ಕೋಲಾರ: ತಾಯಿಯ ಸಾವಿನ ಬಳಿಕ ಅಜ್ಜಿ ಮನೆಯಲ್ಲೇ ಉಳಿದು, ತನ್ನ ಜತೆ ಬರಲು ಒಪ್ಪದ ಎಂಟು ವರ್ಷದ ಮಗನನ್ನು ಪಾಪಿ ತಂದೆಯೊಬ್ಬ ಚೂರಿಯಿಂದ ಇರಿದು ಕೊಲೆ (Murder Case) ಮಾಡಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ಈ ಘಟನೆ ನಡೆದಿದೆ.
ಎಂಟು ವರ್ಷದ ಬಾಲಕ ಭುವನ್ ತೇಜ್ ಅಪ್ಪನ ಕೈಯಿಂದಲೇ ಕೊಲೆಯಾದ ದುರ್ದೈವಿ ಮಗ. ಸುಬ್ರಮಣಿ ನಂಗಲಿ ಎಂಬಾತನೇ ಕೊಲೆಗಾರ ತಂದೆ.
ಭುವನ್‌ತೇಜ್ ತನ್ನ ತಂದೆ ಮತ್ತು ತಾಯಿಯ ಜತೆ ಬೆಂಗಳೂರಿನಲ್ಲಿ ಇದ್ದ. ಈ ನಡುವೆ ಸುಬ್ರಹ್ಮಣ್ಯ ನಂಗಲಿಯ ಪತ್ನಿ ಸಾವನ್ನಪ್ಪಿದ್ದರು. ಭುವನ್‌ತೇಜ್‌ಗೆ ಅಪ್ಪನ ಮೇಲೆ ಅಷ್ಟೊಂದು ಇಷ್ಟವಿರಲಿಲ್ಲ. ಹೀಗಾಗಿ ಅವನು ಅಮ್ಮನ ಸಾವಿನ ಜತೆ ಅಪ್ಪನ ಜತೆ ಇರಲು ಒಪ್ಪಿರಲಿಲ್ಲ.
ಹೀಗಾಗಿ ಕೋಲಾರದ ನಂಗಲಿ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಅಜ್ಜಿ ಜೊತೆ ವಾಸವಿದ್ದ ಬಾಲಕ, ಅಜ್ಜಿ ಮನೆಯವರು ಆತನನ್ನು ಕರೆದುಕೊಂಡು ಹೋಗಿದ್ದರು. ಈ ನಡುವೆ, ನಂಗಲಿ ಆಗಾಗ ಕೋಲಾರದ ಮನೆಗೆ ಹೋಗಿ ಮಗನನ್ನು ತನ್ನ ಜತೆ ಬರುವಂತೆ ಒತ್ತಾಯಿಸುತ್ತಿದ್ದ. ಆದರೆ ಭುವನ್ ತೇಜ್ ಒಪ್ಪುತ್ತಲೇ ಇರಲಿಲ್ಲ.
ಸೋಮವಾರವೂ ಸುಬ್ರಹ್ಮಣ್ಯ ನಂಗಲಿ ಕೋಲಾರದಲ್ಲಿರುವ ಮನೆಗೆ ಹೋಗಿದ್ದಾನೆ. ಆಗಲೂ ಭುವನ್ ತೇಜ್‌ನನ್ನು ತನ್ನ ಜತೆಗೆ ಬರುವಂತೆ ಕರೆದಿದ್ದಾನೆ. ಆದರೆ ಭುವನ್ ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ತಂದೆ ಮಗನಿಗೆ ಚೂರಿಯಿಂದ ಇರಿದಿದ್ದಾನೆ.
ಭುವನ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಘಟನಾ ಸ್ಥಳಕ್ಕೆ ನಂಗಲಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗಾರ ತಂದೆ ಸುಬ್ರಮಣಿ ನಂಗಲಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಮೊಬೈಲ್ ಅಂಗಡಿ ಅಗ್ನಿಗಾಹುತಿ
ಬೆಂಗಳೂರು: ರಾಜಧಾನಿಯ ವಿಜಯನಗರದಲ್ಲಿ ಬೆಳ್ಳಂಬೆಳಗ್ಗೆ ಮೊಬೈಲ್ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ (Fire tragedy). ಒಮ್ಮಿಂದೊಮ್ಮೆಗೆ ಹುಟ್ಟಿಕೊಂಡ ಬೆಂಕಿ, ಧಗಧಗಿಸಿ ಉರಿಯುತ್ತಿರುವುದನ್ನು ಕಂಡು ಪರಿಸರ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ವಿಜಯ ನಗರದಲ್ಲಿರುವ ಈ ಮೊಬೈಲ್ ಅಂಗಡಿಯಲ್ಲಿ ಮಾಲೀಕ ರಾತ್ರಿ ಮೊಬೈಲ್ ಚಾರ್ಚ್‌ಗೆ ಹೋಗಿದ್ದರು. ಅದರಿಂದಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಡಿಗೆ ಬೆಂಕಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಮುಂಜಾನೆ ಮುಂಜಾನೆ ಏಳು ಗಂಟೆಗೆ ಹೊತ್ತಿಗೆ ಸಣ್ಣದಾಗಿ ಹೊತ್ತಿ ಉರಿಯಲು ಆರಂಭಿಸಿದ ಬೆಂಕಿ, ಬಳಿಕ ಆಕಾಶದೆತ್ತರಕ್ಕೆ ಕೆನ್ನಾಲಿಗೆಗಳು ಚಾಚಿದವು. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡುವ ಅಪಾಯವೂ ಕಂಡುಬಂತು. ಆದರೆ, ಅದೃಷ್ಟವಶಾತ್ ಆ ರೀತಿ ಆಗಿಲ್ಲ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾನು ಒಂದು ಮೊಬೈಲನ್ನು ಚಾರ್ಜ್‌ಗೆ ಹಾಕಿಟ್ಟು ಹೋಗಿದ್ದೆ. ಹೇಗೆ ಈ ರೀತಿ ಬೆಂಕಿ ಹತ್ತಿಕೊಂಡಿತು ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಲಾಗಿದೆ.
ಇದನ್ನೂ ಓದಿ : Murder Case: ಕುಡಿತ ಅಮಲಿನಲ್ಲಿ ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದವನು ಈಗ ಪೊಲೀಸರ ಅತಿಥಿ