Site icon Vistara News

Muharram 2022 | ಭಾವೈಕ್ಯತೆಯೊಂದಿಗೆ ಹಿಂದೂಗಳಿಂದ ಮೊಹರಂ ಆಚರಣೆ

Muharram 2022

ಕೊಪ್ಪಳ: ಇಲ್ಲಿನ ಮತ್ತೂರು ಗ್ರಾಮದಲ್ಲಿ ಹಿಂದುಗಳಿಂದ ಮೊಹರಂ ಹಬ್ಬವನ್ನು (Muharram 2022) ವಿಜೃಂಭಣೆಯಿಂದ ಆಚರಿಸಲಾಯಿತು. ಮೊಹರಂ ಹಬ್ಬದ 7 ದಿನದಲ್ಲಿ ಆಶೂರ್ ಖಾನದಲ್ಲಿದ್ದ ಅಲಾಯಿ ದೇವರನ್ನು ಅಂದಪ್ಪ ಬಡಿಗೇರ ಎಂಬುವವರ ಮನೆಗೆ ಕರೆತರಲಾಗುತ್ತದೆ. ಈ ವೇಳೆ ಇಡೀ ದಿನ ಭಕ್ತರು ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ.

ಶನಿವಾರ ಅಂದಪ್ಪ ಬಡಿಗೇರ ಅವರ ಮನೆಯಿಂದ ಅಶೂರ್ ಖಾನಕ್ಕೆ ಹೊರಡುವ ಅಲಾಯಿ ದೇವರ ಮೂರ್ತಿಯು ಕವಲೂರಿನಲ್ಲಿ ಹನುಮಂತ ದೇವರ ದರ್ಶನ ಮಾಡಿಸಲಾಗುತ್ತದೆ. ಈ ವೇಳೆ ಗೋವಿಂದ ಗೋವಿಂದ ಎಂಬ ಘೋಷದೊಂದಿಗೆ ಅಲಾಯಿ ಹೊತ್ತ ವ್ಯಕ್ತಿಯು ಹನುಮಂತನಿಂದ ಹೂವಿನ ಪ್ರಸಾದ ಕೇಳುತ್ತಾರೆ.

ಈ ವೇಳೆ ಹನುಮಂತ ದೇವರ ಮುಡಿಯಲ್ಲಿದ್ದ ಹೂವಿನ ಪ್ರಸಾದ ನೀಡುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳಬಹುದಾಗಿದೆ. ಹಬ್ಬದ ಆಚರಣೆಗೆ ಧರ್ಮಗಳ ಭೇದ ಭಾವವಿಲ್ಲದೇ ಮುಸ್ಲಿಂ ಹಾಗೂ ಹಿಂದುಗಳು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಇದನ್ನೂ ಓದಿ | Muharram 2022 | ಈ ಮಠದಲ್ಲಿ ಆಚರಿಸುತ್ತಾರೆ ಮೊಹರಂ! ಇಲ್ಲಿದೆ ಭಾವೈಕ್ಯತೆಯ ಸಂಗಮ

Exit mobile version