Site icon Vistara News

CT Ravi | ನನ್ನನ್ನು ಮುಲ್ಲಾ ಅಂದ್ರೆ ಮುಲ್ಲಾಗಳೂ ಒಪ್ಪಲ್ಲ, ನಾನು ಏನಿದ್ದರೂ ಹಿಂದು ಹುಲಿ ಅಂದರು ಸಿ.ಟಿ. ರವಿ

CT Ravi

ಚಿಕ್ಕಮಗಳೂರು: ನನ್ನನ್ನು ಮುಲ್ಲಾ ಎಂದು ಕರೆದರೆ ಮುಲ್ಲಾಗಳು ಕೂಡಾ ಒಪ್ಪಲ್ಲ. ನನ್ನನ್ನು ಹಿಂದು ಹುಲಿ ಅಂತಾನೇ ಕರೀಬೇಕು. ಯಾಕೆಂದರೆ, ನಮ್ಮ ಸ್ವಭಾವಕ್ಕೆ ತಕ್ಕ ಹಾಗೆ ಹೆಸರಿಡಬೇಕೇ ಹೊರತು ಏನೇನೋ ಕರೆದರೆ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi).

ಸಿದ್ದರಾಮುಲ್ಲಾ ಖಾನ್ ಹೇಳಿಕೆಗೆ ಪ್ರತಿಯಾಗಿ ಬೊಮ್ಮಾಯಿ ಅವರನ್ನು ಬೊಮ್ಮಾಯುಲ್ಲಾ ಖಾನ್‌, ಗಡ್ಕರಿ ಅವರಿಗೆ ಗಡ್ಕರಿ ಶೇಕ್‌ ಎಂದು ನಾಮಕರಣ ಮಾಡಿ, ಫೋಟೊ ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿದ್ದಕ್ಕೆ ಸಿ.ಟಿ. ರವಿ ಪ್ರತಿಕ್ರಿಯಿಸಿದರು. ಬುಧವಾರ ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಮಾಲಾಧಾರಿಯಾಗಿ ಮನೆ ಮನೆಗೆ ಪಡಿ ಸಂಗ್ರಹಕ್ಕೆ ತೆರಳುವ ವೇಳೆ ಅವರು ಮಾತನಾಡಿದರು.

ʻʻನಮ್ಮ ಸ್ವಭಾವ ಹಾಗೆ ಇದ್ರೆ ಖಂಡಿತಾ ಮುಲ್ಲಾ ಅಂತ ಕರೆಯಬಹುದು. ನನಗೆ ಕುಂಕುಮ ಕಂಡ್ರೆ ಆಗದೇ ಇದ್ರೆ, ಕೇಸರಿ ಕಂಡ್ರೆ ಆಗದೇ ಇದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ರೆ ಕರೆಯಬಹುದು. ಹಾಗಿಲ್ಲದೆ ಇದ್ರೆ ಕರೆಯೋದು ಹೇಗಾಗುತ್ತದೆ. ನನ್ನನ್ನು ಹಿಂದೂ ಹುಲಿ ಅಂತಾನೇ ಕರೆಯಬೇಕು. ಮುಲ್ಲಾ ಅಂದರೆ ಮುಲ್ಲಾಗಳೇ ಒಪ್ಪಿಕೊಳ್ಳೊಲ್ಲʼʼ ಎಂದು ಸಿ.ಟಿ. ರವಿ ಹೇಳಿದರು.

ʻʻನಮ್ಮನ್ನ ನಮ್ಮ ಸ್ವಭಾವ ನಡವಳಿಕೆಗೆ ತಕ್ಕಂತೆ ಕರೆಯುತ್ತಾರೆ. ನರಭಕ್ಷಕ ಹುಲಿ‌ ಅಂತ ಯಾವುದನ್ನು ಕರೆಯುತ್ತೀರಿ, ಯಾವುದು ಮನುಷ್ಯರನ್ನು ತಿನ್ನುತ್ತದೋ ಅದನ್ನು ನರಭಕ್ಷಕ ಅಂತೀರಿ. ಎಲ್ಲಾ ಹುಲಿಗಳಿಗೂ ನರಭಕ್ಷಕ ಅಂತೀರಾ? ಹಾಗೆ ಹೇಳೋದಕ್ಕೆ ಬರಲ್ಲ, ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ಬರುತ್ತವೆʼʼ ಎಂದರು ಸಿ.ಟಿ. ರವಿ.

