Site icon Vistara News

Murder Case: ಗೆಳೆಯನಿಗೆ ಚಾಕು ಹಾಕಿದ ಮಗ; ಅವಮಾನದಿಂದ ತಾಯಿ ಆತ್ಮಹತ್ಯೆ, ತಂದೆ ಹೃದಯಾಘಾತಕ್ಕೆ ಬಲಿ!

Father Samrat son Tejas duo jailed for murdering youth mother Indrani commits suicide‌

ಮೈಸೂರು: ಅರಮನೆನಗರೀ ಮೈಸೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರೇ ಸೇರಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿ ಜೈಲು ಸೇರಿದ್ದರು. ಬಾಲರಾಜ್‌ ಎಂಬಾತನನ್ನು ಆತನ ಸ್ನೇಹಿತರೇ ಆದ ಸಂಜಯ್, ಕಿರಣ್ ತೇಜಸ್ ಹತ್ಯೆ ಮಾಡಿದ್ದರು. ತೇಜಸ್‌ ಕೊಲೆ ಮಾಡಿ ಪರಾರಿ ಆಗಿದ್ದರೆ, ಅದೇ ಕೇಸ್​ನಲ್ಲಿ ಆತನ ತಂದೆ ಸಾಮ್ರಾಟ್‌ ಅರೆಸ್ಟ್ ಆಗಿದ್ದರು. ಇದೀಗ ಅಪ್ಪ-ಮಗ ಜೈಲುಪಾಲಾದ ವಿಷಯದಿಂದ ಮನನೊಂದ ತಾಯಿ ನೇಣಿಗೆ ಶರಣಾಗಿದ್ದಾರೆ. ತಾಯಿ ಇಂದ್ರಾಣಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಈ ವಿಷಯ ಕೇಳಿ, ಜೈಲಿನಲ್ಲಿದ್ದ ತಂದೆ ಸಾಮ್ರಾಟ್‌ಗೆ ಹೃದಯಾಘಾತವಾಗಿ (Heart Attack) ಮೃತಪಟ್ಟಿದ್ದಾರೆ.

ಕೊಲೆ ಪ್ರಕರಣದಲ್ಲಿ ತೇಜಸ್, ಸಂಜಯ್, ಕಿರಣ್ ಹಾಗೂ ತೇಜಸ್ ತಂದೆ ಸಾಮ್ರಾಟ್ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಎಲ್ಲರನ್ನೂ ಜೈಲಿಗೆ ಅಟ್ಟಿದ್ದರು. ಇದರಿಂದ ಆರೋಪಿ ತೇಜಸ್‌ ತಾಯಿ ಆಘಾತಕ್ಕೆ ಒಳಗಾಗಿದ್ದರು. ಅಪ್ಪ-ಮಗನಿಂದ ಮನೆ ಮರ್ಯಾದೆ ಬೀದಿಗೆ ಬಂತು ಎಂದು ನೊಂದಿದ್ದರು. ಈ ವಿಷಯಕ್ಕೆ ಖಿನ್ನತೆಗೆ ಜಾರಿದ ಇಂದ್ರಾಣಿ ಹೊರಗೆ ಯಾರಿಗೂ ಮುಖ ತೋರಿಸಲು ಆಗದೆ ಹಾಗೂ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುತ್ರನ ಜತೆಗೆ ಜೈಲಲ್ಲಿದ್ದ ಪತಿ ಸಾಮ್ರಾಟ್‌ಗೆ, ಪತ್ನಿ ಇಂದ್ರಾಣಿ ಸಾವಿನ ಸುದ್ದಿ ತಿಳಿದಿದೆ. ಇದರಿಂದ ನೊಂದ ಸಾಮ್ರಾಟ್‌ಗೆ ಹಠಾತ್‌ ಹೃದಯಾಘಾತವಾಗಿದೆ. ಚಿಕಿತ್ಸೆ ಫಲಿಸದೆ ಆರೋಪಿ ಸಾಮ್ರಾಟ್‌ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Bengaluru Accidents : ಜಸ್ಟ್‌ 24 ಗಂಟೆಯಲ್ಲಿ ರಾಜಧಾನಿಯಲ್ಲಿ 14 ಭೀಕರ ಅಪಘಾತ, 4 ಸಾವು!

ಏನಿದು ಘಟನೆ?

ಮೈಸೂರಿನ ವಿದ್ಯಾನಗರ ಬಡಾವಣೆಯ 4ನೇ ಕ್ರಾಸ್‌ನಲ್ಲಿ ಆಗಸ್ಟ್‌ 20ರಂದು ಯುವಕನೊಬ್ಬ ಬರ್ಬರವಾಗಿ ಕೊಲೆ ಆಗಿದ್ದ. ಬಾಲರಾಜ್ (28) ಹತ್ಯೆಯಾದವನು. ಬಾಲರಾಜ್‌ ಮೈಸೂರಿನ ವಿದ್ಯಾನಗರದ ನಿವಾಸಿ ಆಗಿದ್ದು, ಈತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಹಣಕಾಸಿನ ವಿಚಾರ ಗಲಾಟೆ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಬಾಲರಾಜ್​ ಕೊಲೆ ನಡೆದು ಹೋಗಿತ್ತು. ಕೊಲೆಯಾದ ಬಾಲರಾಜ್​ ಹಣಕಾಸಿನ ವಿಚಾರದಲ್ಲಿ ಎಲ್ಲರಿಗೂ ಟಾರ್ಚರ್ ಕೊಡುತ್ತಿದ್ದ ಎನ್ನಲಾಗಿದೆ.

ಹತ್ಯೆಯಾದ ಬಾಲರಾಜ್‌

ಆರೋಪಿಗಳಾದ ತೇಜಸ್ ಹಾಗೂ ಆತನ ತಂದೆ ಸಾಮ್ರಾಟ್‌ ಸೇರಿ ಸಂಜಯ್, ಕಿರಣ್ ಎಂಬುವವರ ವಿರುದ್ಧ ಬಾಲರಾಜ್‌ ಪೋಷಕರು ದೂರು ನೀಡಿದ್ದರು. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಬಾಲರಾಜ್‌ಗೆ ನಾಲ್ಕೈದು ಬಾರಿ ಚಾಕುವಿನಿಂದ ಚುಚ್ಚಿ ಕೊಂದು ತೇಜಸ್ ಸ್ನೇಹಿತರು ಪರಾರಿ ಆಗಿದ್ದರು. ಆದರೆ ತೇಜಸ್‌ ತಂದೆ ಸಾಮ್ರಾಟ್‌ನನ್ನು ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ತೇಜಸ್‌ ಹಾಗೂ ಆತನ ತಂದೆ ಸಾಮ್ರಾಟ್‌ ಜೈಲು ಸೇರಿದ್ದರು. ಈ ಅವಮಾನವನ್ನು ತಾಳಲಾರದೆ ತೇಜಸ್‌ ತಾಯಿ ಇಂದ್ರಾಣಿ ಅವರು ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಜೈಲಿನಲ್ಲಿದ್ದ ಸಾಮ್ರಾಟ್‌ಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಒಂದು ದುರ್ಘಟನೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿಬಿಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version