ಬೆಂಗಳೂರು, ಕರ್ನಾಟಕ: ಬಾಗಲಕೋಟೆ ಜಿಲ್ಲೆಯ ಮುಧೋಳ ಎಸ್‌ಸಿ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿ ಆರ್ ಬಿ ತಿಮ್ಮಾಪುರ ಅವರು ಗೆದ್ದಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತಿಮ್ಮಾಪುರ ಅವರು 76817 ಮತಗಳನ್ನು ಪಡೆದುಕೊಂಡರೆ, ಎರಡನೇ ಸ್ಥಾನದಲ್ಲಿದ್ದ ಗೋವಿಂದ್ ಎಂ ಕಾರಜೋಳ ಅವರು 59401 ಮತಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಂಡಿವಡ್ಡರ್ ಸತೀಶ್ ಚಿನ್ನಪ್ಪ ಅವರು 17 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ.
2023ರ ಚುನಾವಣೆಯ ಅಭ್ಯರ್ಥಿಗಳು ಯಾರು?
ಒಟ್ಟಾರೆ ಐದು ಬಾರಿ ಮತ್ತು ಸತತ ನಾಲ್ಕು ಅವಧಿಗೆ ಶಾಸಕರಾಗಿರುವ ಗೋವಿಂದ ಕಾರಜೋಳ ಅವರು ಮತ್ತೆ ಬಿಜೆಪಿಯ ಟಿಕೆಟ್ ಪಡೆದು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಆರ್ ಬಿ ತಿಮ್ಮಾಪುರ ಅವರು ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಧರ್ಮರಾಜ್ ದೊಡಮನಿ ಅವರು ಕಣದಲ್ಲಿದ್ದರು.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಬಿ.ವೈ.ವಿಜಯೇಂದ್ರ ಗೆಲುವಿನ ‘ಶಿಕಾರಿ’
2018ರ ಚುನಾವಣೆ ಫಲಿತಾಂಶ ಏನಾಗಿತ್ತು?
ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ 2004ರಿಂದಲೂ ಬಿಜೆಪಿಯೇ ಗೆಲುವು ಸಾಧಿಸುತ್ತಾ ಬಂದಿದೆ. ಗೋವಿಂದ ಕಾರಜೋಳ ಅವರು ಸತತವಾಗಿ ಗೆದ್ದುಕೊಂಡು ಬರುತ್ತಿದ್ದಾರೆ. 2018ರಲ್ಲಿ ಅವರು ಕಾಂಗ್ರೆಸ್‌ನ ಬಂಡಿವಡ್ಡರ್ ಸತೀಶ್ ಚಿನ್ನಪ್ಪಾ ಅವರ ವಿರುದ್ಧ 76431 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ 60949 ಮತಗಳನ್ನು ಪಡೆದುಕೊಂಡರು. ಅದೇ ರೀತಿ, 2013ರಲ್ಲಿ ಕಾರಜೋಳ ಅವರು ಕಾಂಗ್ರೆಸ್‌ನ ಆರ್ ಬಿ ತಿಮ್ಮಾಪುರ ವಿರುದ್ಧ 64722 ಮತಗಳನ್ನು ಪಡೆದುಕೊಂಡು ಗೆದ್ದಿದ್ದರು. 1994ರಲ್ಲಿ ಕಾರಜೋಳ ಅವರು ಜನತಾದಳದಿಂದ ಇದೇ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು.