Site icon Vistara News

Murder Case | ಸ್ನೇಹಿತನನ್ನೇ ಕೊಲೆ ಮಾಡಿ, ಮೃತದೇಹದೊಂದಿಗೆ ಪೊಲೀಸ್‌ ಠಾಣೆಗೆ ಬಂದ!

murder case

ಬೆಂಗಳೂರು: ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದವರು. ಆದರೆ, ಸ್ನೇಹಿತ ಮಾಡಿದ ಮೋಸವನ್ನು ಸಹಿಸಲು ಆಗದೆ ಜಗಳವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತನನ್ನೇ ಕೊಲೆ (Murder Case) ಮಾಡಿ ಆತನ ಮೃತದೇಹದೊಂದಿಗೆ ರಾಮಮೂರ್ತಿನಗರ ಪೊಲೀಸ್‌ ಠಾಣೆಗೆ ಬಂದ ಆರೋಪಿ ಶರಣಾಗಿದ್ದಾನೆ.

ಆರೋಪಿ ರಾಜಶೇಖರ್‌

ನಂಜನಗೂಡು ಬಳಿಯ ಹಿಮನಗುಂಡಿಯ ಮಹೇಶಪ್ಪ ಕೊಲೆಯಾದ ದುರ್ದೈವಿ. ರಾಜಶೇಖರ್ ಎಂಬಾತ ಕೊಲೆ ಮಾಡಿ ಮೃತದೇಹದ ಸಹಿತ ಠಾಣೆಗೆ ಬಂದ ಆರೋಪಿ. ಅಂದಹಾಗೆ, ನಂಜನಗೂಡು ಬಳಿಯ ಹಿಮನಗುಂಡಿ ಎಂಬ ಹಳ್ಳಿಯಿಂದ ಮಹೇಶಪ್ಪನನ್ನು ಬೆಂಗಳೂರಿಗೆ ರಾಜಶೇಖರ್‌ ಕರೆತಂದಿದ್ದರು.

ಈ ಹಿಂದೆ ಮಹೇಶಪ್ಪ ರಾಮಮೂರ್ತಿ ನಗರದ ಜಯಂತಿ ನಗರದಲ್ಲಿ ವಾಸಿಸುತ್ತಿದ್ದರು. ರಾಜಶೇಖರ್‌ ಜತೆಗೆ ಒಳ್ಳೆಯ ಗೆಳತನ ಬೆಳೆಸಿದ್ದ ಮಹೇಶಪ್ಪ, ಬ್ಯಾಂಕ್‌ಗಳಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದಿದ್ದ. ಈ ಎಲ್ಲ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜತೆಗಿದ್ದರು. ಆದರೆ ಯಾರಿಗೂ ಲೋನ್ ಕೊಡಿಸದೇ ಪಡೆದ ಹಣ ವಾಪಸ್ ನೀಡದೇ ಮಹೇಶಪ್ಪ ಪರಾರಿ ಆಗಿದ್ದ.

ಇತ್ತ ಜನರೆಲ್ಲರೂ ರಾಜಶೇಖರ್‌ನನ್ನು ಪ್ರಶ್ನಿಸಲು ಶುರು ಮಾಡಿದಾಗ, ತಮ್ಮ ಮನೆಯನ್ನು ಮಾರಾಟ ಮಾಡಿ ಹಲವರಿಗೆ ಕೊಡಬೇಕಿದ್ದ ಹಣ ನೀಡಿದ್ದರು. ಈ ಮಧ್ಯ ರಾಜಶೇಖರ ಮಹೇಶಪ್ಪನ್ನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದರು. ನಂಜನಗೂಡಿನಲ್ಲಿ ಮಹೇಶನಪ್ಪನನ್ನು ಕಾರಿನಲ್ಲಿ ಕರೆತಂದು ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ರಾಜಶೇಖರ್‌ ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ರಾಜಶೇಖರ್‌ ಮಹೇಶಪ್ಪನಿಗೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ತೀವ್ರ ಗಾಯಗೊಂದ ಮಹೇಶಪ್ಪ ಮೃತಪಟ್ಟಿದ್ದಾನೆ.

ಈ ವೇಳೆ ಗಾಬರಿಗೊಂಡ ರಾಜಶೇಖರ್‌, ತಕ್ಷಣ ಅದೇ ಕಾರಿನಲ್ಲಿ ಮಹೇಶಪ್ಪನ ಮೃತದೇಹ, ಹಲ್ಲೆ ಮಾಡಿದ್ದ ರಾಡ್ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ನಡೆದಿದ್ದನ್ನು ಹೇಳಿದ್ದಾರೆ. ಸುಮಾರು ಒಂದೂವರೆ ಕೋಟಿ ಹಣ ಕೊಡಬೇಕು ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ದೂರು ದಾಖಲಿಸಿ ರಾಜಶೇಖರನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Midday Meal |‌ ಬಿಸಿಯೂಟದಲ್ಲಿ ಹುಳಗಳು ಪತ್ತೆ; ಜನಪ್ರತಿನಿಧಿಗಳ ಸಭೆಗೆ ತಟ್ಟೆ ಹಿಡಿದು ಬಂದ ವಿದ್ಯಾರ್ಥಿನಿಯರು

Exit mobile version