ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊಗಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ತಮ್ಮ ಕೊಲೆಗೈದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಬೇರ ಗ್ರಾಮದಲ್ಲಿ ನಡೆದಿದೆ. ಬೈಕ್‌ನಲ್ಲಿ ಹೊಗುತ್ತಿದ್ದಾಗ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಕೊಲೆ (Murder Case) ಮಾಡಲಾಗಿದೆ.
ಉತ್ತಮ ಯಾದವ್ (55) ಕೊಲೆಯಾದ ವ್ಯಕ್ತಿ. ಆನಂದ ಯಾದವ್ ಕೊಲೆ ಆರೋಪಿ. ಜಮೀನು ವಿಚಾರಕ್ಕೆ ಸಹೋದರನನ್ನೇ ವ್ಯಕ್ತಿ ಮಾಡಿದ್ದಾನೆ. ತೋಟದಲ್ಲಿ ಮೇವು ತರಲು ಹೋಗಿದ್ದಾಗ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ತಮ್ಮ ಕೊಂದಿದ್ದಾನೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Dead Body Found : ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ಹಗರಿಬೊಮ್ಮನಹಳ್ಳಿಯಲ್ಲಿ 2 ಕುಟುಂಬಗಳ ಮಧ್ಯೆ ಬಡಿದಾಟ; ಇಬ್ಬರಿಗೆ ಗಾಯ, ನಾಲ್ವರ ಬಂಧನ
ವಿಜಯನಗರ: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬ ಮಧ್ಯೆ ನಡೆದ ಬಡಿದಾಟದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ (Vijayanagara News) ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಮೊನ್ನೆ ಹನಸಿ ಗ್ರಾಮದಲ್ಲಿ ಶ್ರೀ ಪರಮೇಶ್ವರಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಜರುಗಿತ್ತು. ಜಾತ್ರೆಯ ಪ್ರಯುಕ್ತ ಬಣ್ಣ ಹಚ್ಚುವ ವಿಚಾರಕ್ಕೆ ಎರಡು ಕುಟುಂಬಸ್ಥರು ಜಗಳ ಮಾಡಿಕೊಂಡಿದ್ದರು. ಹಳೇಯ ದ್ವೇಷ ಹಿನ್ನೆಲೆ ಮತ್ತೆ ಎರಡು ಕಡೆಯಯವರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರಿಗೆ ಗಾಯಗಳಾಗಿವೆ.
ವಾಲ್ಮೀಕಿ ಸಮುದಾಯದ ಶಿವಕುಮಾರ್, ಗಂಗಾಮತ ಸಮಾಜದ ಕೊಟ್ರೇಶ ಎನ್ನುವವರ ಕುಟುಂಬದ ನಡುವೆ ಗಲಾಟೆ ನಡೆದಿದೆ. ಕೊಟ್ರೇಶ್‌ಗೆ ಹೊಡೆದಿದ್ದಕ್ಕೆ ಸಹೋದರ ಬಸವರಾಜ್ ಹೋಗಿ ಶಿವಕುಮಾರ್ ಜೊತೆ ಜಗಳಕ್ಕೆ ನಿಂತಿದ್ದಾರೆ. ಹೀಗಾಗಿ ಮಾತಿಗೆ ಮಾತು ಬೆಳೆದು ದೊಣ್ಣೆ, ಕಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಶಿವಕುಮಾರ್ ಸಹೋದರ ಮಾರುತಿ, ಕೊಟ್ರೇಶ್ ಹಾಗೂ ಬಸವರಾಜ್ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಗಲಾಟೆಯಲ್ಲಿ ಮಾರುತಿ ಎಂಬುವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Begging Case : ಕುಡುಕ ಗಂಡನ ಮಾತು ಕೇಳಿ ಮಗು ಜತೆಗೆ ಭಿಕ್ಷಾಟನೆಗಿಳಿದ ತಾಯಿ
ಎರಡೂ ಕಡೆಯವರಿಂದ ಕೂಡ್ಲಿಗಿ ಠಾಣೆಯಲ್ಲಿ ದೂರು-ಪ್ರತಿದೂದು ದಾಖಲಿಸಲಾಗಿದ್ದು, ಹನಸಿ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸ್ಥಳದಲ್ಲಿ ಕೂಡ್ಲಿಗಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.