Site icon Vistara News

ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲು ಕೋರ್ಟ್‌ ಅನುಮತಿ

Murugha Shri ಒಡನಾಡಿ ಸಂಸ್ಥೆ ಮಡಿಲು ಪುನರ್‌ ವಸತಿ ಕೇಂದ್ರ ಪೊಲೀಸರಿಂದ ನೋಟಿಸ್

ಚಿತ್ರದುರ್ಗ: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾಶರಣರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲು ಕೋರ್ಟ್‌ ಅನುಮತಿ ನೀಡಿದೆ.

ಸೆಪ್ಟೆಂಬರ್‌ ೧ರಂದು ಬಂಧಿತರಾದ ಶ್ರೀಗಳಿಗೆ ಸೆಪ್ಟೆಂಬರ್‌ ೨೭ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ಮಾಡಿದೆ. ಈ ನಡುವೆ, ಅವರಿಗೆ ಹೃದಯದ ಸಮಸ್ಯೆ ಇರುವುದರಿಂದ ಕೊರೊನರಿ ಆಂಜಿಯೊಗ್ರಾಮ್‌ ನಡೆಸಬೇಕಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲು ಅನುಮತಿ ನೀಡಬೇಕು ಎಂದು ಶ್ರೀಗಳ ಪರವಾಗಿ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಾಧೀಶರು ಈ ಮನವಿಯನ್ನು ಪರಿಗಣಿಸಿ ಶ್ರೀಗಳನ್ನು ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಲು ಅವಕಾಶ ನೀಡಿದ್ದಾರೆ.

ಇದೀಗ ಶ್ರೀಗಳನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಶಿವಮೊಗ್ಗ ಜೈಲಿನಲ್ಲಿ ಎಂಟ್ರಿ ಬಳಿಕ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಲಾಗುತ್ತದೆ.

ಸಂತ್ರಸ್ತ ಬಾಲಕಿಯ ವೈದ್ಯಕೀಯ ಪರೀಕ್ಷೆ
ಈ ನಡುವೆ, ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳ ವೈದ್ಯಕೀಯ ವೈದ್ಯಕೀಯ ಪರೀಕ್ಷೆ ಬುಧವಾರ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಇಬ್ಬರೂ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಬಾಲಕಿಯರಿಬ್ಬರೂ ನಿರಾಕರಿಸಿದ್ದರು. ಆದರೆ, ಬುಧವಾರ ಒಬ್ಬ ಬಾಲಕಿ ವೈದ್ಯಕೀಯ ಪರೀಕ್ಷೆಗೆ ಒಪ್ಪಿಗೆ ನೀಡಿದ ಬಳಿಕ ಆಕೆಯನ್ನು ಬಾಲ ಮಂದಿರದಿಂದ ಜಿಲ್ಲಾಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

Exit mobile version