Site icon Vistara News

Murder Case : ಕತ್ತು, ಎದೆಗೆ ಇರಿದು ಯುವಕನ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು!

Murder Case

ಹುಬ್ಬಳ್ಳಿ: ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಅಪರಿಚಿತ ಯುವಕನೊಬ್ಬ ಕೊಲೆಯಾದ (Murder Case) ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ. ಹುಬ್ಬಳ್ಳಿ- ಶಿವಳ್ಳಿ ರಸ್ತೆಯಲ್ಲಿರುವ ಬ್ರಿಜ್ ಕೆಳಗೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿ ಹೋಗಿದ್ದಾರೆ.

ಹತ್ಯೆಯಾದವನ ಗುರುತು ಪತ್ತೆಯಾಗಿಲ್ಲ. ಸುಮಾರು 30ರ ಅಸುಪಾಸಿನ ವ್ಯಕ್ತಿಯ ಕತ್ತು‌ ಕೂಯ್ದು ಹಾಗೂ ಎದೆಗೆ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಶಿವಳ್ಳಿ ರಸ್ತೆಯ ಬ್ರಿಜ್‌ ಕೆಳಗೆ ಬಿಸಾಕಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಆ ಮಾರ್ಗವಾಗಿ ಬರುತ್ತಿದ್ದವರು ಇದನ್ನೂ ಗಮನಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ.

ಕೊಲೆಯಾದವನ ಗುರುತು ಪತ್ತೆ ಹಚ್ಚಲು ಹಾಗೂ ಆರೋಪಿಗಳಿಗೆ ಹುಡುಕಾಟವನ್ನು ಪೊಲೀಸರು ಮುಂದುವರಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಹುಬ್ಬಳ್ಳಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಜತೆಗೆ ಸುತ್ತಮುತ್ತಲ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: DK Shivakumar : ಬೆಂಗಳೂರಿಗರಿಗೆ ಯಾವುದೇ ಕಾರಣಕ್ಕೂ ಭೂಮಿ ಮಾರಬೇಡಿ ಎಂದ ಡಿಕೆಶಿ!

ಅತ್ತಿಗೆಯೊಂದಿಗೆ ಸರಸ; ಅಡ್ಡಿಯಾಗಿದ್ದ ಅಣ್ಣನನ್ನೇ ಕೊಂದ ತಮ್ಮ!

ದೊಡ್ಡಬಳ್ಳಾಪುರ: ಅತ್ತಿಗೆ ದೇವರ ಸಮಾನ ಅಂತಾರೆ. ಆದರೆ ಇಲ್ಲೊಬ್ಬ ಅತ್ತಿಗೆ ಜತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳದಲ್ಲಿ ತಮ್ಮನಿಂದಲೇ ಅಣ್ಣನೊಬ್ಬ ಕೊಲೆಯಾಗಿ (Murder Case) ಹೋಗಿದ್ದಾನೆ. ಗಂಗರಾಜು (35) ಹತ್ಯೆಯಾದ ದುರ್ದೈವಿ.

ಮಲಗಿದ್ದ ಗಂಗರಾಜು ತಲೆ ಮೇಲೆ‌ ಕಲ್ಲು ಎತ್ತುಹಾಕಿ ತಮ್ಮ ರವಿ ಮತ್ತು ಅತ್ತಿಗೆ ಭಾಗ್ಯಮ್ಮ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕಳೆದ 5 ವರ್ಷಗಳ ಹಿಂದೆ ತಮ್ಮ ರವಿ ಅತ್ತಿಗೆ ಭಾಗ್ಯಮ್ಮಳೊಂದಿಗೆ ಅಕ್ರಮ ಸಂಬಂಧ (illicit relationship) ಹೊಂದಿದ್ದ. ಈ ವಿಷಯ ತಿಳಿದ ಗಂಗರಾಜು ತನ್ನ ಮೂರು ಮಕ್ಕಳನ್ನು ಅನಾಥಾಶ್ರಮಕ್ಕೆ ಬಿಟ್ಟಿದ್ದ.

ಕಳೆದ 15 ದಿನಗಳ ಹಿಂದೆ ಪತ್ನಿ ಭಾಗ್ಯಮ್ಮ ಮತ್ತು ತಮ್ಮ ರವಿಯೊಂದಿಗೆ ಗಂಗರಾಜು ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಮೂವರು ಹೊಡೆದಾಡಿಕೊಂಡಿದ್ದರು. ಬಳಿಕ ಸಿಟ್ಟಿಗೆದ್ದ ರವಿ ಸೋಮವಾರ ರಾತ್ರಿ ಬಂದು ಗಂಗರಾಜು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎನ್ನಲಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version