Site icon Vistara News

Murder Case : ಅವನಿಗೆ ಕೊಲೆ ಮಾಡಿದ್ದೇ ನೆನಪಿಲ್ಲ, ಕಾರಣ ಮೊದಲೇ ಗೊತ್ತಿಲ್ಲ! ಕಲ್ಲಿನೊಂದಿಗೆ ಠಾಣೆಗೆ ಬಂದವನ ಡೆಡ್ಲಿ ಕತೆ!

Bangalore Murder

ಬೆಂಗಳೂರು: ರಾತ್ರಿ ಕಂಠಪೂರ್ತಿ ಕುಡಿದಿದ್ದ ಅವನು ಬೆಳಗ್ಗೆ ಎಂದಿನಂತೆ ಎದ್ದು ಶಿಸ್ತಾಗಿ ಕೆಲಸಕ್ಕೆ ಹೋಗಲು ರೆಡಿಯಾಗಿದ್ದ.‌ ಅಲ್ಲಿಯವರೆಗೂ ಕುಡಿತದ ಮಂಪರಿನಲ್ಲೇ ಇದ್ದವನಿಗೆ ಒಮ್ಮೆಗೇ ರಾತ್ರಿ ನಡೆದ ಘಟನೆ ನೆನಪಾಗಿತ್ತು. ಅಂದ ಹಾಗೆ ಆ ಘಟನೆ ಏನೂ ಅಂದ್ರೆ ಕೊಲೆ ((murder in inebriated state)! ತಾನೊಂದು ಕೊಲೆ ಮಾಡಿದ್ದೇನೆ (Murder Case) ಎಂದು ಮೆಲ್ಲಮೆಲ್ಲನೆ ನೆನಪಾದ ಅವನಿಗೆ ಕೊಲೆ ಮಾಡಿದ ಕಾರಣ ಮಾತ್ರ ಮಧ್ಯಾಹ್ನವಾದರೂ ನೆನಪಾಗಲೇ ಇಲ್ಲ. ಯಾರೀ ಕೊಲೆಗಾರ? (who is the murderer?) ಕೊಲೆಯಾದವನು ಯಾರು? (Who is the victim?) ಇಲ್ಲಿದೆ ಒಂದು ಭಯಾನಕ ಕಥೆ.

ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆ ಕಿರಿಕ್ ಮಾಡಿಕೊಂಡು ಕೊನೆಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಒಂದು ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಮಂಗಳವಾರ ರಾತ್ರಿ ಕುಡಿತದ ಮತ್ತಿನಲ್ಲೇ ಗೆಳೆಯ ಚೇತನ್ ಜೊತೆ ಕೊಮ್ಮಘಟ್ಟ ಮೈದಾನದ ಬಳಿಗೆ ಹೋಗಿದ್ದ ಅಮಾನುಲ್ಲಾ ಕೊನೆಗೆ ಆತನ ಮೇಲೆ ಸೈಜ್ ಗಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದ ಅಮಾನುಲ್ಲಾಗೆ 21 ವರ್ಷದ ಚೇತನ್ ಬಹು ದಿನದ ಪರಿಚಯ. ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಜಗಳವೂ ನಡೆಯುತ್ತಲೇ ಇತ್ತು. ಇಬ್ಬರೂ ಜೊತೆಗೆ ಕುಡಿಯುತ್ತಿದ್ದರು. ಹಾಗೆ ಮಂಗಳವಾರ ರಾತ್ರಿ ಇಬ್ಬರೂ ಕುಡಿದುಕೊಂಡು ಕೊಮ್ಮಘಟ್ಟ ಮೈದಾನದ ಬಳಿ ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆಯೂ ಜಗಳ ನಡೆದಿದೆ.

ಎಣ್ಣೆ ನಶೆಯಲ್ಲಿದ್ದವರು ಕಿತ್ತಾಡಿ ಸುಮ್ಮನಾಗಿರಲಿಲ್ಲ. ಅಮಾನುಲ್ಲಾ ಅಲ್ಲೇ ಇದ್ದ ಸೈಜ್ ಕಲ್ಲು ಕೈಗೆತ್ತಿಕೊಂಡು ಚೇತನ್ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಮೊದಲೇ ನಶೆಯಲ್ಲಿದ್ದ ಆರೋಪಿ ಹತ್ಯೆ ನಡೆಸಿದ ಕಲ್ಲನ್ನು ಬಟ್ಟೆಯೊಂದರಲ್ಲಿ ಕಟ್ಟಿ ಅದರ ಜೊತೆ ಸೀದಾ ಮನೆಗೆ ಹೋಗಿ ಮಲಗಿದ್ದಾನೆ.. ಬೆಳಗ್ಗೆ ಎದ್ದು ನೀಟಾಗಿ ಸ್ನಾನ ಮಾಡಿ ಮನೇಲಿ ಕೂತಿದ್ದವನಿಗೆ ರಾತ್ರಿ ಏನೋ ನಡೆದಿದೆ ಎಂದು ಗೊತ್ತಾಗಿದೆ.. ನೆನಪು ಮಾಡಿಕೊಂಡಾಗ ತನ್ನ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿರೋದು ಗೊತ್ತಾಗಿದೆ.. ಕೂಡಲೇ ಕಲ್ಲಿನ್ನು ತೆಗೆದುಕೊಂಡು ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇದನ್ನೂ ಓದಿ: Social Media Post : ವಿದ್ಯಾರ್ಥಿನಿಯರ ಅಶ್ಲೀಲ‌ ಫೋಟೊ ಅಪ್ಲೋಡ್ ಮಾಡಿದ ಯುವಕ ಅರೆಸ್ಟ್; ಅವನ ಟಾರ್ಗೆಟೇ ವಿಚಿತ್ರ!

ಅಲ್ಲಿ ಹೋಗಿ ನಡೆದ ಘಟನೆಯನ್ನೆಲ್ಲ ಹೇಳಿದ ಅಮಾನುಲ್ಲಾನನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಶೆ ಇಳಿದಾಗ ಕೊಲೆ ಮಾಡಿದ್ದು ನೆನಪಾದರೂ ಕೊಲೆ ಮಾಡಿದ ಕಾರಣ ಮಾತ್ರ ಇನ್ನೂ ನೆನಪಾಗುತ್ತಿಲ್ಲ ಎನ್ನುತ್ತಿದ್ದಾನೆ. ಪೊಲೀಸರು ಚೆನ್ನಾಗಿ ವಿಚಾರಿಸಿದರೆ ಅದೂ ಹೊರಗೆ ಬರಬಹುದೇನೋ. ಅಸಲಿ ಕಾರಣ ಬಾಯಿ ಬಿಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version