ಬೆಂಗಳೂರು: ನರ್ಸ್ ಸೋಮಿನಿ ಸತ್ಯಭಾಮ ಕೊಲೆ ಪ್ರಕರಣದಲ್ಲಿ (Murder Case) ಆರು ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಐಟಿಸಿ ವಿಂಡ್ಸರ್ ಮ್ಯಾನರ್ ಹೊಟೇಲ್‌ನಲ್ಲಿ ಸ್ಟಾಪ್ ನರ್ಸ್ ಆಗಿದ್ದ ಸೋಮಿನಿ ಸತ್ಯಭಾಮ ಅವರನ್ನು ಆಸ್ತಿ ವಿಚಾರಕ್ಕೆ ಜೂನ್ 11 ರ ರಾತ್ರಿ ಮಚ್ಚು, ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು.
ಎ1 ಸಾಗರ್ (20) , ಎ2 ಆಕಾಶ್(19) , ಎ3 ಓಂ ಶಿವಶಂಕರ್(50), ಎ4 ಪ್ರವೀಣ್(24), ಎ5 ಪೂಜಾ (22) ಹಾಗೂ ಎ6 ಗಾಯಿತ್ರಿ ದೇವಿ ಬಂಧಿತ ಅರೋಪಿಗಳು. ಜೂನ್ 11ರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಹೊರ ಬಂದಿದ್ದ ಸೋಮಿನಿ ಸತ್ಯಭಾಮ ಅವರ ಮೇಲೆ ಐಟಿಸಿ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಬಳಿ ಹಲ್ಲೆ ಮಾಡಲಾಗಿತ್ತು.
ಹೆಲ್ಮೆಟ್ ಹಾಕಿಕೊಂಡು ಸ್ಕೂಟರ್ ಹತ್ತುತ್ತಿದ್ದ ವೇಳೆ ಮಚ್ಚಿನಿಂದ ಸಾಗರ್ ಅಟ್ಯಾಕ್ ಮಾಡಿದ್ದ. ಬಳಿಕ ಇತರೆ ಆರೋಪಿಗಳು ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದರು. ಆಸ್ತಿ ವಿಚಾರಕ್ಕೆ ಸೋದರ ಅತ್ತೆಯನ್ನು ಕೊಲೆ ಮಾಡಲು ಎ1 ಸಾಗರ್ ಪ್ಲ್ಯಾನ್ ಮಾಡಿದ್ದ. ಮೂರನೇ ಆರೋಪಿ ಓಂ ಶಿವಶಂಕರ್ ಸಾಗರ್ ತಂದೆಯಾಗಿದ್ದಾನೆ.
ತನ್ನ ತಂದೆಗೆ ಆಸ್ತಿಯಲ್ಲಿ ಭಾಗ ನೀಡಿಲ್ಲ ಅನ್ನೋ ಕಾರಣಕ್ಕೆ ಸೋದರ ಅತ್ತೆಯನ್ನೇ ಸಾಗರ್ ಕೊಲೆ ಮಾಡಿದ್ದಾನೆ. ಕೊಲೆ ಪ್ರಕರಣದಲ್ಲಿ ಇಡೀ ಕುಟುಂಬವೇ ಸದ್ಯ ಹೈಗ್ರೌಂಡ್ಸ್ ಪೊಲೀಸರು ಅತಿಥಿಯಾಗಿದೆ.
ಇದನ್ನೂ ಓದಿ | Actor Darshan: `ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್
ಆಸ್ತಿ ವಿಚಾರ ನಡೆದ ಕಲಹ ಸಹೋದರನ ಕೊಲೆಯಲ್ಲಿ ಅಂತ್ಯ
ಬೆಳಗಾವಿ: ಆಸ್ತಿ ವಿಚಾರಕ್ಕೆ ನಡೆದ ದಾಯಾದಿ ಕಲಹ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಲ್ತಾನಪುರದಲ್ಲಿ ನಡೆದಿದೆ.
ಈರಪ್ಪ ಚೌಗಲಾ(38) ಕೊಲೆಯಾದ ದುರ್ದೈವಿ. ಶ್ರೀಶೈಲ ಹಾಲಗೊಂಡ ಚೌಗಲಾ ತಮ್ಮನನ್ನೇ ಕೊಲ್ಲಲು ಸುಪಾರಿ ನೀಡಿದ್ದ ಪಾಪಿ ಅಣ್ಣ. ಕೊಲೆ ಮಾಡಿ ನಂತರ ಶವವನ್ನು ಕೊರತಿ ಕೊಲ್ಹಾರ ಬಳಿ ಎಸೆಯಲಾಗಿತ್ತು.
ಪೂರ್ವಜರಿಂದ ಬಂದಿದ್ದ ಗದ್ದೆಯಲ್ಲಿ ಒಂದು ಎಕರೆ ಮಾರಲು ಅಣ್ಣ ಮುಂದಾಗಿದ್ದ. ಇದಕ್ಕೆ ತಮ್ಮ ಈರಪ್ಪ ಚೌಗಲಾ ತಗಾದೆ ತೆಗೆದಿದ್ದ. ನಂತರ ಜೂನ್ 4 ರಂದು ಸುಲ್ತಾನಪುರದಿಂದ ಈರಪ್ಪ ಚೌಗಲಾ ಕಾಣೆಯಾಗಿದ್ದ. 6ನೇ ತಾರೀಖು ಈರಪ್ಪ ಸಂಬಂಧಿಕರು ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ | Actor Darshan: ದರ್ಶನ್ ಕುಡಿಯದೇ ಇದ್ದಾಗ ಒಳ್ಳೆಯವ, ಪವಿತ್ರಾ ಬಗ್ಗೆ ಮಾತಾಡೋಕೆ ಅಸಹ್ಯ ಎಂದ ಚಿಂಗಾರಿ ಮಹದೇವ್!
ಬೈಕ್‌ನಲ್ಲಿ ಮನೆಗೆ ಬರುವಾಗ ಕಿರಾತಕರ ತಂಡ, ಈರಪ್ಪ ಚೌಗಲಾನನ್ನು ಕಿಡ್ನ್ಯಾಪ್ ಮಾಡಿ, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಅದಾದ ಬಳಿಕ ಬಾಗಲಕೋಟೆಯ ಕೊರತಿ ಕೊಲ್ಹಾರ ಬಳಿ ಶವ ಎಸೆದಿದ್ದರು. ಟೆಕ್ನಿಕಲ್ ಎವಿಡೆನ್ಸ್ ಹಿಂದೆ ಬಿದ್ದು ಪ್ರಕರಣ ಕೆದಕಿದ್ದ ಖಾಕಿ ಟೀಂ, 8 ಆರೋಪಿಗಳನ್ನು ಬಂಧಿಸಿದೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶ್ರೀಶೈಲ, ಪಡಿಯಪ್ಪ, ಚಂದನ್, ರಮೇಶ ಶಾನೂರ ಸೇರಿ ಒಟ್ಟು 8 ಜನರ ಬಂಧನವಾಗಿದೆ.