Site icon Vistara News

ಮುರುಘಾಶ್ರೀ ಪ್ರಕರಣ | ಜೈಲಿನಲ್ಲಿ ಸೊಳ್ಳೆ ಕಾಟಕ್ಕೆ ಸ್ವಾಮೀಜಿ ಕಂಗಾಲು, ಇಂದು ಜಾಮೀನು ಅರ್ಜಿ ವಿಚಾರಣೆ

Murugha Shri ಒಡನಾಡಿ ಸಂಸ್ಥೆ ಮಡಿಲು ಪುನರ್‌ ವಸತಿ ಕೇಂದ್ರ ಪೊಲೀಸರಿಂದ ನೋಟಿಸ್

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಇಂದು ಬಧವಾರ (ಸೆ.7) ನಡೆಯಲಿದೆ. ಈ ನಡುವೆ, ಚಿತ್ರದುರ್ಗ ಜಿಲ್ಲಾ ಕಾರಾಗೃದಲ್ಲಿರುವ ಮುರುಘಾಶ್ರೀಗಳು ಅಲ್ಲಿನ ಸೊಳ್ಳೆ ಕಾಟಕ್ಕೆ ಹೈರಾಣಾಗಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆ ಇಂದು ಜಿಲ್ಲಾ 2ನೇ ಅಪರ ಮತ್ತು‌ ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ. 3ನೇ ಆರೋಪಿ ಪರಮಶಿವಯ್ಯ, 4ನೇ ಆರೋಪಿ ಮಠದ ಮರಿಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಇಂದು ವಿಚಾರಣೆ ನಡೆಯಲಿದೆ. 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 5ನೇ ಆರೋಪಿ ಗಂಗಾಧರಯ್ಯ ನಿನ್ನೆ ಡಿವೈಎಸ್ಪಿ ಅನಿಲ್ ಎದುರು ಶರಣಾಗಿದ್ದು, ಪೊಲೀಸರು ವಿಚಾರಣೆ ನಡೆಸಿ ಸಂಜೆ ವಾಪಸ್ ಕಳಿಸಿದ್ದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಇಂದು ಕೋರ್ಟ್‌ಗೆ ಹಾಜರಾಗಲಿದ್ದಾರೆ 2ನೇ ಆರೋಪಿ ರಶ್ಮಿ

ಈ ನಡುವೆ ಚಿತ್ರದುರ್ಗ ಜಿಲ್ಲಾ ಕಾರಾಗೃದಲ್ಲಿರುವ ಮುರುಘಾಶ್ರೀಗಳು ಅಲ್ಲಿನ ಸೊಳ್ಳೆ ಕಾಟದಿಂದ ಹೈರಾಣಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ರಾತ್ರಿ ನಾಲ್ಕಾರು ಬಾರಿ ಅವರು ಎದ್ದು ಕುಳಿತಿದ್ದರು ಎಂದು ತಿಳಿದುಬಂದಿದೆ.

Exit mobile version