ಚಿತ್ರದುರ್ಗ: ಮುರುಘಾ ಮಠದ ಶ್ರೀಗಳು ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ ಬಳಿಕ ಆಗಿರುವ ಹತ್ತು ಹಲವು ಬೆಳವಣಿಗೆ ಕುರಿತ ವರದಿ ರಾಜ್ಯ ಸರ್ಕಾರದ ಕೈ ಸೇರಿದ್ದು, ಮಠದ ಆಡಳಿತದ ಭವಿಷ್ಯ ಇದೀಗ ರಾಜ್ಯ ಸರ್ಕಾರದ ಕೈಯಲ್ಲಿದೆ.
ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಿಸಬೇಕೆಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾಡಳಿಕ್ಕೆ ಮಠದ ಬಗ್ಗೆ ಬರದಿ ಕೇಳಿತ್ತು. ವರದಿ ಕೈ ಸೇರಿದ ಬಳಿಕ ನ್ಯಾಯಸಮ್ಮತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೊಸದುರ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದೀಗ ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯ ಪ್ರಭು 70 ಪುಟಗಳ ಸಂಪೂರ್ಣ ವರದಿ ಸಿದ್ಧಪಡಿಸಿದ್ದು, ಇದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕೈ ಸೇರಿದೆ.
ಮುರುಘಾ ಮಠದ ಟ್ರಸ್ಟ್ ಆಡಳಿತ, ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಹಾಗೂ ವಿದ್ಯಾಪೀಠದ ಅಧೀನದಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ನಿರ್ವಹಣೆ, ನಿರ್ವಹಣೆ, ಹಣಕಾಸು ವಹಿವಾಟು, ಮಠದ ಆಸ್ತಿ, ಬೃಹತ್ ಅನುಭವ ಮಂಟಪ, ಮುರುಘಾ ವನ, ಮ್ಯೂಸಿಯಂ, ಚಿನ್ನಾಭರಣಗಳ ದೇಖರೇಖೆ, ಬಸವೇಶ್ವರ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳ ಆಗುಹೋಗು, ಬಸವ ಪುತ್ಥಳಿ ನಿರ್ಮಾಣ, ಮಠಕ್ಕೆ ಬಿಡುಗಡೆ ಆದ ಅನುದಾನ ಸೇರಿದಂತೆ ಹಲವು ವಿಚಾರಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | ಮುರುಘಾಮಠ ಕಳವು ಪ್ರಕರಣ, ಬಸವರಾಜನ್ ಪೊಲೀಸ್ ವಶಕ್ಕೆ