ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ರೌಡಿ ಶೀಟರ್ ಒಬ್ಬನನ್ನು (Rowdy Sheeter Murder) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿವೇಕ್ ನಗರದ ಮಾಯಾ ಬಜಾರ್ ಸ್ಲಂನಲ್ಲಿ (Maya bazar Slum) ನಡೆದ ಘಟನೆ ಇದಾಗಿದ್ದು, ಕೊಲೆಯಾದ ರೌಡಿ ಶೀಟರ್‌ನನ್ನು ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಎಂದು ಗುರುತಿಸಲಾಗಿದೆ (Murder Case).
ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಸತೀಶ್‌ನನ್ನು ಹಳೆ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ಇದೆ. ತಡರಾತ್ರಿ ಮನೆಗೆ ನುಗ್ಗಿ ಆತನನ್ನು ಕೊಚ್ಚಿ ಹಾಕಲಾಗಿದೆ.
ಮಿಲಿಟ್ರಿ ಸತೀಶ್ ಮಾಯಾ ಬಜಾರ್ ಸ್ಲಂನಲ್ಲಿ ವಾಸಿಸುತ್ತಿದ್ದು, ಮಂಗಳವಾರ ರಾತ್ರಿ ಮನೆಯ ಹೊರಗಡೆ ಮಲಗಿದ್ದ. ಬೆಳಗ್ಗಿನ ಜಾವ ಮೂರು ಗಂಟೆಯ ಹೊತ್ತಿಗೆ ಆತನ ಮನೆಯ ವಠಾರಕ್ಕೆ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಪರಾರಿಯಾಗಿದ್ದಾರೆ.
ಹಳೇ ವೈಷಮ್ಯ ಅಥವಾ ವೈಯಕ್ತಿಕ ಕಾರಣಕ್ಕೆ ಕೊಲೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕೊಲೆಗಾರರು ಮಿಲಿಟ್ರಿ ಸತೀಶ್‌ಗೆ ಪರಿಚಿತರೇ ಆಗಿರುವುದರಿಂದ ಪೊಲೀಸರಿಗೆ ಕೆಲವು ಸಂಶಯಗಳಿವೆ. ಜತೆಗೆ ಸ್ಥಳದ ಸಿಸಿ ಟಿವಿ ಫೂಟೇಜ್ ಪಡೆದು ತಪಾಸಣೆ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ವಿವೇಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ. ನಡೆಸಿದ್ದಾರೆ.
ಇದನ್ನೂ ಓದಿ : Self Harming : 29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ; ಏನಾಗಿತ್ತು ಆಕೆಗೆ?
ಕಲ್ಲು ಎತ್ತಿ ಹಾಕಿ ಕೊಂದವರು ಅರೆಸ್ಟ್
ರಾಮನಗರ/ಬೆಂಗಳೂರು: ಜನವರಿ 21ರಂದು ರಾಮನಗರ ರೈಲ್ವೆ ನಿಲ್ದಾಣದ ಬಳಿ ನಡೆದ ಅರ್ಬಾಜ್ ಪಾಷಾ ಎಂಬಾತನ ಕೊಲೆ ಪ್ರಕರಣವನ್ನು ಬೇಧಿಸಿರುವ ರೈಲ್ವೆ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಜನವರಿ 21ರಂದು ರಾಮನಗರ ರೈಲ್ವೆ ನಿಲ್ದಾಣದ ಬಳಿ ಅರ್ಬಾಜ್ ಶವ ಪತ್ತೆಯಾಗಿತ್ತು. ತಲೆ ಮೇಲೆ ಕಾಂಕ್ರೀಟ್ ಕಲ್ಲು ಎತ್ತಿಹಾಕಿ ಆರೋಪಿಗಳು ಕೊಲೆ ಮಾಡಿದ್ದರು. ಇದೀಗ ಈ ಕೊಲೆಯ ಜಾಡನ್ನು ಹಿಡಿದು ತನಿಖೆ ನಡೆಸಿದ ಪೊಲೀಸರು ಸೈಯಾದ್ ಇಲಿಯಾಸ್, ಜಹೀರ್ @ ಕಾಲು ಬಂಧಿತ ಎಂಬವರನ್ನು ಬಂಧಿಸಿದ್ದಾರೆ.
ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೊಲೆ ಮಾಡಿದ ದಿನವೇ ಪರಾರಿಯಾಗಿದ್ದ ಅವರನ್ನು ಈಗ ಬಂಧಿಸಲಾಗಿದೆ.