ಮಂಗಳೂರು: ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ ವ್ಯಕ್ತಿಯೊಬ್ಬ ಮರದ ರೀಪಿನಿಂದ ಹೊಡೆದು ಪತ್ನಿಯನ್ನೇ ಕೊಲೆ (Murder case) ಮಾಡಿರುವುದು ಬಜ್ಪೆ ಬಳಿಯ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ. ಸರಿತಾ ಮೃತ ಮಹಿಳೆ. ಪತಿ ದುರ್ಗೇಶ್ ಕೊಲೆ ಮಾಡಿದ ಆರೋಪಿ.
ಭಾನುವಾರ ರಾತ್ರಿ 8.30ಕ್ಕೆ ಮನೆಗೆ ಕುಡಿದು ಬಂದಿದ್ದ ದುರ್ಗೇಶ್, ಹೆಂಡತಿ ಸರಿತಾ ಜತೆ ಜಗಳವಾಡಿದ್ದಾನೆ. ಈ ವೇಳೆ ಮಗ ರಾಹುಲ್ ಹೆದರಿ ಅಜ್ಜಿಯ ಮನೆಗೆ ಹೋಗಿದ್ದಾನೆ. ನಂತರ ದುರ್ಗೇಶ್ ಮರದ ರೀಪಿನಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸರಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾವಿಗೆ ಮುನ್ನಾ ಸರಿತಾ ಸಹೋದರ ಮಧುಗೆ ಫೋನ್ ಮಾಡಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Newborn baby found | ಮೂರು ದಿನದ ಹಸುಗೂಸನ್ನು ಪೆಟ್ಟಿಗೆಯಲ್ಲಿಟ್ಟು ಪೊದೆಯಲ್ಲಿ ಇಟ್ಟು ಹೋದರು!