ಮಡಿಕೇರಿ: ವಿಶ್ವ ಹಿಂದೂ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷರ ಕೊಲೆ ಯತ್ನ (Murder attempt) ನಡೆದಿದೆ. ಜಿಲ್ಲಾಧ್ಯಕ್ಷರೂ ವಕೀಲರೂ ಅಗಿರುವ ಪಿ. ಕೃಷ್ಣ ಮೂರ್ತಿ ಅವರ ಮೇಲೆ ಗುಂಡು ಹಾರಿಸಲಾಗಿದ್ದು, ಅದು ಅವರ ಕಾರಿಗೆ ತಾಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿ ತಾಲೂಕಿನ ಅಬ್ಯಾಲದಲ್ಲಿ ತಡರಾತ್ರಿ ಘಟನೆ ನಡೆದಿದೆ. ಕೃಷ್ಣ ಮೂರ್ತಿ ಅವರು ಚೆಟ್ಟಳ್ಳಿಯಿಂದ ಮಡಿಕೇರಿಗೆ ಬರುವ ಸಂದರ್ಭ ಗುಂಡಿನ ದಾಳಿ ನಡೆದಿದೆ. ಅವರ ಕಾರು ಸಾಗುತ್ತಿದ್ದಂತೆಯೇ ಮರೆಯಲ್ಲಿ ನಿಂತು ದಾಳಿ ಮಾಡಲಾಗಿದೆ ಎಂದು ನಂಬಲಾಗಿದೆ. ಹಾರಿಸಿದ ಗುಂಡು ಕಾರಿಗೆ ತಾಗಿ ದೂರ ಹೋಗಿ ಬಿದ್ದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಘಟನಾ ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕೊಡಗಿನಲ್ಲಿ ಪಿಎಫ್‌ಐ ಮತ್ತು ಇತರ ಉಗ್ರ ಸಂಘಟನೆಗಳಿಗೆ ಸೇರಿದ ಕೆಲವು ವ್ಯಕ್ತಿಗಳಿದ್ದಾರೆ. ಇದರ ಜತೆಗೆ ಕೆಲವು ಉಗ್ರ ಸಂಘಟನೆಗಳ ಸ್ಲೀಪರ್ ಸೆಲ್‌ಗಳು ಇಲ್ಲಿ ಕಾರ್ಯಾಚರಿಸುತ್ತಿವೆ ಎಂದು ಹೇಳಲಾಗಿದೆ. ಇವುಗಳಿಗೂ ವಿಹಿಂಪ ಅಧ್ಯಕ್ಷರ ಮೇಲಿನ ದಾಳಿಗೂ ಸಂಬಂಧವಿದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾವಿಕೇರಿಯಲ್ಲಿ ರಿಕ್ಷಾ ಡಿಕ್ಕಿಯಾಗಿ ಗರ್ಭಿಣಿ ಸಾವು, ನಡೆದುಹೋಗುತ್ತಿದ್ದಾಗ ಬಡಿಯಿತು ಆಟೊ
ಅಂಕೋಲಾ: ರಸ್ತೆಯ ಬದಿಯ ಕಚ್ಚಾ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ರಿಕ್ಷಾ ಬಡಿದು (Road accident) ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಶೋಭಾ ಗೋಪಾಲ ನಾಯಕ (28) ಮೃತ ಮಹಿಳೆ.
ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಇವರು ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ರಿಕ್ಷಾ ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆಸಿದ್ದಾನೆ.
ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ರಿಕ್ಷಾ ಚಾಲಕ ಇವನಾಗಿದ್ದು, ಘಟನೆ ಬಳಿಕ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಇದನ್ನೂ ಓದಿ ; PFI In Karnataka: ನಿಷೇಧದ ಬಳಿಕವೂ ಕರ್ನಾಟಕದಲ್ಲಿ ಪಿಎಫ್‌ಐ ಹಾವಳಿ; ಎಸ್‌ಡಿಪಿಐ ಮೂಲಕ ವಿವಿಧ ಚಟುವಟಿಕೆ