ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ (Murder Case) ಅಂತ್ಯವಾಗಿರುವುದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ (60) ಮಗಳನ್ನು ಕೊಲೆಗೈದ ತಾಯಿ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಂಜೆ ಚಾಕುವಿನಿಂದ ಪರಸ್ಪರ ಇರಿದು ಕೊಂಡಿದ್ದರಿಂದ ಮಂಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ
ಹೆತ್ತ ತಾಯಿಯ ಮೇಲೆಯೇ ಮಗ ಹಲ್ಲೆ; ಅನ್ನ, ನೀರು ಕೊಡದೆ ಹಿಂಸೆ
ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ಮಕ್ಕಳಿಗೆ ಚಿತ್ರ ಹಿಂಸೆ ಕೊಟ್ಟಿರೋದನ್ನು ನೋಡಿದ್ದೆವು. ಆದರೆ ಈಗ ಹೆತ್ತ ತಾಯಿಯನ್ನೇ ಹೊಡೆಯುವ ಮೂಲಕ ಮಗ ಅಮಾನವೀಯವಾಗಿ ನಡೆದುಕೊಂಡಿರುವುದು ಕಂಡುಬಂದಿದೆ.
ಚಂದ್ರಮ್ಮ (75) ಹಲ್ಲೆಗೊಳಗಾದವರು. ಮುನಿರತ್ನ (45) ಹಲ್ಲೆ ಮಾಡಿದ ಮಗ. ಕತ್ತರಿಗುಪ್ಪೆಯ ಶ್ರೀನಿವಾಸ ನಗರದಲ್ಲಿ ಘಟನೆ ನಡೆದಿದೆ. ಒಂದು ವರ್ಷದಿಂದ ಮನೆಯ ಹೊರಗಡೆ ತಾಯಿ ಮಲಗಿಸುತ್ತಿದ್ದ ಮಗ, ಆಕೆಗೆ ಸರಿಯಾಗಿ ಊಟ ಕೂಡ ನೀಡದೆ ಹಿಂಸೆ ನೀಡುತ್ತಿದ್ದ. ಕಾರಣ ಕೇಳಿದರೆ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿರುವ ಕಾರಣ ಹೊರಗೆ ಮಲಗಿಸುತ್ತಿರುವುದಾಗಿ ಮಗ ಹೇಳಿದ್ದಾನೆ.
ಇವರು ತಿರುಪತಿ ಮೂಲದವರಾಗಿದ್ದು, ಮುನಿರತ್ನ ತನ್ನ ಮದುವೆಗೂ ಮುನ್ನ ತಾಯಿಯನ್ನು ಅಡುಗೆ ಮಾಡಲು ಮನೆಗೆ ಕರೆತಂದಿದ್ದ. ಮದುವೆಯಾದ ಬಳಿಕ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಬೆಂಗಳೂರಿನ ಕತ್ತರಿಗುಪ್ಪೆಯ ಶ್ರೀನಿವಾಸ ನಗರಕ್ಕೆ ಬಂದು 2 ವರ್ಷವಾಗಿದೆ. ಸೊಸೆ ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದರೆ ಮಗ ತಾಯಿಗೆ ಚಿತ್ರ ಹಿಂಸೆ ನೀಡುತ್ತಿದ್ದ. ಹೀಗಾಗಿ ಮನೆಯ ಅಂಗಳದಲ್ಲಿ ತಾಯಿ ಇರುತ್ತಿದ್ದಳು.
ಇದನ್ನೂ ಓದಿ | Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್ ಸರ್ಚ್ ಮಾಡಿದ್ದ ಹಂತಕ!
ಸೊಸೆ ತಾಯಿಯನ್ನು ನೋಡಿಕೊಳ್ಳುತ್ತಿದ್ದಳು ಎನ್ನುವ ಕಾರಣಕ್ಕೆ ಹೆಂಡತಿಯ ಜತೆಗೂ ಜಗಳವಾಡುತ್ತಿದ್ದ. 2 ದಿನದ ಹಿಂದೆ ಹೆಂಡತಿ ಜಗಳವಾಡಿ ತವರುಮನೆಗೆ ಹೋಗಿದ್ದಳು. ಹೀಗಾಗಿ ತಾಯಿ ಚಂದ್ರಮ್ಮನ ಮೇಲೆ ಮಗ ಹಲ್ಲೆ ಮಾಡಿದ್ದಾನೆ, 2 ದಿನದಿಂದ ತಾಯಿಗೆ ಅನ್ನ, ನೀರು ನೀಡಿಲ್ಲ. ನಶೆಯಲ್ಲಿ ಇಲ್ಲದ ಸಮಯದಲ್ಲೂ ಇದೆ ಸ್ಥಿತಿಯಲ್ಲಿ ಮುನಿರತ್ನ ಇರುತ್ತಿದ್ದ ಎನ್ನಲಾಗಿದೆ.