Site icon Vistara News

Murugha seer Case| ಶ್ರೀಗಳ ವಿರುದ್ಧ ಪಿತೂರಿ ಮಾಡಿದ ಎಸ್‌.ಕೆ. ಬಸವರಾಜನ್‌, ಬಸವರಾಜೇಂದ್ರ ಜೈಲಿಗೆ

Basavarajan

ಚಿತ್ರದುರ್ಗ: ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಪಿತೂರಿ ಮಾಡಿದ ಮತ್ತು ಮಠದಲ್ಲಿದ್ದ ಭಾವಚಿತ್ರಗಳನ್ನು ಕದ್ದೊಯ್ದ ಆರೋಪದಲ್ಲಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಹಾಗೂ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರನ ನ್ಯಾಯಾಂಗ ಬಂಧನವನ್ನು ಇನ್ನೂ ೧೪ ದಿನ ವಿಸ್ತರಿಸಿ ಮರಳಿ ಜೈಲಿಗೆ ಕಳುಹಿಸಲಾಗಿದೆ.

ಮುರುಘಾ ಶ್ರೀಗಳು ಮತ್ತು ಎಸ್‌.ಕೆ ಬಸವರಾಜನ್‌ ಅವರು ಬದ್ಧ ವೈರಿಗಳಂತಿದ್ದು, ಎಸ್‌ಕೆ ಬಸವರಾಜನ್‌ ಪಿತೂರಿಯಿಂದಲೇ ಶೀಗಳಿಗೆ ಈ ರೀತಿಯ ಪರಿಸ್ಥಿತಿ ಎದುರಾಗಿದೆ ಎಂದು ಭಕ್ತರು ಆರಂಭದಿಂದಲೂ ಆರೋಪಿಸುತ್ತಿದ್ದರು. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ ಎಂದು ಆರೋಪಿಸಿದ್ದ ಇಬ್ಬರು ಬಾಲಕಿಯರು ಮಠದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಹೋಗಿದ್ದಾಗ ಅವರನ್ನು ಮರಳಿ ಕರೆದುಕೊಂಡು ಹೋದವರು ಎಸ್‌.ಕೆ. ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ. ಅದಾಗಿ ಕೆಲವು ದಿನಗಳಲ್ಲೇ ಶ್ರೀಗಳ ಮೇಲೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಅದೇ ಎಸ್‌.ಕೆ. ಬಸವರಾಜನ್‌ ಅವರು ಇನ್ನಷ್ಟು ವಿದ್ಯಾರ್ಥಿನಿಯರ ಮೂಲಕ ಶ್ರೀಗಳ ವಿರುದ್ಧ ದೂರು ಕೊಡಿಸಲು ಹುನ್ನಾರ ನಡೆಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಮಠದ ಶಿಕ್ಷಕನಾಗಿದ್ದ ಬಸವರಾಜೇಂದ್ರ ಬಾಲಕಿಯೊಬ್ಬಳಿಗೆ ಫೋನ್‌ ಮಾಡಿ ದೂರು ನೀಡಲು ಮನವೊಲಿಸುತ್ತಿರುವ, ಆಮಿಷ ಒಡ್ಡುತ್ತಿರುವ, ಆ ಬಾಲಕಿ ಮಾತ್ರ ಯಾವುದಕ್ಕೂ ಜಗ್ಗದೆ ಇದ್ದ ಒಂದು ಆಡಿಯೊ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಬಸವ ರಾಜೇಂದ್ರನನ್ನು ಬಂಧಿಸಿದಾಗ ಈ ಪಿತೂರಿಯ ಹಿಂದೆ ಬಸವರಾಜನ್‌ ಇರುವುದು ಬಯಲಾಗಿತ್ತು. ಇದರ ಜತೆಗೆ ಮಠದಲ್ಲಿದ್ದ ಕೆಲವೊಂದು ಭಾವಚಿತ್ರಗಳನ್ನು ಕಳವು ಮಾಡಿದವರನ್ನು ಬಂಧಿಸಿದಾಗ ಅವರು ಕೂಡಾ ಬಸವರಾಜನ್‌ ಹೆಸರು ಹೇಳಿದ್ದರು.

ಹೀಗೆ ಎರಡೂ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಬಸವರಾಜನ್‌ನನ್ನು ಕಳೆದ ನವೆಂಬರ್‌ ೯ರಂದು ರಾತ್ರಿ ಬಂಧಿಸಲಾಗಿತ್ತು. ಮತ್ತು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿತ್ತು. ಸೋಮವಾರಕ್ಕೆ ಆತನ ಪೊಲೀಸ್‌ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು, 1ನೇ ಹೆಚ್ಚುವರಿ ಜೆಎಂಎಫ್ ಸಿ ಕೋರ್ಟ್ ಎದುರು ಹಾಜರು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಆತನಿಗೆ ಜಾಮೀನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಯಿತಾದರೂ ಕೋರ್ಟ್‌ ಜಾಮೀನು ನಿರಾಕರಿಸಿದೆ ನವೆಂಬರ್‌ ೨೮ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಬಸವರಾಜನ್‌ ಮತ್ತು ಬಸವ ರಾಜೇಂದ್ರ ಅವರನ್ನು ಜೈಲಿಗೆ ಕಳುಹಿಸಲಾಗಿದೆ.

ಮುರುಘಾ ಶ್ರೀ ಟೀಮ್‌ನ ನ್ಯಾಯಾಂಗ ಬಂಧನ ವಿಸ್ತರಣೆ
ಈ ನಡುವೆ ಪ್ರಧಾನ ಪ್ರಕರಣದ ಪ್ರಮುಖ ಆರೋಪಿಗಳಾದ ಮುರುಘಾ ಶ್ರೀ, ವಾರ್ಡನ್‌ ರಶ್ಮಿ, ಮಠದ ಮ್ಯಾನೇಜರ್‌ ಪರಮಶಿವಯ್ಯ ಅವರನ್ನು ನ್ಯಾಯಾಂಗ ಬಂಧನ ಅವಧಿ ನವೆಂಬರ್‌ ೧೪ಕ್ಕೆ ಕೊನೆಗೊಂಡಿದ್ದು, ಅವರನ್ನೂ ಸೋಮವಾರ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇವರೆಲ್ಲರ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್‌ ೨೧ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ | Murugha Seer | ಮುರುಘಾಶ್ರೀ ವಿರುದ್ಧ ಸುಳ್ಳು ದೂರಿಗೆ ಪಿತೂರಿ; ಮಠದ ಅಡುಗೆ ಸಹಾಯಕಿ ಬಂಧನ

Exit mobile version