Site icon Vistara News

Murder case | ಮಗನ ದುಶ್ಚಟಕ್ಕೆ ಬೇಸತ್ತು ನಾನೇ ಅವನ ಕೊಲ್ಲಲು ಸುಪಾರಿ ಕೊಟ್ಟೆ; ತಪ್ಪೊಪ್ಪಿಕೊಂಡ ಉದ್ಯಮಿ ಭರತ್

hubballi murder case police investigation ಉದ್ಯಮಿಯಿಂದ ಮಗನ ಕೊಲೆ

ಹುಬ್ಬಳ್ಳಿ: ಸುಪಾರಿ ಕೊಟ್ಟು ಪುತ್ರನನ್ನೇ ಕೊಲ್ಲಿಸಿರುವ (Murder case) ಉದ್ಯಮಿ ಭರತ್‌ ಜೈನ್‌ ಅದಕ್ಕೆ ಒಂದು ವರ್ಷದ ಹಿಂದೆಯೇ ಪ್ಲ್ಯಾನ್‌ ಮಾಡಿದ್ದ ಎಂಬ ಆಘಾತಕಾರಿ ಅಂಶ ತನಿಖೆ ವೇಳೆ ಗೊತ್ತಾಗಿದೆ. ಮಗನ ದುಶ್ಚಟವೇ ಕೊಲೆಗೆ ಮುಖ್ಯ ಕಾರಣ ಎಂದು ಆರೋಪಿ ತಂದೆ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ.

ಆರೋಪಿ ಭರತ್‌ ಜೈನ್

ಡಿಸೆಂಬರ್‌ ೧ರಂದು ಅಖಿಲ್‌ ನಾಪತ್ತೆಯಾಗಿದ್ದಾನೆ ಎಂದು ತಂದೆ, ಉದ್ಯಮಿ ಭರತ್‌ ಕೇಶ್ವಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದ. ಈ ವೇಳೆ ತನ್ನ ಮಗನನ್ನು ಹುಡುಕಿಕೊಡಿ ಎಂದು ಹೈಡ್ರಾಮಾ ನಡೆಸಿದ್ದ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಅಖಿಲ್‌ ಸೇರಿದಂತೆ ಮನೆಯವರ ಕಾಲ್‌ ಲಿಸ್ಟ್‌ ಅನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಅಖಿಲ್‌ ತಂದೆ ಭರತ್‌ ಸುಪಾರಿ ಹಂತಕರ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಹಂತಕರಿಗೆ ಹಲವಾರು ಬಾರಿ ಕರೆ ಹೋಗಿರುವುದು, ಅವರಿಂದ ಕರೆ ಬಂದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಭರತ್‌ನನ್ನು ವಶಕ್ಕೆ ಪಡೆದುಕೊಂಡಾಗ ಕೊಲೆ ವಿಷಯ ಬಹಿರಂಗವಾಗಿತ್ತು.

ಹತ್ಯೆಯಾದ ಅಖಿಲ್

ಮಗನನ್ನೇ ಕೊಂದಿದ್ದು ಹೇಗೆ? ಏಕೆ?
ಡಿಸೆಂಬರ್ 1ರಂದು ತನ್ನದೇ ಕಾರಿನಲ್ಲಿ ಪುತ್ರ ಅಖಿಲ್‌ನನ್ನು ಫಾರ್ಮ್‌ಹೌಸ್‌ಗೆ ಭರತ್ ಜೈನ್. ಅಲ್ಲಿ ಪೂರ್ವನಿಗದಿಯಂತೆ ನಾಲ್ವರು ಸುಪಾರಿ ಹಂತಕರು ಕಾದು ಕುಳಿತಿದ್ದರು. ಅವರಿಗೆ ಮಗನನ್ನು ಒಪ್ಪಿಸಿ ಕಾರು ತೆಗೆದುಕೊಂಡು ವಾಪಸ್‌ ಬಂದಿದ್ದಾನೆ.

ಇದನ್ನೂ ಓದಿ | Moral policing | ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಥಳಿತ, ಸಹೋದ್ಯೋಗಿ ಯುವತಿ ಜತೆ ಆತ್ಮೀಯವಾಗಿದ್ದಕ್ಕೆ ಆಕ್ಷೇಪ

