Site icon Vistara News

ಮುರುಘಾಶ್ರೀ ಪ್ರಕರಣ | ಇಂದು ಬಾಲಕಿಯರು ಕೋರ್ಟ್‌ ಮುಂದೆ

murugha swamiji 2

ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ದಾಖಲಾಗಿರುಬ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ, ಇಂದು ನ್ಯಾಯಾಲಯದ ಮುಂದೆ ಸಂತ್ರಸ್ತ ಬಾಲಕಿಯರು ಹಾಜರಾಗಿ ಹೇಳಿಕೆ ನೀಡಲಿದ್ದಾರೆ.

11 ಗಂಟೆ ಸುಮಾರಿಗೆ ನ್ಯಾಯಾಲಯದ ಮುಂದೆ ಬಾಲಕಿಯರನ್ನು ಹಾಜರುಪಡಿಸಲು ನಿರ್ದೇಶಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 164 ಅಡಿ ಇಬ್ಬರು ಸಂತ್ರಸ್ತ ಬಾಲಕಿಯರ ಹೇಳಿಕೆ ಪ್ರತ್ಯೇಕವಾಗಿ ದಾಖಲಾಗಲಿದ್ದು, ಈ ವೇಳೆ ಮಹಿಳಾ ನ್ಯಾಯಾಧೀಶೆ, ಮಹಿಳಾ ಸಿಬ್ಬಂದಿ ಮಾತ್ರ ಇರಲಿದ್ದಾರೆ. ಸೆ.164 ಹೇಳಿಕೆಯ ನಂತರ ಪ್ರಕರಣದ ವಿಚಾರಣೆ ಹಾದಿಯನ್ನು ನ್ಯಾಯಾಲಯ ನಿರ್ಧರಿಸಲಿದೆ.

ಮಠದಲ್ಲಿ ಸ್ಥಳ ಮಹಜರು ನಿನ್ನೆ ಸಂಜೆ ಮುಕ್ತಾಯಗೊಂಡಿತ್ತು. ಸಿಆರ್‌ಪಿಸಿ ಸೆಕ್ಷನ್ 161 ಪ್ರಕಾರ ಪೊಲೀಸರ ಮುಂದೆ ಬಾಲಕಿಯರು ನೀಡಿದ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಬಾಲಕಿಯರ ವೈದ್ಯಕೀಯ ಪರೀಕ್ಷೆ ವರದಿ ಇನ್ನೂ ಪೊಲೀಸರ ಕೈಗೆ ಸೇರಿಲ್ಲ.

ಇದನ್ನೂ ಓದಿ | ಮುರುಘಾಶ್ರೀ ಕೇಸ್ | ಮಹಜರು ಅಂತ್ಯ, ನಾಳೆ ಹೇಳಿಕೆ ದಾಖಲು ಸಾಧ್ಯತೆ, ಬಳಿಕ ಮುಂದಿನ ನಡೆ

Exit mobile version