Site icon Vistara News

ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ನಡೆದ ಉರುಸ್‌ ಆಚರಣೆ: ಪೊಲೀಸರಿಂದ ಬಿಗಿ ಭದ್ರತೆ

mandya urus celebration

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಮಂಗಳವಾರ ನಡೆದ ಉರುಸ್‌ ಆಚರಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನರು ಭಾಗಿಯಾದರು. ಜಾಮೀಯಾ ಮಸೀದಿಯಿಂದ ಗುಂಬಜ್​ವರೆಗೆ ಮೆರವಣಿಗೆ ನಡೆಯಿತು. ಮಕ್ಕಳು ಟಿಪ್ಪು ಸುಲ್ತಾನ್ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗಿಯಾದರು.

ಈ ಮೆರವಣಿಗೆಯಲ್ಲಿ 30 ರಿಂದ 40 ಸಾವಿರ ಮಂದಿಯನ್ನು ಸೇರಿಸಿ, ಸಮುದಾಯದ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ಬಿಗಿ ಭದ್ರತೆ ಕಲ್ಪಿಸಿದ್ದರು. ಸುಮಾರು 3-4 ಸಾವಿರ ಮಂದಿ ಸೇರಿ ವಿಜೃಂಭಣೆಯಿಂದಲೇ ಮೆರವಣಿಗೆಯನ್ನು ನಡೆಸಿದರು.

ಇದನ್ನು ಓದಿ| ಧರ್ಮ ಸಂಘರ್ಷಕ್ಕೆ ಕಾರಣವಾಗಲಿದೆಯೇ ಶ್ರೀರಂಗಪಟ್ಟಣ ಉರೂಸ್‌ ಮೆರವಣಿಗೆ

ಮೆರವಣಿಗೆಯಲ್ಲಿ ಟಿಪ್ಪುವಿನ ಭಾವಚಿತ್ರವಿರುವ ಬಾವುಟಗಳು ರಾರಾಜಿಸಿದ್ದು, ಧರ್ಮಗುರುಗಳು ತಲೆಯ ಮೇಲೆ ಗಂಧದ ಕಳಶ ಇಟ್ಟುಕೊಂಡು ಸಾಗಿದರು. ಇದರ ಜೊತೆಗೆ ತಮಟೆ, ಡೋಲು ಬಾರಿಸುತ್ತಾ ಮುಸಲ್ಮಾನ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸುಮಾರು ಒಂದು ಕಿಲೋಮೀಟರ್‌ ಉದ್ದವಿದ್ದ ಮೆರವಣಿಗೆ ಗುಂಬಜ್​ ತಲುಪಿದ ನಂತರ, ಟಿಪ್ಪು ಸಮಾಧಿಗೆ ಧರ್ಮಗುರುಗಳು ಗಂಧ ಲೇಪನ ಮಾಡಿದರು. ಮೆರವಣಿಗೆಯುದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಎಸ್​.ಪಿ ಯತೀಶ್ ಸ್ಥಳದಲ್ಲೆ ಇದ್ದು ಭದ್ರೆಯ ಮೇಲುಸ್ತುವಾರಿ ವಹಿಸಿದ್ದರು.

ಇದನ್ನು ಓದಿ| ಶ್ರೀರಂಗಪಟ್ಟಣದಲ್ಲಿ ಉರೂಸ್ ನಿಷೇಧಿಸುವಂತೆ ಭಜರಂಗದಳ ಒತ್ತಾಯ

Exit mobile version