ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣದಲ್ಲಿ (Murder Case) ಬಾಲಕಿಯ ಗುರುತನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜುಲೈ 3ರಂದು ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದ ಬಾಲಕಿಯ ಹೆಸರು ಮರಿಯಮ್ (5) ಕೊಲೆಯಾದವಳು ಎಂದು ತಿಳಿದುಬಂದಿದೆ. ಮತ್ತೊಂದೆಡೆ ಬಾಲಕಿಯ ಕೊಲೆಯ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಸದ್ಯ ಬಾಲಕಿಯ ಪೋಷಕರು ಯಾರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ ಬಾಲಕಿ?
ಕೊಲೆಯಾದ ಮರಿಯಮ್ ತಾಯಿ ಹೀನಾ, ರಾಜು ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಗಂಡ ಶಿವು ಎಂಬಾತನನ್ನು ಬಿಟ್ಟು ರಾಜು ಜತೆ ಹೀನಾ ಭಿಕ್ಷಾಟನೆ ಮಾಡುತ್ತಿದ್ದಳು. ಇವರಿಬ್ಬರ ಜೊತೆಯೇ ಕೊಲೆಯಾದ ಮರಿಯಮ್ ಇರುತ್ತಿದ್ದಳು.
ಮಗಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಹೀನಾ, ಪ್ರೇಮಿಯ ಜತೆ ಸೇರಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಮರಿಯಮ್ ಮೃತದೇಹ ದೊರೆತ ದಿನದಿಂದಲೂ ಹೀನಾ, ರಾಜು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಅವರ ಮೇಲೆ ಸಾಕಷ್ಟು ಅನುಮಾನ ಮೂಡಿದೆ. ಸದ್ಯ ಕೊಲೆಯಾದ ಮರಿಯಮ್ ತಾಯಿ ಹೀನಾ, ಪ್ರಿಯತಮ ರಾಜುಗಾಗಿ ರೈಲ್ವೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೀನಾ ಹಾಗೂ ರಾಜು ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಇದನ್ನೂ ಓದಿ | Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ
ಸಪ್ಲೇಯರ್ ಸಿಟ್ಟಿಗೆ ಬಲಿಯಾದ ಹೋಟೆಲ್ ಮಾಲೀಕ
ಬೆಂಗಳೂರು ಗ್ರಾಮಾಂತರ: ಕಳೆದ ಜೂ.18ರಂದು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಲಿಕಾನ್ ಟೌನ್‌ನಲ್ಲಿ ಕುಂದಾಪುರ ಮೂಲದ ವಿಜಯೇಂದ್ರ ಶೆಟ್ಟಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ (Attempt to murder) ನಡೆದಿತ್ತು. ಬಾಯಿಗೆ ಬಂದಂತೆ ಬೈದಿದ್ದಕ್ಕೆ ಸಿಟ್ಟಾದ ಸಪ್ಲೇಯರ್, ರಾಡಿನಿಂದ ಹೊಡೆದು ಕೋಮಾಗೆ ಕಳಿಸಿದ್ದ. ಸತತ 27 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ವಿಜಯೇಂದ್ರ ಶೆಟ್ಟಿ, ಚಿಕಿತ್ಸೆ ಫಲಿಸದೇ ಭಾನುವಾರ (Murder case) ಕೊನೆಯುಸಿರೆಳೆದಿದ್ದಾರೆ.
ಪೊಲೀಸರ ದಿಕ್ಕು ತಪ್ಪಿಸಿದ್ದ ಹಂತಕ
ಕೃತ್ಯ ನಡೆದ ಬಳಿಕ ಪೊಲೀಸರ ದಿಕ್ಕು ತಪ್ಪಿಸಲು ಹೋಗಿ ಆರೋಪಿ ಸಪ್ಲೇಯರ್ ಮಂಜಪ್ಪ (Attempt To Murder) ಜೈಲುಪಾಲಾಗಿದ್ದ. ಮಂಜುನಾಥ್ ಟಿಪನ್ ಸೆಂಟರ್‌ನಲ್ಲಿ ಸಪ್ಲೇಯರ್ ಆಗಿದ್ದ ಮಂಜಪ್ಪ ತನಗೆ ಅನ್ನ ಹಾಕಿದ ಮಾಲೀಕ ಬೈದ ಎಂದು ರಾತ್ರಿ ಮಲಗಿದ್ದ ವೇಳೆ ಮಾರಣಾಂತಿಕ ಹಲ್ಲೆ ನಡೆಸಿದ್ದ.
ವಿಜಯೇಂದ್ರರ ಚಿರಾಟ ಕೇಳಿ ಅಕ್ಕ-ಪಕ್ಕದವರು ಸಹಾಯಕ್ಕೆ ಧಾವಿಸಿದ್ದರು. ಬಳಿಕ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆಗೀಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕಂದರೆ ಮಾಲೀಕನ ಹೆಣ ಉರುಳಿಸಲು ಜತೆಗೆ ಇದ್ದ ಹೋಟೆಲ್ ಸಿಬ್ಬಂದಿಯೇ ಮುಂದಾಗಿದ್ದ.
ಮಾಲೀಕ ವಿಜಯೇಂದ್ರ ಹೋಟೆಲ್‌ನಲ್ಲಿ ದಿನನಿತ್ಯ ಬಾಯಿಗೆ ಬಂದಂತೆ ಬಯ್ಯುತ್ತಿದ್ದರಂತೆ. ಇದರಿಂದ ಕುಪಿತಗೊಂಡಿದ್ದ ಸಪ್ಲೇಯರ್ ಮಂಜಪ್ಪನಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ವಿಜಯೇಂದ್ರ ಮಲಗಿದ್ದ ವೇಳೆ ಎಂಟ್ರಿ ಕೊಟ್ಟ ಮಂಜಪ್ಪ ಜಿಮ್ ರಾಡ್‌ನಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕಾಲ್ಕಿತ್ತಿದ್ದ.
ರಕ್ತದ ಮಡುವಿನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ವಿಜಯೇಂದ್ರ ಅವರನ್ನು ಸ್ಥಳೀಯರು, ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದರು. ಬೆಳಗ್ಗೆ ವಾಪಸ್ ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದ ಮಂಜಪ್ಪ, ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ. ಮಾತ್ರವಲ್ಲ ಯಾವುದೇ ಅಂಜಿಕೆಯಿಲ್ಲದೇ ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟಿದ್ದ.
ಇದನ್ನೂ ಓದಿ | https://vistaranews.com/crime/self-harming-married-woman-selfharming-with-lover/694219.html
ಆದರೆ ಪೊಲೀಸರ ತನಿಖೆ ವೇಳೆ ಸಪ್ಲೇಯರ್ ಮಂಜಪ್ಪನ ಕೃತ್ಯ ಬಯಲಾಗಿತ್ತು. ಬಳಿಕ ಆರೋಪಿ ಮಂಜಪ್ಪನನ್ನು ಬಂಧಿಸಿರುವ ಪೊಲೀರು ಜೈಲಿಗೆ ಅಟ್ಟಿದ್ದಾರೆ. ಇತ್ತ ವಿಜಯೇಂದ್ರ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿಜಯೇಂದ್ರ ಕೋಮಾ ಸ್ಥಿತಿಯಲ್ಲಿದ್ದರು. ಆದರೆ 27 ದಿನಗಳ ಈ ಹೋರಾಟದಲ್ಲಿ ಗಂಭೀರ ಗಾಯಗೊಂಡಿದ್ದ ವಿಜಯೇಂದ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.