ಮಂಡ್ಯ: ಇಲ್ಲಿನ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಬಳಿ ಮಹಿಳೆಯೊಬ್ಬರು ಸಜೀವ ದಹನ ಆಗಿರುವ ಘಟನೆ (Murder Case) ತಡರಾತ್ರಿ ನಡೆದಿದೆ. ಗ್ರಾಮದ ನಿವಾಸಿ ಪ್ರೇಮ (42) ಹತ್ಯೆಯಾದವರು. ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದಲ್ಲೇ ಅವರು ಸುಟ್ಟು ಕರಕಲಾಗಿದ್ದಾರೆ. ಯಾರೋ ಹಂತಕರು ಆಕೆಯನ್ನು ಕೊಂದು ಬೆಂಕಿ ಹಚ್ಚಿರುವ ಶಂಕೆ ಇದೆ.
ನಿದ್ದೆಯಲ್ಲಿದ್ದ ಪ್ರೇಮ ಹಾಸಿಗೆಯಲ್ಲಿಯೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ದಟ್ಟ ಹೊಗೆ ಮನೆಯಿಂದ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬೆಸಗರಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಿಷಯ ತಿಳಿದು ಬಂದಿದೆ.
ಪತಿ ನಿಧನದ ಬಳಿಕ ಪ್ರೇಮ ಒಂಟಿಯಾಗಿದ್ದರು. ಅವರ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಹಂತಕರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ | Nagavara Metro Pillar | ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ಸ್ಕೂಟಿಯಲ್ಲಿ ತೆರಳುತ್ತಿದ್ದ ಅಮ್ಮ, ಮಗು ದುರ್ಮರಣ