Site icon Vistara News

Murder Case | ಶಿವಮೊಗ್ಗದಲ್ಲಿ ಮಹಿಳೆ ಕೊಲೆ: ಅಮ್ಮನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದ ಮಗಳು

murder

ಶಿವಮೊಗ್ಗ: ಇಲ್ಲಿನ ದುಮ್ಮಳ್ಳಿ ಗ್ರಾಮದಲ್ಲಿ ನಡೆದ ಗೃಹಿಣಿಯೊಬ್ಬರ ಕೊಲೆ (Murder Case) ಪ್ರಕರಣ ತಿರುವು ಪಡೆದುಕೊಂಡಿದೆ. ಕಳೆದ ಶನಿವಾರ (ನ.5) ಪ್ರಕಾಶ್‌ ಎಂಬಾತ ತನ್ನ ಪತ್ನಿ ಶೋಭಾಳನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದ. ಈಗ ಈ ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.

ಆರೋಪಿ ಪ್ರಕಾಶ್‌ ಮತ್ತು ಮೃತ ಶೋಭಾ

ಶನಿವಾರ ಬೆಳಗ್ಗೆ 8.30ರ ಸಮಯದಲ್ಲಿ ಮನೆಗೆ ಬಂದಿದ್ದ ಶೋಭಾ ಅವರನ್ನು ಪ್ರಕಾಶ್ ಖಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆ ಕೊಯ್ದು, ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಬಗ್ಗೆ ಮಗಳು ಮಹಾಲಕ್ಷ್ಮಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತಾಯಿಯ ಕೊಲೆಯಾಗಿದೆ ಎಂದು ಪುತ್ರಿ ದೂರಿನಲ್ಲಿ ದಾಖಲಿಸಿದ್ದಾರೆ.

೨೫ ವರ್ಷಕ್ಕಿಂತಲೂ ಮೊದಲು ಮದುವೆಯಾಗಿದ್ದ ಶೋಭಾ ಮತ್ತು ಪ್ರಕಾಶ್ 2008ರವರೆಗೂ ಜತೆಯಾಗಿದ್ದರು. ಬಳಿಕ ವೈಮನಸ್ಸಿನಿಂದಾಗಿ ಅಕ್ಕಪಕ್ಕದ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪ್ರತ್ಯೇಕವಾಗಿ ವಾಸಿಸುವ ಮುಂಚೆಯೂ ಹಾಗೂ ತದನಂತರ ಶೋಭಾರಿಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪ್ರಕಾಶ್ ಜಗಳವಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಶನಿವಾರ ಬೆಳಗ್ಗೆ ಮನೆಗೆ ಬಂದ ಶೋಭಾಳ ಜತೆ ಜಗಳವಾಡಿದ ಪ್ರಕಾಶ್ ಕಾರದ ಪುಡಿ ಎರಚಿ ಚಾಕು, ಕಬ್ಬಿಣದ ರಾಡಿನ ಮೂಲಕ ದಾಳಿ ನಡೆಸಿ ಕೊಲೆ ಮಾಡಿರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ತಾಯಿಯ ಅನೈತಿಕ ಸಂಬಂಧದಿಂದ ಅಪ್ಪ ಕೆರಳಿ ಕೊಲೆ ಮಾಡಿದ್ದಾರೆ ಎಂದು ಮಹಾಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.

ಮಗಳ ಮದುವೆಗೂ ಅಡ್ಡಿಯಾಗಿದ್ದರು
ಈ ನಡುವೆ ಶೋಭಾ ಅವರು ಮಗಳು ಮಹಾಲಕ್ಷ್ಮಿಯ ಮದುವೆಗೂ ಅಡ್ಡಿಯಾಗಿದ್ದರು ಎಂದು ಹೇಳಲಾಗಿದೆ. ಮಹಾಲಕ್ಷ್ಮಿ 2014ರಲ್ಲಿ ಮಂಡ್ಯ ಜಿಲ್ಲೆಯ ಹುಡುಗ ಕಿರಣ್‌ನನ್ನು ಪ್ರೀತಿಸುತ್ತಿದ್ದರು. ಶೋಭಾರವರು ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದರಿಂದ ಪುತ್ರಿಗೆ ತಾಯಿಯ ತವರು ಊರಿನ ಹುಡುಗನ ಮೇಲೆ ಪ್ರೀತಿ ಬೆಳೆದಿತ್ತು. ಈ ಪ್ರೀತಿ ಶೋಭಾರಿಗೆ ಇಷ್ಟವಿರಲಿಲ್ಲ. ಆದರೆ, ತಂದೆಯನ್ನ ಒಪ್ಪಿಸಿ ಮಹಾಲಕ್ಷ್ಮೀ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದರು.

ಇದನ್ನೂ ಓದಿ | Gandhada gudi | ಶಿವಮೊಗ್ಗದಲ್ಲಿ ಗಂಧದ ಗುಡಿ ವೀಕ್ಷಿಸಿದ ಬಿಎಸ್‌ವೈ: ಮಗುವಿಗೆ ಶೇಕ್‌ಹ್ಯಾಂಡ್‌, ಸೆಲ್ಫಿಗೆ ಮುತ್ತಿಗೆ!

Exit mobile version