ಚಿತ್ರದುರ್ಗ: ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲಿನ ಪೋಕ್ಸೋ ಕೇಸ್ ಹಿನ್ನೆಲೆಯಲ್ಲಿ ಪೊಲೀಸರು ಮಠಕ್ಕೆ ಆಗಮಿಸಿದ್ದಾರೆ. ಮುರುಘಾಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿದ ಮಾಹಿತಿ ಹಿನ್ನೆಲೆಯಲ್ಲಿ ಮಠಕ್ಕೆ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಕ್ಕಳ ಆಯೋಗ ಭೇಟಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿಚಾರಣೆಗೆಂದು ಚಿತ್ರದುರ್ಗಕ್ಕೆ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರು, ಸದಸ್ಯರು ಇಂದು ಭೇಟಿ ನೀಡಲಿದ್ದಾರೆ. ಸೋಮವಾರ 11 ಗಂಟೆಗೆ ಸುಮಾರಿಗೆ ಬಾಲಕಿಯರ ಹಾಸ್ಟೆಲ್ ಬಾಲವನಕ್ಕೆ ಆಯೋಗದ ಅಧ್ಯಕ್ಷರು ಆಗಮಿಸಿ ಸಂತ್ರಸ್ತ ಬಾಲಕಿಯರ ಬಳಿ ಮಾಹಿತಿ ಪಡೆಯಲಿದ್ದಾರೆ. ಮಾಹಿತಿ ಪಡೆದ ಬಳಿಕ ಸ್ಥಳ ಮಹಜರಿಗೆ ಆಯೋಗ ಮತ್ತು ಬಾಲಕಿಯರು ಹೋಗಲಿದ್ದಾರೆ. ಮಧ್ಯಾಹ್ನ 12 ಗಂಟೆ ಒಳಗೆ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ಯಲಿದ್ದಾರೆ.
ಪೊಲೀಸ್ ಸರ್ಪಗಾವಲಿನಲ್ಲಿ ಮುರುಘಾ ಮಠದಲ್ಲಿ ಸ್ಥಳ ಮಹಜರು ನಡೆಯಲಿದೆ. ಕೃತ್ಯದ ಸ್ಥಳ ಮಹಜರ್ ಬಳಿಕ ನ್ಯಾಯಾಲಯದ ಮುಂದೆ ಬಾಲಕಿಯರನ್ನು ಹಾಜರು ಮಾಡಲಿದ್ದಾರೆ. ಸಂಜೆ 6 ಗಂಟೆವರೆಗೂ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಅವಕಾಶವಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಇಂದೇನಾಗುತ್ತೆ?