ಮಂಗಳೂರು: ಬಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ (Murder Attempt) ಯತ್ನ ಮಾಡಿರುವ ಪ್ರಕರಣ ಹೊರವಲಯದ ವಲಚ್ಚಿಲ್ ಎಂಬಲ್ಲಿ ಶನಿವಾರ ನಡೆದಿದೆ.
ಆಸೀಫ್ (30) ಎಂಬಾತ ಮೇಲೆ ತಲವಾರು ದಾಳಿ ನಡೆದಿದ್ದು, ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕೊಬ್ಬನ ಮೇಲೆ ತಂಡವೊಂದು ಹಲ್ಲೆ ಮಾಡುವುದನ್ನು ತಡೆಯಲು ಮುಂದಾಗಿದ್ದಕ್ಕೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ?
ಅಂಗಡಿಗೆ ಬಂದಿದ್ದ ಮಿಫ್ತಾಹ್ (16) ಎಂಬ ಬಾಲಕನನ್ನು ಗಾಂಜಾ ಗ್ಯಾಂಗ್‌ವೊಂದು ತಡೆದಿದೆ. ಈ ವೇಳೆ ಆ ಬಾಲಕನ ಮೇಲೆ ತಂಡವು ಹಲ್ಲೆಗೆ ಮುಂದಾಗಿದೆ. ಆಗ ಮಿಫ್ತಾಹ್ ಮಾವ ಆಸೀಫ್ ದಾಳಿ ತಡೆಯಲು ಮುಂದಾಗಿದ್ದಾರೆ. ಆಗ ಆಸೀಫ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.
ಮಿಸ್ತಾ, ಮನ್ಸೂರು ಯಾನೆ ಹುಸೈನ್ ಹಾಗೂ ಆಶಿಕ್ ಎಂಬವರಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಯುವಕರ ತಂಡವು ಯಾವ ಕಾರಣಕ್ಕೆ ಬಾಲಕನ ಮೇಲೆ ದಾಳಿಗೆ ಮುಂದಾಗಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | ಯುವಕ-ಯುವತಿಯ ಚಾಟಿಂಗ್ ಅವಾಂತರ; ಮಂಗಳೂರು ಏರ್‌ಪೋರ್ಟ್‌ನಲ್ಲಿ ಆತಂಕ