Site icon Vistara News

Murder Case | ಸಾಲ ವಾಪಸ್‌ ಕೊಡದ ಜೀವದ ಗೆಳೆಯ; ಜೀವ ತೆಗೆದ ಸ್ನೇಹಿತ ಅರೆಸ್ಟ್‌

murder case

ಬೆಳಗಾವಿ: ಇಲ್ಲಿನ ಹಲಗಾ ಬಳಿ ಶುಕ್ರವಾರ ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯ ರುಂಡ ಕತ್ತರಿಸಿದ್ದ (Murder Case) ಪ್ರಕರಣವನ್ನು ಕೊಲೆ ನಡೆದ ೨೪ ಗಂಟೆಯಲ್ಲಿಯೇ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಹಲಗಾ ಬಳಿ ಶುಕ್ರವಾರ ಬೈಕ್‌ನಲ್ಲಿ ರುಂಡ ಕತ್ತರಿಸಿದ ಮಾದರಿಯಲ್ಲಿ ಶವ ಪತ್ತೆಯಾಗಿತ್ತು. ಇದರ ತನಿಖೆ ಕೈಗೊಂಡ ಪೊಲೀಸರಿಗೆ ಹಿಂಬದಿ ಸವಾರ ಹತ್ಯೆ ಮಾಡಿರುವ ವಿಷಯ ತಿಳಿದಿದ್ದು, ಹಿರೇಬಾಗೇವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಗದಗಯ್ಯ ಹಿರೇಮಠ ಹಾಗೂ ಆರೋಪಿ ವಿಠ್ಠಲ್ ಸಾಂಬ್ರೇಕರ್

ಸಾಲ ವಾಪಸ್‌ ಕೊಡದ್ದಕ್ಕೆ ಜೀವದ ಗೆಳೆಯನ ಕೊಂದ

ಕೊಟ್ಟ ಸಾಲ ವಾಪಸ್‌ ಕೊಡದೆ ಸತಾಯಿಸಿದ್ದಕ್ಕೆ ಗದಗಯ್ಯ ಹಿರೇಮಠ (40) ಎಂಬಾತನನ್ನು ವಿಠ್ಠಲ್ ಸಾಂಬ್ರೇಕರ್ (32) ಎಂಬಾತ ರುಂಡ ಕತ್ತರಿಸಿ ಹತ್ಯೆಗೈದಿದ್ದ. ಗದಗಯ್ಯ ಹಾಗೂ ವಿಠ್ಠಲ್‌ ಇಬ್ಬರು ಜೀವದ ಗೆಳೆಯರಾಗಿದ್ದು, ಹಣದ ವ್ಯವಹಾರವು ಕೊಲೆಯಲ್ಲಿ ಅಂತ್ಯವಾಗಿತ್ತು.

ಶುಕ್ರವಾರ ಕೊಂಡಸಕೊಪ್ಪದಿಂದ ಹುಬ್ಬಳ್ಳಿಗೆ ತೆರಳಲು ಗದಗಯ್ಯ ಮುಂದಾಗಿದ್ದ, ಈ ವೇಳೆ ಸ್ನೇಹಿತ ವಿಠ್ಠಲ್‌ ಸುವರ್ಣಸೌಧವರೆಗೆ ಡ್ರಾಪ್ ಕೇಳಿದ್ದ. ಒಂದೇ ಬೈಕ್‌ನಲ್ಲಿ ಇಬ್ಬರು ತೆರಳುತ್ತಿದ್ದಾಗ ಮಾರ್ಗದಲ್ಲಿ ಏಕಾಏಕಿ ಬೈಕ್‌ ಕೆಟ್ಟು ನಿಂತಿತ್ತು. ಈ ವೇಳೆ ಹಿಂದೆ ಕುಳಿತ್ತಿದ್ದ ವಿಠ್ಠಲ್‌, ತನ್ನ ಸ್ನೇಹಿತ ಗದಗಯ್ಯರ ರುಂಡ ಕತ್ತರಿಸಿ ಪರಾರಿಯಾಗಿದ್ದ.

ಶಿಂಧೊಳ್ಳಿಯಲ್ಲಿ ಪತ್ನಿ ಮನೆಯಲ್ಲಿ ವಾಸವಿದ್ದ ಗದಗಯ್ಯ ಹಿರೇಮಠ, ಸ್ನೇಹಿತ ವಿಠ್ಠಲ್ ಬಳಿ ಎರಡು ಲಕ್ಷ ಹಣ ಪಡೆದಿದ್ದ. ಕೊಟ್ಟ ಹಣ ವಾಪಸ್ ನೀಡಲು ಸತಾಯಿಸುತ್ತಿದ್ದ. ಇದಕ್ಕೆ ಆಕ್ರೋಶಗೊಂಡ ವಿಠ್ಠಲ್‌, ಮಾಂಸ ಕಟ್ ಮಾಡುವ ಹರಿತವಾದ ಮಾರಕಾಸ್ತ್ರ ತೆಗೆದುಕೊಂಡು ಬಂದಿದ್ದ. ಬೈಕ್ ಕೆಟ್ಟಿದ್ದರಿಂದ ನಿಲ್ಲಿಸಿದ್ದರಿಂದ ಹಿಂಬದಿಯಿಂದ ಹರಿತ ಕತ್ತಿಯಿಂದ ರುಂಡ ಕತ್ತರಿಸಿ ಕೊಲೆ ಮಾಡಿದ್ದ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದ.

ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು 24 ಗಂಟೆಯೊಳಗೆ ಆರೋಪಿ ವಿಠ್ಠಲ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Explainer | ಟಿಕ್‌ಟಾಕ್, ಬಿಗ್‌ಬಾಸ್, ಆ್ಯಕ್ಟಿಂಗ್, ಪಾಲಿಟಿಕ್ಸ್… ಕೊಲೆಯಾದ Sonali Phogat ಅವರ ಜೀವನದ ಕುತೂಹಲದ ಕತೆ!

Exit mobile version