ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ (Murder case) ನಡೆಸಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ಸಂಜೆ ವೇಳೆ ಬೆಳಕಿಗೆ ಬಂದಿದೆ. ದೆಹಲಿ ಮೂಲದ 35-40ರ ಹರೆಯದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಈಕೆ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದು ಅವನೇ ಕೊಂದು ಓಡಿಹೋಗಿರಬಹುದು ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಪಡೆದಿತ್ತು. ಹಮೀದ್ ಎಂಬವರ ಬಾಡಿಗೆ ಮನೆಯನ್ನು ಇವರು ಗೊತ್ತು ಮಾಡಿಕೊಂಡಿದ್ದರು.
ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದು, ಇನ್ನೇನು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿ ಮನೆಯಲ್ಲಿದ್ದರು.
ಗುರುವಾರ ಸಂಜೆಯಾದರು ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಸ್ಥಳೀಯರು ಗಮನಿಸಿ ಮನೆಯನ್ನು ಪರಿಶೀಲಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ದಿಲ್ಲಿಯಿಂದ ಇಲ್ಲಿಗೆ ಯಾಕೆ ಬಂದರು, ಅವರು ನಿಜಕ್ಕೂ ಗಂಡ-ಹೆಂಡತಿಯಾ? ಇಲ್ಲಿ ಕೊಲೆ ಮಾಡಿದ್ದು ಯಾಕೆ? ಆರೋಪಿ ಎಲ್ಲಿ ಹೋಗಿದ್ದಾನೆ ಎಂಬ ಹಲವು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಳ್ಳಬೇಕಾಗಿದೆ. ಇದೀಗ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಂದೆಯಿಂದಲೇ ಮಗಳ ಕೊಲೆ; ಮದುವೆಯಾದರೂ ತವರು ಮನೆಯಲ್ಲಿದ್ದು ಕಿರುಕುಳ ಕೊಡುತ್ತಿದ್ದಳೇ?
ಬೆಂಗಳೂರು: ನಗರದ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ನಲ್ಲಿ ತಂದೆಯೇ ಮಗಳನ್ನು ಹೊಡೆದು ಕೊಂದಿದ್ದಾನೆ. ರಮೇಶ್ (60) ಎಂಬಾತ ತನ್ನ ಮಗಳಾದ ಆಶಾ (32)ಳನ್ನು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಮಗಳಿಗೆ ಮದುವೆಯಾಗಿದ್ದರೂ ತವರಲ್ಲೇ ಬಂದು ಇದ್ದಳು. ಈ ವೇಳೆ ತಂದೆಯ ಜತೆ ಆಕೆಗೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಮೇಶ್ ಎಂಬವರ ಮಗಳಾದ ಆಶಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಅದರೆ, ಗಂಡನಿಂದ ದೂರವಾಗಿದ್ದ ಆಕೆ ತವರು ಮನೆಯಲ್ಲೇ ಬಂದು ಉಳಿದುಕೊಂಡಿದ್ದಳು.
ಈ ನಡುವೆ, ಆಕೆ ತಂದೆ ಮನೆಯಲ್ಲೇ ಕಾರುಬಾರು ಮಾಡಲು ಶುರು ಮಾಡಿದ್ದಳು. ಮನೆಯವರ ಮೇಲೆ ದಬ್ಬಾಳಿಕೆ ಮಾಡುತ್ತಾ ತಂದೆ, ತಾಯಿ, ತಂಗಿಗೆ ಕುರುಕುಳ ನೀಡುತ್ತಿದ್ದಳೆಂದು ಹೇಳಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಮನೆಯಲ್ಲಿ ಜಗಳವಾಗಿದೆ. ಹಿಂದಿನ ಸಿಟ್ಟೆಲ್ಲ ಇದ್ದಿದ್ದರಿಂದ ತಂದೆ ರಮೇಶ್ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ದೊಣ್ಣೆಯ ಹೊಡೆತಕ್ಕೆ ಆಶಾ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ತಂದೆ ರಮೇಶ್ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಇದನ್ನೂ ಓದಿ ಡ್ರಮ್ನಲ್ಲಿ ಶವ ಪತ್ತೆ ರಹಸ್ಯ ಬಯಲು : ಕುಟುಂಬವನ್ನೇ ಹಾಳು ಮಾಡಿದಳೆಂಬ ಸಿಟ್ಟಿನಲ್ಲಿ ನಡೆಯಿತೇ ತಮನ್ನಾ ಕೊಲೆ?