ಬೆಂಗಳೂರು: ಕೋಳಿ ಅಂಗಡಿ ವಿಚಾರದಲ್ಲಿ ನಿವೃತ್ತ ಐಟಿಐ ಎಂಜಿನಿಯರ್‌ನನ್ನು ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿರುವ ಘಟನೆ ಜೆ.ಪಿ. ನಗರದ 28ನೇ ಕ್ರಾಸ್‌ನಲ್ಲಿ ನಡೆದಿದೆ. ಕೋಳಿ ಅಂಗಡಿ ತೆರೆದರೆ ವಾಸನೆ ಬರುತ್ತದೆ ಎಂದು ಸ್ಥಳೀಯರೊಂದಿಗೆ ಸೇರಿ ಅಂಗಡಿ ತೆರೆಯದಂತೆ ಒತ್ತಡ ಏರಲು ಮುಂದಾಗಿದ್ದರಿಂದ ನಿವೃತ್ತ ಐಟಿಐ ಎಂಜಿನಿಯರ್‌ನನ್ನು ಕೋಳಿ ಅಂಗಡಿ ಮಾಲೀಕ ಹಾಗೂ ಪುತ್ರ ಕೊಲೆ (Murder Case) ಮಾಡಿದ್ದಾರೆ.
ನಿವೃತ್ತ ಐಟಿಐ ಎಂಜಿನಿಯರ್ ವೆಂಕಟೇಶ್ ಕೊಲೆಯಾದವರು. ನಾಗರಾಜ್ (58), ಅಭಿಷೇಕ್ (35) ಆರೋಪಿಗಳು. ಮೃತ ವೆಂಕಟೇಶ್ ಪತ್ನಿ ಜತೆ ಜೆಪಿ ನಗರದ 1ನೇ ಹಂತದ 30ನೇ ಕ್ರಾಸ್‌ನಲ್ಲಿನ ನಿವಾಸದಲ್ಲಿ ವಾಸವಿದ್ದರು. ಜತೆಗೆ ಇವರಿಗೆ ಬಸವೇಶ್ವರನಗರದಲ್ಲೂ ಮನೆ ಇತ್ತು.
ಬಸವೇಶ್ವರನಗರದಲ್ಲಿ ವೆಂಕಟೇಶ್ ನಿವಾಸದ ಎದುರು ನಾಗರಾಜ್ ಎಂಬಾತ ಕೋಳಿ ಅಂಗಡಿ ತೆರೆಯಲು ಸಿದ್ಧತೆ ನಡೆಸಿದ್ದರು. ಆದರೆ, ಇದರಿಂದ ಗಬ್ಬು ವಾಸನೆ ಬರುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಅಂಗಡಿ ತೆರೆಯಲು ವಿರೋಧ ವ್ಯಕ್ತಪಡಿಸಿದ್ದರು. ಅದೇ ರೀತಿ ಮನೆ ಮುಂದೆ ಕೋಳಿ ಅಂಗಡಿ ತೆರೆಯಲು ವೆಂಕಟೇಶ್ ಅವರಿಗೂ ಇಷ್ಟವಿರಲಿಲ್ಲ. ಹೀಗಾಗಿ ಕಾರ್ಪೊರೇಟರ್ ಜತೆ ಮಾತನಾಡಿ ಕೋಳಿ ಅಂಗಡಿ ತೆರೆಯದಂತೆ ಒತ್ತಡ ಏರಲು ಪ್ರಯತ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಂಗಡಿ ಮಾಲೀಕ, ಮಗನ ಜತೆ ಸೋಮವಾರ ಜೆಪಿ ನಗರದ ವೆಂಕಟೇಶ್ ನಿವಾಸಕ್ಕೆ ಬಂದು ಹತ್ಯೆ ಮಾಡಿದ್ದಾರೆ.
