Site icon Vistara News

Murder Case : ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

Four members of a family murdered in Udupi

ಉಡುಪಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆಯಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ಈ ಕೃತ್ಯ (Murder case) ನಡೆದಿದೆ. ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆಯಾಗಿದೆ.

ಹಸೀನಾ (46), ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಮೃತ ದುರ್ದೈವಿ. ಚೂರಿಯಿಂದ ಚುಚ್ಚಿ ಕೊಲೆಗೈದು ಹಂತಕರು ಪರಾರಿ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕಾಗಮಿಸಿದ ಶ್ವಾನ ದಳ

ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಮೊದಲು ಮನೆ ಯಜಮಾನಿಗೆ ಚೂರಿ ಇರಿಯಲಾಗಿದೆ. ಬಳಿಕ ಮಕ್ಕಳಾದ ಅಫ್ನಾನ್,ಅಯ್ನಾಝ್‌ಗೆ ಚಾಕುವಿನಿಂದ ಇರಿದಿದ್ದಾರೆ. ಸದ್ದು ಕೇಳಿ ಆಟವಾಡುತ್ತಿದ್ದ ಆಸಿಂ ಒಳ ಬರುತ್ತಿದ್ದಂತೆ ಆತನನ್ನು ಕೊಂದಿದ್ದಾರೆ. ಇವರ ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನು ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮನೆಯೊಳಗಿದ್ದ ಮತ್ತೊಬ್ಬ ಮಹಿಳೆಗೂ ತೀವ್ರ ಗಾಯಗಳಾಗಿದೆ. ಮನೆಯೊಡತಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್‌ಪಿ ಅರುಣ್ ಕುಮಾರ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: DeepFake: ಡೀಪ್‌ಫೇಕ್‌ ವಿಡಿಯೊ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಪಕ್ಕಾ!

ಪ್ರೀತಿ ಒಪ್ಪದ ಯುವತಿ ಫೋಟೊ ಅಶ್ಲೀಲವಾಗಿ ಎಡಿಟ್‌ ಮಾಡಿದ ಬೆಳಗಾವಿ ಯುವಕ; ಡೀಪ್‌ಫೇಕ್ ಕೇಸ್!

ಬೆಳಗಾವಿ: ನಟಿ ರಶ್ಮಿಕಾ ಮಂದಣ್ಣ ಅವರ ‘ಡೀಪ್‌ಫೇಕ್’‌ (Deepfake) ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ವಿಡಿಯೊ ಎಡಿಟ್‌ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಬೆಳಗಾವಿಯಲ್ಲೊಬ್ಬ (Belagavi) ಯುವಕನು ಪ್ರೇಮ ನಿವೇದನೆ ಒಪ್ಪದ ಯುವತಿಯ ಫೋಟೊವನ್ನು ಅಶ್ಲೀಲವಾಗಿ ಚಿತ್ರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದು ಕೂಡ ಡೀಪ್‌ಫೇಕ್‌ನಷ್ಟೇ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಯುವಕ ಮಂಥನ್‌ ಪಾಟೀಲ್‌ (22) ಎಂಬಾತನು ಹೀನ ಕೃತ್ಯ ಎಸಗಿದ್ದಾನೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಂಥನ್‌ ಪಾಟೀಲ್‌, ಖಾನಾಪುರ ಪಟ್ಟಣದ ಕಾಲೇಜು ವಿದ್ಯಾರ್ಥಿನಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದ. ಈತ ಎಷ್ಟು ಗೋಗರೆದರೂ ಯುವತಿಯು ಪ್ರೀತಿಯನ್ನು ಒಪ್ಪದ ಕಾರಣ ಆಕೆಯ ಫೋಟೊವನ್ನು ಬೇರೊಂದು ನಗ್ನ ಫೋಟೊ ಜತೆ ಎಡಿಟ್‌ ಮಾಡಿದ್ದಾನೆ. ಅಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು, ಅದನ್ನು ಅಪ್‌ಲೋಡ್‌ ಮಾಡಿದ್ದಾನೆ.

Arrest

ಎಡಿಟ್‌ ಮಾಡಲಾದ ಫೋಟೊವನ್ನು ಯುವತಿಗೆ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಆಗಲೂ ಯುವತಿಯು ಪ್ರೀತಿಯನ್ನು ನಿರಾಕರಿಸಿದ್ದಾಳೆ. ಹಾಗೆಯೇ, ಯುವಕನಿಗೆ ಬಾಯಿಗೆ ಬಂದಹಾಗೆ ಬೈದಿದ್ದಾಳೆ. ಇದರಿಂದ ಮತ್ತಷ್ಟು ಕೆರಳಿದ ಮಂಥನ್‌ ಪಾಟೀಲ್‌, ಯುವತಿಯ ಮೂವರು ಗೆಳತಿಯರ ಫೋಟೊಗಳನ್ನೂ ನಗ್ನವಾಗಿ ಚಿತ್ರಿಸಿದ್ದಾನೆ. ಮೂವರು ಗೆಳತಿಯರ ಫೋಟೊಗಳನ್ನೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ.

ಡೀಪ್‌ಫೇಕ್‌ ಮಾದರಿಯಲ್ಲೇ ಮತ್ತೊಂದು ಆ್ಯಪ್‌ನಲ್ಲಿ ಯುವಕನು ಯುವತಿಯರ ಫೋಟೊಗಳನ್ನು ಎಡಿಟ್‌ ಮಾಡಿದ್ದಾನೆ. ಪ್ರೀತಿಸು ಎಂದು ಯುವತಿ ಮೇಲೆ ಒತ್ತಡ ಹೇರುವುದು, ಪ್ರೀತಿ ಒಪ್ಪದಿದ್ದರೆ ಫೋಟೊಗಳನ್ನು ವೈರಲ್‌ ಮಾಡುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಇದಾದ ಬಳಿಕ ಯುವತಿಯು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ನಂತರ ಖಾನಾಪುರ ಪೊಲೀಸರು ಮಂಥನ್‌ ಪಾಟೀಲ್‌ನನ್ನು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version