Site icon Vistara News

ಮುರುಘಾ ಶ್ರೀ ಪ್ರಕರಣ | ಶ್ರೀಗಳ ಬಂಧನ ಆಗ್ರಹಿಸಿ ದಲಿತ ಮುಖಂಡರಿಂದ ಪ್ರತಿಭಟನೆ

murugha sree prathibhatane

ಚಿತ್ರದುರ್ಗ: ಸಂಸ್ಥೆಯ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮತ್ತು ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಬ್ರಹನ್ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಬಂಧನಕ್ಕೆ ಆಗ್ರಹ ಕೇಳಿಬಂದಿದೆ.

ವಿದ್ಯಾರ್ಥಿನಿಯರಿಗೆ ಆಸರೆ ನೀಡಲಾಗಿರುವ ಇಲ್ಲಿನ ಬಾಲ ಮಂದಿರದ ಬಳಿ ಮಂಗಳವಾರ ಬೆಳಗ್ಗೆ ದಲಿತ ಯುವ ಮುಖಂಡರು ಪ್ರತಿಭಟನೆ ನಡೆಸಿ ಬಂಧನಕ್ಕೆ ಒತ್ತಾಯಿಸಿದರು.

ಸ್ವಾಮೀಜಿ ವಿರುದ್ಧ ಪೋಕ್ಸೊ ಜೊತೆ ಜಾತಿ ನಿಂದನೆ ಕೇಸ್ ಕೂಡ ದಾಖಲಾಗಿದೆ. ಆದರೂ ಸರಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಂಧಿಸುತ್ತಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಶ್ರೀಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದರು.

ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ ಕಾರ್ಯಕರ್ತರು, ಗೃಹ ಸಚಿವರು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ತಡರಾತ್ರಿ ನಡೆದ ಗುಪ್ತಸಭೆ
ಇತ್ತ ಬಾಲಮಂದಿರದಲ್ಲಿ ವಿದ್ಯಾರ್ಥಿನಿಯರಿಗೆ ಆಸರೆ ನೀಡಿ ಬಿಗಿಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದರೆ, ಅತ್ತ ಮುರುಘಾಮಠದಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೋಮವಾರ ಶ್ರೀಗಳು ಯಾರಿಗೂ ಮಾಹಿತಿ ನೀಡದೆ ಹೊರಹೋಗಿದ್ದರೆಂಬ ಹಿನ್ನೆಲೆಯಲ್ಲಿ ಅವರ ಎಲ್ಲ ಚಲನವಲನಗಳ ಮೇಲೆ ಕಣ್ಣಿಡಲು ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ, ಮಠದ ಸಲಹಾ ಸಮಿತಿ ಸದಸ್ಯರು, ಮಠದ ಭಕ್ತರು ಹಾಗೂ ನಾನಾ ಮಠಾಧೀಶರು ಭಾಗಿಯಾದ ವಿಶೇಷ ಸಭೆಯೊಂದು ತಡ ರಾತ್ರಿವರೆಗೂ ನಡೆದಿದೆ ಎಂದು ತಿಳಿದುಬಂದಿದೆ. ಪ್ರಕರಣದ ಮುಂದಿನ ನಡೆಯ ಬಗ್ಗೆ ಇಲ್ಲಿ ಚರ್ಚೆ ನಡೆಸಲಾಗಿದೆ.

ಒಂಟಿಯಾಗಿಯೇ ಇದ್ದ ಶರಣರು
ಮುರುಘಾಶ್ರೀಗಳು ಸೋಮವಾರ ರಾತ್ರಿ ತಮ್ಮ ಕೋಣೆಯಲ್ಲಿ ಒಂಟಿಯಾಗೇ ಕಳೆದರು. ಪೊಲೀಸರು ಅವರೊಂದಿಗೆ ಯಾರಾದರೂ ಇರಲಿ ಎಂದು ಸೂಚಿಸಿದರೂ ಸ್ವಾಮೀಜಿ ಒಪ್ಪಲಿಲ್ಲ. ಅವರು ಬೆಳಗ್ಗೆ ಎದ್ದು ಮಠದ ಆವರಣದಲ್ಲಿರುವ ತೋಟದಲ್ಲಿ ಒಂಟಿಯಾಗಿಯೇ ವಾಕಿಂಗ್‌ ನಡೆಸಿದರು.

Exit mobile version