ಇದೆಲ್ಲ ಯಾರಿಗೆ ಕನೆಕ್ಟ್‌ ಆಗುತ್ತದೆ ಎಂದರೆ.. ಸಿದ್ದರಾಮಯ್ಯಗೆ ತಿರುಗೇಟು
ʻʻಕನ್ನಡ ಮಾತನಾಡಲಿಕ್ಕೇ ಬರದಿದ್ದವನಿಗೆ ಕನ್ನಡ ಪ್ರೇಮಿ ಅನ್ನೋದಕ್ಕೆ ಬರುತ್ತಾ? ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಹೇರಿದವನನ್ನು ಕನ್ನಡ ಪ್ರೇಮಿ‌ ಅಂತ ಕರೆದರೆ ಅದಕ್ಕಿಂತ ಅಪಪ್ರಚಾರ ಇನ್ಯಾವುದಿದೆ? ಹಾಗಾಗಿ ಬಿರುದಿಗೆ ತಕ್ಕಂತೆ ಇದ್ದರೆ ಅದಕ್ಕೆ ಸೂಟ್ ಆಗುತ್ತದೆ. ಕರೆಯೊದಕ್ಕೆ ಏನ್ ಬೇಕಾದ್ರೂ ಕರೆಯಬಹುದು, ಆದ್ರೆ ಅದಕ್ಕೆ ಕನೆಕ್ಟ್ ಆಗಬೇಕಲ್ಲ? ಇದು ಯಾರಿಗೆ ಕನೆಕ್ಟ್‌ ಆಗುತ್ತದೆ ಎಂದರೆ ಶಾದಿ ಭಾಗ್ಯ ಕೊಟ್ಟೋರಿಗೆ ಕನೆಕ್ಟ್ ಆಗುತ್ತದೆ, ದೇ ಆರ್‌ ಆಲ್‌ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತೆ. ಬೆಂಕಿ ಹಾಕಿದ್ರೂ ಕೂಡಾ ಅಮಾಯಕರು ಅಂತಾ ಹೇಳೋರಿಗೆ ಕನೆಕ್ಟ್ ಆಗುತ್ತೆ. ಕೇಸರಿಯನ್ನು ದೂರಿ, ಕುಂಕುಮವನ್ನು ದೂರಿ, ಟೋಪಿಯನ್ನು‌‌‌ ಪ್ರೀತಿಯಿಂದ ಇಟ್ಕೊಳ್ಳೋರಿಗೆ ಕನೆಕ್ಟ್ ಆಗುತ್ತೆʼʼ ಎಂದು ಸಿದ್ದರಾಮಯ್ಯ ಅವರನ್ನು ಕೆಣಕಿದರು.

ಸಿದ್ದರಾಮಯ್ಯ- ವಿಶ್ವನಾಥ್‌ ಭೇಟಿ ತಪ್ಪಲ್ಲ
ಬಿಜೆಪಿ ಎಂಎಲ್‌ಸಿ ಆಗಿರುವ ಎಚ್‌.ವಿಶ್ವನಾಥ್‌ ಅವರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ʻʻರಾಜಕೀಯವಾಗಿ ಹಲವಾರು ಕಾರಣಕ್ಕೆ ಭೇಟಿಯಾಗಿರುತ್ತಾರೆ ಯಾವ ಕಾರಣಕ್ಕೆ ಭೇಟಿಯಾಗಿರುತ್ತಾರೆ ಅನ್ನೋದನ್ನು‌ ನಾವು ಹೇಳೋಕೆ ಆಗಲ್ಲ. ಭೇಟಿ ಮಾಡಿದ್ದೇ ತಪ್ಪು ಅಂತಾ ಭಾವಿಸಲು ಆಗಲ್ಲ. ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಇರಬಹುದು. ರಾಜಕೀಯ ಟೀಕೆಗಳನ್ನು ಮಾಡುತ್ತಲೂ ವೈಯಕ್ತಿಕ ಸಂಬಂಧಗಳನ್ನು ಇಟ್ಟುಕೊಳ್ಳಲು ಬರುತ್ತದೆʼʼ ಎಂದರು.

ಮೈಂಡ್‌ ರೀಡ್‌ ಮಾಡೋ ಸಾಮರ್ಥ್ಯ ನನಗಿಲ್ಲ
ʻʻರಾಜಕೀಯ ವಿಚಾರಕ್ಕೇ ಹೋಗಿದ್ದಾರೆ ಎಂದು ನಾನು ಇವತ್ತು ಹೇಳೋದಕ್ಕೆ ಬರೋದಿಲ್ಲ. ಕೆಲವನ್ನು ಕಾಲ ಹೇಳಬೇಕು. ಯಾವ ಕಾರಣಕ್ಕೆ ಹೋಗಿದ್ದಾರೆ ಅನ್ನೋದನ್ನ ವಿಶ್ವನಾಥ್ ಅವರೇ ಸ್ಪಷ್ಟಪಡಿಸಬೇಕು. ಅವರ ಮೈಂಡ್ ರೀಡ್ ಮಾಡುವ ಸಾಮರ್ಥ್ಯ ನನಗಿಲ್ಲ. ಅವರ ಮೈಂಡ್ ಅನ್ನು ಅವರೇ ಹೇಳಬಹುದು. ಯಾಕೆ ಹೋಗಿದ್ದರು ಅಂತಾ ನಾನು ಹೇಗೆ ಹೇಳಲಿ?ʼʼ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Datta Jayanti | ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆಗಳ ರಾಶಿ; ವಿಧ್ವಂಸಕ ಕೃತ್ಯಕ್ಕೆ ಸಂಚು ಎಂದ ಸಿ.ಟಿ. ರವಿ

Exit mobile version