೧೦ ಲಕ್ಷ ರೂಪಾಯಿ ಸುಪಾರಿ ನೀಡಿದ್ದ!
ಪುತ್ರನ ಹತ್ಯೆ ಮಾಡುವ ಸಂಬಂಧ ಮಹಾದೇವ ನಾಲವಾಡ ಎಂಬಾತನಿಗೆ ಭರತ್‌ ಜೈನ್‌ ೧೦ ಲಕ್ಷ‌ ರೂಪಾಯಿಗೆ ಸುಪಾರಿ ನೀಡಿದ್ದ. ಕೊಲೆ ಮಾಡುವುದು ಎಲ್ಲಿ ಎಂಬ ವಿಷಯ ಬಂದಾಗ, ತಾನೇ ಪ್ಲ್ಯಾನ್‌ ಮಾಡಿದ ತನ್ನ ತೋಟದ ಮನೆಗೆ ಕರೆತಂದು ಬಿಡುವುದಾಗಿ ಹೇಳಿಕೊಂಡಿದ್ದ. ಆ ಮಾತಿನ ಪ್ರಕಾರ ತನ್ನ ಮಗನನ್ನು ಭರತ್‌ ಜೈನ್‌ ತೋಟದ ಮನೆಗೆ ಕರೆತಂದು ಸುಪಾರಿ ಹಂತಕರಿಗೆ ಒಪ್ಪಿಸಿದ್ದ.

ತೋಟದ ಮನೆಯಲ್ಲಿ ಪೊಲೀಸ್‌ ಕಾರ್ಯಾಚರಣೆ

ಕೊಲೆ ಮಾಡಿದ ನಾಲ್ವರು ಹಂತಕರು
ತೋಟದ ಮನೆಯಲ್ಲಿದ್ದ ಅಖಿಲ್‌ನನ್ನು ಅಲ್ಲಿ ಮೊದಲೇ ತಂಗಿದ್ದ ನಾಲ್ವರು ಹಂತಕರು ಕತ್ತು ಹಿಸುಕಿ ಸಾಯಿಸಿದ್ದಾರೆ. ಬಳಿಕ ಮೃತದೇಹವನ್ನು ಅಜ್ಞಾತ ಸ್ಥಳದಲ್ಲಿ ಹೂತು ಹಾಕಿದ್ದಾರೆ. ಬಳಿಕ ಏನೂ ಆಗಿಲ್ಲ ಎಂಬಂತೆ ಹಂತಕರು ಪರಾರಿಯಾಗಿದ್ದಾರೆ.

ಡೆಡ್‌ಬಾಡಿ ಫೋಟೊಗಾಗಿ ಹಂತಕರಿಗೆ ಪದೇ ಪದೆ ಕಾಲ್‌
ಮಗನನ್ನು ಹಂತಕರ ಕೈಗೊಪ್ಪಿಸಿ ಬಂದಿದ್ದ ಭರತ್‌ ಜೈನ್‌ಗೆ ಕಳವಳ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಹಂತಕರಿಗೆ ಹಲವಾರು ಬಾರಿ ಕರೆ ಮಾಡಿ ತಿಳಿದುಕೊಂಡಿದ್ದಾನೆ. ಹತ್ಯೆ ಮಾಡಿದ್ದೇವೆಂದರೂ ಫೋಟೊ ಕಳುಹಿಸುವಂತೆ ಹೇಳಿದ್ದಾನೆ. ಅಲ್ಲಿಂದ ಫೋಟೊ ಬಂದ ಮೇಲೆ ಕನ್ಫರ್ಮ್‌ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ | Interest rate | ಆರ್‌ಬಿಐ ನೀತಿ ಸಭೆ ನಾಳೆ ಮುಕ್ತಾಯ, 0.25-30% ಬಡ್ಡಿ ದರ ಏರಿಕೆ?

ದುಶ್ಚಟವೇ ಕೊಲೆಗೆ ಕಾರಣ
ದುಶ್ಚಟಗಳಿಗೆ ದಾಸನಾಗಿದ್ದ ಮಗ ಅಖಿಲ್‌ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ತನಗೆ ಮರ್ಯಾದೆ ಕೊಡುತ್ತಿರಲಿಲ್ಲ. ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದ. ಇದರಿಂದ ಮಾನಸಿಕವಾಗಿ ನೊಂದು ಸುಪಾರಿ ಕೊಟ್ಟು ಕೊಲೆ ಮಾಡಿಸಿದೆ. ಕೊಲೆ ಮಾಡಿಸಲು ಒಂದು ವರ್ಷದ ಹಿಂದೆಯೇ ಪ್ಲ್ಯಾನ್‌ ಮಾಡಿಕೊಂಡಿದ್ದೆ ಎಂದು ಭರತ್‌ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಕಲಘಟಗಿ ಬಳಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.

ಈಗ ಭರತ್ ಜೈನ್, ಮಹಾದೇವ ನಾಲವಾಡ್, ಸಲೀಮ್ ಸಲಾವುದ್ದೀನ್, ರೆಹಮಾನ್ ಹಾಗೂ ಇನ್ನೊಬ್ಬನ (ಹೆಸರು ತಿಳಿದುಬಂದಿಲ್ಲ) ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Border dispute | ಪುಣೆಯಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಕ ಶಿವಸೇನೆ ಪುಂಡರು, ಬಸ್‌ ಸಂಚಾರ ಬಂದ್‌

Exit mobile version