ಮೈಸೂರು: ಇಲ್ಲಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯೊಬ್ಬಳು ಪ್ರಿಯಕರನ ಜತೆ ಸೇರಿ ರಾತ್ರೋರಾತ್ರಿ ಪತಿಯ (Murder Case) ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ನಡೆದಿದೆ. ಹೂಟಗಳ್ಳಿ ನಿವಾಸಿ ಮಂಜು ಕೊಲೆಯಾದ ದುರ್ದೈವಿ.
ಮಂಜು ಬೋಗಾದಿ ನಿವಾಸಿ ಲಿಖಿತಾ ಎಂಬಾಕೆ ಜತೆಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮದುವೆ ಆಗಿ ಮಕ್ಕಳಿದ್ದರೂ ಲಿಖಿತಾ ಮತ್ತೊಬ್ಬನ ಸಹವಾಸ ಮಾಡಿದ್ದಳು. ಈ ವಿಷಯ ಮಂಜುವಿಗೆ ತಿಳಿದಿದ್ದು, ಲಿಖಿತಾಳ ಅನೈತಿಕ ಸಂಬಂಧದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಿಯಕರನ ಜತೆ ಪರಾರಿ ಆಗಿದ್ದ ಲಿಖಿತಾ
ಈ ಹಿಂದೆ ಲಿಖಿತಾ ತನ್ನ ಪ್ರಿಯಕರನ ಜತೆಗೆ ಪರಾರಿ ಆಗಿದ್ದಳು ಎನ್ನಲಾಗಿದೆ. ರಾಜಿ ಪಂಚಾಯ್ತಿ ಮೂಲಕ ಮತ್ತೆ ಪತಿ ಮಂಜು ಮನೆ ಸೇರಿಸಿಕೊಂಡಿದ್ದಳು. ಆದರೆ, ಪತ್ನಿ ನಡವಳಿಕೆ ಬಗ್ಗೆ ಅಸಮಾಧಾನ ಹೊಂದಿದ್ದ ಮಂಜು ಆಗಾಗ ಈ ಸಂಬಂಧ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಇಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ವಾಷಿಂಗ್ ಮಷಿನ್ನಲ್ಲಿ ಬಿದ್ದು, 15 ನಿಮಿಷ ಪೌಡರ್ ಮಿಶ್ರಿತ ನೀರಿನಲ್ಲಿ ಇದ್ದ ಮಗು; ಬದುಕಿದ್ದೇ ಪವಾಡ
ಹೀಗಾಗಿ ಲಿಖಿತಾ ಪ್ರಿಯಕರನೊಂದಿಗೆ ಸೇರಿ ತಡರಾತ್ರಿ ಉಸಿರುಗಟ್ಟಿಸಿ ಕೊಲೆಗೈದಿದ್ದಾಳೆ. ಸದ್ಯ ಪತ್ನಿ ಲಿಖಿತಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.