ಬೆಂಗಳೂರು: ಹತ್ತು ವರ್ಷದ ವಿಕಲಚೇತನ ಮಗಳನ್ನು ಕೊಂದು ತಾಯಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ (Murder Case) ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಿಯಾಂಕ ಕೊಲೆಯಾದ ಬಾಲಕಿ. ಸುಮಾ ತನ್ನ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಒಂದು ವರ್ಷದ ಹಿಂದೆ ಪತಿ ಹಾಗೂ ಮೊದಲನೇ ಮಗುವನ್ನು ಮಹಿಳೆ ಕಳೆದುಕೊಂಡಿದ್ದಳು. ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ ಎರಡನೇ ಮಗು ವಿಕಲಚೇತನಳಾಗಿದ್ದರಿಂದ ಮತ್ತಷ್ಟು ಮಾನಸಿಕವಾಗಿ ಕುಗ್ಗಿದ್ದಳು. ಹೀಗಾಗಿ ಮಗುವನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಸುಮಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Student murder | ವಿದ್ಯಾರ್ಥಿಯನ್ನು ಕೊಂದ ರಕ್ಕಸ ಶಿಕ್ಷಕ ಅರೆಸ್ಟ್: ಬಾಲಕನ ತಾಯಿ ಮೇಲಿನ ರೋಷವೇ ಕೊಲೆಗೆ ಕಾರಣ