Site icon Vistara News

Murder Case : ಪತ್ನಿಯನ್ನು ಕೊಚ್ಚಿ ಕೊಂದು ಕೊಡಲಿ ಹಿಡಿದುಕೊಂಡೇ ಠಾಣೆಗೆ ಬಂದ ಗಂಡ!

Murder case in hubballi

ಹುಬ್ಬಳ್ಳಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ (Murder case) ಮಾಡಿದ್ದಲ್ಲದೆ, ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಹುಬ್ಬಳ್ಳಿಯ (Hubballi News) ಆನಂದನಗರದ ಬ್ಯಾಹಟ್ಟಿ ಪ್ಲಾಟ್ ನಲ್ಲಿ ಘಟನೆ ನಡೆದಿದೆ.

ಭೀಮಪ್ಪ ಮುತ್ತಲಗಿ ಎಂಬಾತ ತನ್ನ ಪತ್ನಿ ಮಂಜುಳಾ (42)ಳನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ. ಪತ್ನಿಯ ತಲೆಗೇ ನೇರವಾಗಿ ಹೊಡೆದ ಈತ ಬಳಿಕ ಕೊಡಲಿ ಹಿಡಿದುಕೊಂಡು ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಭೀಮಪ್ಪ ಮುತ್ತಲಗಿ ಮತ್ತು ಮಂಜುಳಾಗೆ ಹಲವು ವರ್ಷದ ಹಿಂದೆ ಮದುವೆಯಾಗಿದೆ. ಅವರಿಬ್ಬರ ನಡುವೆ ನಿರಂತರವಾಗಿ ನಾನಾ ಕಾರಣಗಳಿಗಾಗಿ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಇದೀಗ ಜಗಳ ತಾರಕಕ್ಕೇರಿ ಭೀಮಪ್ಪ ಕೊಡಲಿಯನ್ನು ಹಿಡಿದುಕೊಂಡು ಬಂದು ಆಕೆಯ ತಲೆಗೇ ಹೊಡೆದಿದ್ದಾನೆ. ಕೊಲೆ ಮಾಡಿದ ಬಳಿಕ ಅವನಿಗೆ ಭಯವಾಗಿದ್ದು, ಕೊಡಲಿಯನ್ನು ಹಿಡಿದುಕೊಂಡೇ ನೇರವಾಗಿ ಪೊಲೀಸ್‌ ಠಾಣೆಗೆ ಧಾವಿಸಿದ್ದಾನೆ.

ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗ ಎಸಿಪಿ ಆರ್.ಕೆ.ಪಾಟೀಲ್, ಹಳೇ ಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್‌ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಬನ್ನಿಕೊಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Murder Case : ಪುನೀತ್‌ ಫೋಟೊ ವಿವಾದವೇ ಯುವ ಬ್ರಿಗೇಡ್‌ ಕಾರ್ಯಕರ್ತನ ಕೊಲೆಗೆ ಕಾರಣ?

ಸಿಲಿಂಡರ್‌ ಸ್ಫೋಟಕ್ಕೆ ಮನೆಯೇ ಧ್ವಂಸ; ಅವಶೇಷಗಳಡಿ ಸಿಲುಕಿ ಸಾವು

ಬಾಗಲಕೋಟೆ: ಸಿಲಿಂಡರ್ ‌ಸ್ಫೋಟಗೊಂಡು (Cylinder blast) ಇಡೀ ಮನೆಯೇ ಧ್ವಂಸಗೊಂಡು (House damaged) ಅದರ ಅವಶೇಷಗಳಡಿ ಸಿಲುಕಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ (Bagalakote News) ನಂದಿಕೇಶ್ವರ ಗ್ರಾಮದ ಆಶ್ರಯ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ. ಮಂಜುನಾಥ್ ಪಡಿಯಪ್ಪ ಮಾದರ (35) ಎಂಬವರೇ ಮೃತ ವ್ಯಕ್ತಿ.

ಮಂಜುನಾಥ್‌ ಅವರು ತಮ್ಮ ಪತ್ನಿ ಮತ್ತು ಮಗುವಿನ ಜೊತೆ ಭಟ್ಕಳದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಆದರೆ, ಅವರು ಜಮೀನು ಸಮಸ್ಯೆ ಸಲುವಾಗಿ ವಿಚಾರಿಸಿಕೊಂಡು ಹೋಗಲು ಒಬ್ಬರೇ ಗ್ರಾಮಕ್ಕೆ ಬಂದಿದ್ದರು.

ಇಲ್ಲಿನ ಆಶ್ರಯ ಕಾಲೊನಿಯಲ್ಲಿ ಅವರಿಗೆ ಒಂದು ಮನೆಯಿದೆ. ಅವರು ಈ ರಾತ್ರಿ ಈ ಮನೆಯಲ್ಲಿ ತಂಗಿದ್ದರು. ಆಗ ಸಿಲಿಂಡರ್ ಸ್ಫೋಟಗೊಂಡು ಸಾವು ಸಂಭವಿಸಿದೆ.

ಎರಡು ರೂಮ್‌ ಹೊಂದಿದ್ದೀ ಮನೆಯನ್ನು ಹಾಲೋ ಬ್ಲಾಕ್‌ನಿಂದ ನಿರ್ಮಿಸಲಾಗಿದೆ. ಸಿಲಿಂಡರ್‌ ಸ್ಫೋಟದ ರಭಸಕ್ಕೆ ಇಡೀ ಸಿಮೆಂಟ್‌ ಚಾವಣಿ ಸಮೇತ ಕುಸಿದು ಬಿದ್ದಿದೆ.

ಮಂಜುನಾಥ್‌ ಅವರು ರಾತ್ರಿ ತಂಗಿದ್ದಾಗ ಮನೆಯಲ್ಲಿ ಅಡುಗೆ ಮಾಡಲು ಹೋದ ವೇಳೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಸ್ಟವ್‌ ಉರಿಸಲೆಂದು ಬೆಂಕಿ ಹಚ್ಚಿದಾಗ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದ್ದು, ಬೆಂಕಿ ಹಚ್ಚಿದಾಗ ಸ್ಫೋಟವಾಗಿರಬಹುದು ಎನ್ನಲಾಗಿದೆ.

ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಟ್ಕಳದಿಂದ ಕುಟುಂಬಿಕರು ಆಗಮಿಸಿದ್ದು, ಆಕ್ರಂದನ ಹೇಳತೀರದಾಗಿದೆ.

Exit mobile version