ಬೆಳಗಾವಿ: ಇಲ್ಲಿನ ಖಾನಾಪುರ ಪಟ್ಟಣದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಖಾನಾಪುರ ಪಟ್ಟಣದ ನಿವಾಸಿ ಮಾರುತಿ ಜಾಧವ್ (40) ಕೊಲೆಯಾದ ವ್ಯಕ್ತಿ. ಪಕ್ಕದ ಮನೆಯ ಪ್ರಶಾಂತ್ ನಾರ್ವೇಕರ್ (35) ಎಂಬಾತ ಹತ್ಯೆ ಮಾಡಿದ ಆರೋಪಿ.
ಹಲವು ದಿನಗಳಿಂದ ಮಾರುತಿ ಅವರ ಹೆಂಡತಿಯನ್ನು ಆರೋಪಿ ಪ್ರಶಾಂತ್ ಚುಡಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ಈ ಬಗ್ಗೆ ಮಾರುತಿ ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಪ್ರಶಾಂತ್ ಜತೆಗೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರಗಳಿಂದ ಪ್ರಶಾಂತ್ ಹತ್ಯೆ ನಡೆಸಿದ್ದಾನೆ ಎನ್ನಲಾಗಿದೆ.
ತೀವ್ರ ಹಲ್ಲೆಗೊಳಗಾದ ಮಾರುತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಉಸಿರು ಚೆಲ್ಲಿದ್ದರು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇನ್ಸ್ಪೆಕ್ಟರ್ ನಂದೀಶ್ ಸಾವು ಸಹಜ ಎಂದ ಸರ್ಕಾರ; ಇದು ಕೊಲೆ ಎಂದ ಪ್ರತಿಪಕ್ಷ