ಮಾತನಾಡಿಸೋ ನೆಪದಲ್ಲಿ ಬಂದು ಹತ್ಯೆಗೈದರು
ಮಾತನಾಡಿಸುವ ನೆಪದಲ್ಲಿ ಮಧ್ಯಾಹ್ನ ಜೆ.ಪಿ.ನಗರದ ವೆಂಕಟೇಶ್ ನಿವಾಸಕ್ಕೆ ಆರೋಪಿಗಳು ಬಂದಿದ್ದಾರೆ. ಅವರಿಗೆ ಕಾಫಿ ಕೊಡಲು ವೆಂಕಟೇಶ್ ಪತ್ನಿಗೆ ತಿಳಿಸಿದ್ದಾರೆ. ಅದರಂತೆ ಕಾಫಿ ತರಲು ಆಕೆ ಹೊಗುತಿದ್ದಂತೆ ಇತ್ತ ತಂದೆ ನಾಗರಾಜ್, ಮಗ ಅಭಿಷೇಕ್ ಇಬ್ಬರೂ ಸೇರಿ ವೆಂಕಟೇಶ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಹೊಟ್ಟೆಗೆ ಇರಿದಿದ್ದಾರೆ. ಇದರಿಂದ ವೆಂಕಟೇಶ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಇದನ್ನೂ ಓದಿ | Road accident : ಯಮನಂತೆ ಬಂದ ಬಿಬಿಎಂಪಿ ಕಸದ ಲಾರಿ; ರಸ್ತೆ ದಾಟುತ್ತಿದ್ದ ವೃದ್ಧೆ ದಾರುಣ ಬಲಿ
ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಆರೋಪಿಗಳಾದ ತಂದೆ, ಮಗ ಇಬ್ಬರೂ ಜೆ.ಪಿ.ನಗರ ಪೊಲೀಸರಿಗೆ ಶರಣಾಗಿದ್ದಾರೆ. ಮೇಲ್ನೋಟಕ್ಕೆ ಕೋಳಿ ಅಂಗಡಿಯ ಜಗಳದ ವಿಚಾರದಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ಆದರೆ ಇದನ್ನು ಹೊರತುಪಡಿಸಿ ಕೊಲೆಗೆ ಬೇರೆ ಏನಾದರೂ ಕಾರಣ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಮನಂತೆ ಬಂದ ಬಿಬಿಎಂಪಿ ಕಸದ ಲಾರಿ; ರಸ್ತೆ ದಾಟುತ್ತಿದ್ದ ವೃದ್ಧೆ ದಾರುಣ ಬಲಿ
ಬೆಂಗಳೂರು: ರಾಜಧಾನಿಯ ರಸ್ತೆಯಲ್ಲಿ ಓಡಾಡುವಾಗ ಎಷ್ಟು ಎಚ್ಚರವಾಗಿದ್ದರೂ ಸಾಲದು. ಒಂದು ಸ್ವಲ್ಪ ಯಾಮಾರಿದರೂ ಯಮರೂಪದಲ್ಲಿ ಬರುತ್ತವೆ ವಾಹನಗಳು (Road Accident). ಇಂಥಹುದೇ ಒಂದು ದುರಂತ ಸೋಮವಾರ ನಡೆದದು ರಸ್ತೆ ದಾಟುತ್ತಿದ್ದ ವೃದ್ಧೆ (Old woman dies in accident) ಮೃತಪಟ್ಟಿದ್ದಾರೆ. ಅವರನ್ನು ಬಲಿ ಪಡೆದದ್ದು ಬಿಬಿಎಂಪಿಯ ಕಸದ ಲಾರಿ (BBMP Garbage vehicle).
ನಗರದ ಹಡ್ಸನ್ ವೃತ್ತದ (Hudson cirlce) ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಮುನಿಯಮ್ಮ ಎಂದು ಗುರುತಿಸಲಾಗಿದೆ. ಮುನಿಯಮ್ಮ ಕೋಡುಗೇಹಳ್ಳಿ ನಿವಾಸಿ. ವಿಧಾನಸೌದದಲ್ಲಿ ನಿವೃತ್ತ ಡಿ ಗ್ರೂಪ್ ನೌಕರೆ ಆಗಿದ್ದರು. ಸೋಮವಾರ ನಿವೃತ್ತಿ ವೇತನ ವಿಚಾರವಾಗಿ ಬ್ಯಾಂಕ್ ಗೆ ಬಂದಿದ್ದ ಮುನಿಯಮ್ಮ. ಬ್ಯಾಂಕ್ ಕೆಲಸ ಮುಗಿಸಿ ಬರುತಿದ್ದ ವೇಳೆ ಮಧ್ಯಾಹ್ನ 1:40ರ ಹೊತ್ತಿಗೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ | Self Harming : ನಕಲು ಮಾಡುವಾಗ ಸಿಕ್ಕಿಬಿದ್ದ; ಮರ್ಯಾದೆಗೆ ಅಂಜಿ 14ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ
ಮುನಿಯಮ್ಮ ಅವರು ನಗರದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಯಮಸ್ವರೂಪಿಯಾಗಿ ಬಂದ ಲಾರಿ ಅವರ ಎಡಗಾಲಿನ ಮೇಲೆ ಲಾರಿ ಹರಿದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಓದ್ದಾಡುತ್ತಿದ್ದ ಅವರನ್ನು, ಸಾರ್ವಜನಿಕರು ಪಕ್ಕದಲ್ಲಿ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅದಾಗಲೇ ಮಹಿಳೆ ಪ್ರಾಣ ಬಿಟ್ಟಿದ್ದಾರೆ.
ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಹಲಸೂರು ಗೇಟ್ ಸಂಚಾರಿ ಪೊಲೀಸರು ಘಟನೆಗೆ ಕಾರಣವಾದ ಬಿಬಿಎಂಪಿ ಲಾರಿ ಚಾಲಕ ಶಿವಕುಮಾರ್ ನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನಾದ್ರು ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಸದ ಲಾರಿಯಿಂದ ಆಗ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಬೇಕಿದೆ.