ಗದಗ: ತವರು ಮನೆಯಿಂದ ಬಾಣಂತನ ಮುಗಿಸಿ ಗಂಡನ ಮನೆಗೆ ಬಂದಿದ್ದ ಆಕೆಗೆ ಕೆಲವೇ ದಿನಗಳಲ್ಲಿ ಅಘಾತವೊಂದು ಕಾದಿತ್ತು. ಚೆನ್ನಾಗಿದ್ದ 9 ತಿಂಗಳ ಹಸುಗೂಸು ಏಕಾಏಕಿ ಮೃತಪಟ್ಟಿತ್ತು. ಕಾರಣ ಮಾತ್ರ ನಿಗೂಢವಾಗಿತ್ತು. ಆದರೆ ಇದೀಗ ಮಗುವನ್ನು ನನ್ನ ಅತ್ತೆಯೇ ಕೊಂದಿದ್ದಾರೆ (Murder Case) ಎಂದು ಸೊಸೆ ದೂರು ನೀಡಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮಗುವಿನ ಅಜ್ಜಿಯಿಂದಲೇ ಕೊಲೆ ನಡೆದಿದೆ ಎಂದು ದೂರು ದಾಖಲಾಗಿದೆ. ನವೆಂಬರ್ 22 ರಂದು ಈ ಕೃತ್ಯ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ನಾಗರತ್ನ ಎಂಬುವವರ 9 ತಿಂಗಳ ಮಗುವು ನಿಗೂಢವಾಗಿ ಮೃತಪಟ್ಟಿತ್ತು. ಕುಟುಂಬಸ್ಥರೆಲ್ಲರೂ ಸೇರಿ ಜಮೀನಿನಲ್ಲಿ ಮಗುವಿನ ಅಂತ್ಯಸಂಸ್ಕಾರವನ್ನು ನಡೆಸಿದ್ದರು. ಇದೀಗ ಅತ್ತೆ ಸರೋಜಾ ವಿರುದ್ಧ ಸೊಸೆ ನಾಗರತ್ನ ದೂರು ನೀಡಿದ್ದಾರೆ.
ಹೆರಿಗೆ ಆದ ಐದು ತಿಂಗಳ ಬಳಿಕ ಗಂಡನ ಮನೆಗೆ ತಾಯಿ, ಮಗು ಬಂದಾಗ, ಅತ್ತೆ ಸರೋಜಾ ಇಷ್ಟು ಬೇಗ ಮಗು ಬೇಕಿತ್ತಾ ಎಂದು ಸಿಟ್ಟಿನಿಂದ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಮಗುವಿಗೆ ಅಡಿಕೆ ಹೋಳು, ಎಲೆ ತುಂಬ ತಿನ್ನಿಸಿ ಉಸಿರುಗಟ್ಟಿಸಿ ಕೊಂದಿರುವುದಾಗಿ ದೂರಿನಲ್ಲಿ ಉಲ್ಲೇಖಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಗದಗ ಎಸಿ ವೆಂಕಟೇಶ ನಾಯಕ್, ಸಿಪಿಐ ಎಸ್.ಎಸ್ ಬೀಳಗಿ ನೇತೃತ್ವದಲ್ಲಿ ಮಗುವಿನ ಶವ ತೆಗೆಯಲಾಗಿದೆ. ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಜೇಂದ್ರಗಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮಗು ಮೃತಪಟ್ಟಿದ್ದು ಹೇಗೆ ಎಂಬುದು ತಿಳಿಯಲಿದೆ.
ನಾದಿನಿ ಜತೆ ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ಯದ್ವಾತದ್ವಾ ಹಲ್ಲೆ, ಮುಖಕ್ಕೆ ಮೂತ್ರ ಮಾಡಿ ವಿಕೃತಿ
ಮೈಸೂರು: ತನ್ನ ನಾದಿನಿ ಜತೆ ಅಶ್ಲೀಲವಾಗಿ (Indescent Behaviour) ನಡೆದುಕೊಂಡಿದ್ದನ್ನು ಪ್ರಶ್ನಿಸಿದ ಯುವಕನಿಗೆ ಆಂಬ್ಯುಲೆನ್ಸ್ ಡ್ರೈವರ್ (Ambulance driver) ಒಬ್ಬ ಮಾರಣಾಂತಿಕವಾಗಿ ಹಲ್ಲೆ (Murderous attack) ಮಾಡಿದ್ದಾನೆ. ಮನ ಬಂದಂತೆ ಥಳಿಸಿದ್ದು (Attack on youth) ಮಾತ್ರವಲ್ಲ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ ಆಂಬ್ಯುಲೆನ್ಸ್ ಡ್ರೈವರ್.
ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್‌ನ ಆಂಬ್ಯುಲೆನ್ಸ್ ಡ್ರೈವರ್ ಸಂದೇಶ್ ಈ ರೀತಿಯಾಗಿ ವಿಕೃತಿ ಮೆರೆದವನು. ಅದೇ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಮಹೇಶ್ ಮೇಲೆ ಆತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೀಗ ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೌಚಾಲಯಲ್ಲಿ ಕ್ಯಾಮೆರಾ ಇಟ್ಟಿದ್ದ ಕಿರಾತಕ!
ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿದ್ದ ಮಹೇಶ್‌ನನ್ನು ಭೇಟಿಯಾಗಲು ಆಗಾಗ ಅವನ ನಾದಿನಿ ಬರುತ್ತಿದ್ದಳು. ಆಗ ಆಂಬ್ಯುಲೆನ್ಸ್ ಚಾಲಕ ಸಂದೇಶ್ ಆಕೆಯ ಜತೆಗೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನಂತೆ. ಮಹೇಶ್ ಅದನ್ನು ಪ್ರಶ್ನೆ ಮಾಡಿದ್ದ, ಜತೆಗೆ ಆಸ್ಪತ್ರೆ ಅಧಿಕಾರಿಗಳಿಗೆ ದೂರು ಕೂಡಾ ನೀಡಿದ್ದ. ಇದು ಸಂದೇಶ್‌ನನ್ನು ಕೆರಳಿಸಿತ್ತು.
ಕಳೆದ ಸೋಮವಾರ ಆಸ್ಪತ್ರೆಗೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ನನ್ನು ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿರುವ ಸಂದೇಶ್ ಅಲ್ಲಿ ಗೆಳೆಯರ ಜತೆ ಸೇರಿ ಹಲ್ಲೆ ಮಾಡಿದ್ದಾನೆ.
ಸಂದೇಶ್ ಹಾಗೂ ಸ್ನೇಹಿತರು ಮಹೇಶ್ ತಲೆ ಭಾಗ ಹೊಡೆದು ಹಾಗೂ ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ ಸಂದೇಶ್ ಹಾಗೂ ಆತನ ಸ್ನೇಹಿತರು.
ಸಂದೇಶ್‌ನ ವಿಕೃತಿ ಇದು ಮೊದಲೇನಲ್ಲ. ಆತ ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್ ಗಳ ವಿಡಿಯೊ ಮಾಡಿ ಸಿಕ್ಕಿಬಿದ್ದಿದ್ದ. ಈ ವಿಚಾರಕ್ಕೆ ಕೆ.ಆರ್.ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು. ಮತ್ತೆ ಟ್ರಾಮಾ ಸೆಂಟರ್ ಗೆ ಕೆಲಸಕ್ಕೆ ಸೇರಿದ್ದ. ಆದರೆ, ಇಲ್ಲೂ ತನ್ನ ವಿಕೃತಿಯನ್ನು ಮುಂದುವರಿಸಿದ್ದ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.