ನಾಗೇಂದ್ರ ವಿಚಾರದಲ್ಲಿ ಡೌಟ್ ಇತ್ತು. ಈ ಬಗ್ಗೆ ವಿಚಾರಿಸಿದಾಗ ನಮ್ಮ ಮಂತ್ರಿಗಳು ಅದರಲ್ಲಿ ಭಾಗಿಯಾಗಿಲ್ಲ ಎಂಬುವುದು ತಿಳಿದುಬಂದಿದೆ ಎಂದರು.

ಬೇರೆ ಯಾರೂ ಅಕ್ರಮ ಮಾಡಿಲ್ಲ ಅಂತ ಹೇಳೋದಿಲ್ಲ. ಆದರೆ ಮಿನಿಸ್ಟರ್ಸ್‌ ಯಾರೂ ಭಾಗಿಯಾಗಿಲ್ಲ. ಆ ವಿಚಾರದಲ್ಲಿ ನನಗೆ ಸಮಾಧಾನ ಇದೆ. ಅವಶ್ಯಕತೆ ಇದ್ದರೆ ಎಲ್ಲರನ್ನೂ ವಿಚಾರಣೆ ಮಾಡುತ್ತಾರೆ‌, ಎಷ್ಟೋ ಸಲ ನಮ್ಮನ್ನೇ ವಿಚಾರಿಸಿಲ್ಲವೇ ಎಂದು ಹೇಳಿದರು.

ಇದನ್ನೂ ಓದಿ | Karnataka CM: ಸಿದ್ದು- ಡಿಕೆಶಿ ಇಬ್ಬರ ಜಗಳ ಮೂರನೆಯವರಿಗೆ ಲಾಭ? ಆ ಮೂರನೆಯವರು ಇವರೇ!

ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಯಾರೂ ಚರ್ಚೆ ಮಾಡದಂತೆ ಕೈ ನಾಯಕರಿಗೆ ಸೂಚನೆ ನೀಡಿದ್ದೀರಿ ಎಂಬ ಪ್ರಶ್ನೆ ಕೇಳುತ್ತಿದ್ದಂತೆ ಉತ್ತರಿಸದೆ ಡಿಸಿಎಂ ನಿರ್ಗಮಿಸಿದರು.

ಪತ್ನಿಗೆ ಕಾನೂನು ಪ್ರಕಾರವೇ ಮುಡಾ ಸೈಟ್‌; ಬಿಜೆಪಿ ಕಾಲದಲ್ಲೇ ನೀಡಲಾಗಿತ್ತು ಎಂದ ಸಿದ್ದರಾಮಯ್ಯ

ಬೆಂಗಳೂರು: ಮೈಸೂರಿನಲ್ಲಿ ಮುಡಾ ನಿವೇಶನ ಹಂಚಿಕೆ ಹಗರಣದ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರದ ಆದೇಶ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೂ ಮುಡಾ ಸೈಟ್‌ (MUDA site scandal) ಹಂಚಿಕೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ. ಪತ್ನಿಗೆ ನೀಡಿರುವ 50:50 ಅನುಪಾತದ ನಿವೇಶನಗಳ ಬಗ್ಗೆ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಇದ್ದ ಜಾಗವನ್ನು 1997ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದು, ಆ ಭೂಮಿಗೆ 2021ರಲ್ಲಿ ಪರಿಹಾರ ಕೊಟ್ಟಿತ್ತು ಎನ್ನಲಾಗಿದೆ. ಈ ಬಗ್ಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಿವೇಶನ ಹಂಚಿಕೆ ಬಿಜೆಪಿಯವರ ಕಾಲದಲ್ಲಿ ಆಗಿದ್ದು, ನನ್ನ ಹೆಂಡತಿಗೆ ಈ ಹಿಂದೆಯೇ ಸೈಟ್ ಹಂಚಲಾಗಿತ್ತು. 3 ಎಕರೆ 16 ಗುಂಟೆ ಜಮೀನು ನನ್ನ ಹೆಂಡತಿ ಹೆಸರಲ್ಲಿತ್ತು. ನನ್ನ ಬಾಮೈದ ತೆಗೆದಕೊಂಡಿದ್ದ ಜಾಗವನ್ನು ನನ್ನ ಹೆಂಡತಿಗೆ ದಾನ ಕೊಟ್ಟಿದ್ದ. ಅದನ್ನು ನಾನು ಅಧಿಕಾರದಲ್ಲಿ ಇದ್ದಾಗ ಖರೀದಿ ಮಾಡಿರಲಿಲ್ಲ‌. ಕಾನೂನಿನ ಪ್ರಕಾರವೇ ನಮಗೆ ಸೈಟ್‌ ಹಂಚಿದ್ದಾರೆ ಎಂದು ತಿಳಿಸಿದ್ದಾರೆ.

ಕಾನೂನು ಪ್ರಕಾರವೇ ನಮಗೆ 50:50 ನಿವೇಶನ ಕೊಡುವುದಾಗಿ ಮುಡಾದವರು ಹೇಳಿದ್ದರು. ಮಲ್ಲಿಕಾರ್ಜುನ್ ಎಂಬ ನನ್ನ ಬಾಮೈದ ಹರಿಶನ ಕುಂಕುಮ ಕೊಡುವಾಗ ನನ್ನ ಪತ್ನಿಗೆ ಗಿಫ್ಟ್ ಕೊಟ್ಟಿದ್ದ. ಆದರೆ ಅದನ್ನು ಮುಡಾದವರು ಸೈಟ್ ಮಾಡಿ ಹಂಚಿಬಿಟ್ಟರು. ಬಳಿಕ ನಮಗೆ ಜಮೀನು ಇಲ್ಲದಂತಾಯಿತು. ಅದಕ್ಕೆ ಮುಡಾದವರು ಬೇರೆ ಕಡೆ 50:50 ಸೈಟ್‌ ಕೊಟ್ಟಿದ್ದಾರೆ, ಇದು ತಪ್ಪಾ ಎಂದು ಸಿಎಂ ಪ್ರಶ್ನಿಸಿದ್ದಾರೆ.

Exit mobile version